ಮನೆಗೇ ಬರುತ್ತೆ ಶಬರಿಮಲೆ ಪ್ರಸಾದ: ಅಂಚೆ ಇಲಾಖೆಗೆ 20 ಸಾವಿರಕ್ಕೂ ಹೆಚ್ಚು ಆರ್ಡರ್!

Sabarimala 15 Jan 20
Published on

ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಶ್ರೀ ಶಬರಿಮಲೆ ದೇವಸ್ಥಾನ ದರ್ಶನ ಸಾಧ್ಯವಾಗದ ಭಕ್ತರಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಪ್ರಸಾದವನ್ನು ಅಂಚೆ ಮೂಲಕ ಮನೆಗೇ ಕಳುಹಿಸಿಕೊಡುವ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 20 ಸಾವಿರಕ್ಕೂ ಹೆಚ್ಚು ಆರ್ಡರ್ ಲಭಿಸಿದೆ.

ದೇಶದ ಯಾವುದೇ ಸ್ಥಳದಿಂದಲೂ ಅಂಚೆ ಮೂಲಕ ದೇವರ ಪ್ರಸಾದಕ್ಕೆ ಆರ್ಡರ್ ಮಾಡಬಹುದು. ಇದಕ್ಕೆ ಸಂಬಂಧಪಟ್ಟ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಿದಲ್ಲಿ ಸ್ಪೀಡ್‌ಪೋಸ್ಟ್ ಮೂಲಕ ಪ್ರಸಾದವನ್ನು ರವಾನಿಸಲಾಗುತ್ತದೆ ಎಂದು ಕೇರಳ ಪೋಸ್ಟಲ್ ಸರ್ಕಲ್‌ನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ವಿ. ರಾಜರಾಜನ್ ತಿಳಿಸಿದ್ದಾರೆ. ಇದನ್ನೂ ಓದಿರಿ ಜೆಡಿಎಸ್​ ಮನೆಗೆ ಬಂದ ಸಿ.ಎಂ.ಇಬ್ರಾಹಿಂ! ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ…

ತುಪ್ಪ, ಭಸ್ಮ, ಅರಿಶಿಣ, ಕುಂಕುಮ, ಅರವಣ ಒಳಗೊಂಡಂತೆ ವಿವಿಧ ಪದಾರ್ಥಗಳು ಪೊಟ್ಟಣದಲ್ಲಿ ಇರುತ್ತವೆ. ಪ್ರಸಾದ ಪೊಟ್ಟಣದ ಬೆಲೆ 450 ರೂ. ಆಗಿದ್ದು, ಒಂದು ಆರ್ಡರ್‌ನಲ್ಲಿ ಗರಿಷ್ಠ ಹತ್ತು ಪೊಟ್ಟಣಗಳನ್ನು ಸ್ಪೀಡ್‌ಪೋಸ್ಟ್‌ನಲ್ಲಿ ತರಿಸಿಕೊಳ್ಳಬಹುದು. ವಿವರಗಳಿಗೆ swamyprasadam@gmail.com ಅಥವಾ ದೂರವಾಣಿ ಸಂಖ್ಯೆ 8592859322, 04692601394 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net