ನಟನ ಜತೆ ಡೇಟಿಂಗ್​​​​ ಮಾಡಿದ್ದಕ್ಕೆ ಸಾಬಾ ಆಜಾದ್​​ಗೆ ಕೆಲಸ ಸಿಕ್ಕಿಲ್ವಂತೆ! ಕಾರಣ ಏನು ಗೊತ್ತಾ

Untitled-design-2024-06-15T191740.735
Published on

ಮುಂಬೈ: ಬಾಲಿವುಡ್ ಮತ್ತೊಂದು ಜೋಡಿ ಹೃತಿಕ್ ರೋಷನ್ ಮತ್ತು ಅವರ ಗೆಳತಿ ಸಾಬಾ ಆಜಾದ್, ಇವರಿಬ್ಬರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಸಬಾ ಅವರು ಹೃತಿಕ್ ಅವರ ಕುಟುಂಬದ ಕಾರ್ಯಕ್ರಮಗಳಿಗೆ ಹಲವು ಬಾರಿ ಹಾಜರಾಗಿದ್ದಾರೆ. ಅದರ ಫೋಟೋಗಳನ್ನು ಸ್ವತಃ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಾಸ್ತವವಾಗಿ, ಸಬಾ ಆಜಾದ್ ನಟಿಯಾಗಿರುವುದರ ಜತೆಗೆ ಅದ್ಭುತವಾದ ಧ್ವನಿ ಕಲಾವಿದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಪ್ರೇಮ ಜೀವನವು ಸಬಾ ಕೆಲಸದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ವಾಯ್ಸ್ ಓವರ್ ವರ್ಕ್ ಸಿಕ್ಕಿಲ್ಲ ಎಂದು ಸಾಬಾ ಆಜಾದ್ ಹೇಳಿದ್ದಾರೆ. ಅವರು ಶ್ರೀಮಂತ ಮತ್ತು ಯಶಸ್ವಿ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ಆಕೆಗೆ ಬಹುಶಃ ಕೆಲಸದ ಅಗತ್ಯವಿಲ್ಲ ಎಂದು ಜನರು ಹೇಗೆ ಭಾವಿಸುತ್ತಾರೆ ಎಂಬುದನ್ನು ಹೇಳಿದ್ದಾರೆ.

'ನಾವು ಇನ್ನೂ ಆ ಕತ್ತಲೆಯಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ನಾವು ಮಹಿಳೆಯ ಸಂಗಾತಿ ಯಶಸ್ವಿಯಾದರೆ, ಅವಳು ಕೆಲಸ ಮತ್ತು ಜೀವನಕ್ಕಾಗಿ ಯಾವುದೇ ವ್ಯವಸ್ಥೆಯನ್ನು ಮಾಡಬೇಕಾಗಿಲ್ಲ ಎಂದು ನಾವು ನಂಬಿದ್ದೇವೆಯೇ? ಜನರು ತಮ್ಮ ಕೆಲಸದ ಬಗ್ಗೆ ಹೆಮ್ಮೆಪಡಬಾರದು. ತಮ್ಮನ್ನು ಮತ್ತು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಬಾರದು ಎಂದು ಭಾವಿಸುತ್ತಾರೆ' ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಬಾ ಆಜಾದ್ ಅವರು ಹಂಚಿಕೊಂಡ ಮೊದಲ ಫೋಟೋದಲ್ಲಿ ಅವರು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿಂತಿದ್ದಾರೆ. ಅದನ್ನು ಹಂಚಿಕೊಳ್ಳುವಾಗ ಅವರು "2 ವರ್ಷಗಳ ನಂತರ ನಾನು ನನ್ನ ಹಳೆಯ ಅಭ್ಯಾಸಕ್ಕೆ ಮರಳಿದ್ದೇನೆ, ಧ್ವನಿ ರೆಕಾರ್ಡಿಂಗ್​​​​. ಇಷ್ಟು ದಿನ ಯಾಕೆ ಕೆಲಸ ಸಿಗಲಿಲ್ಲ. ಯಾವೆಲ್ಲಾ ಸಮಸ್ಯೆಗಳು ಎದುರಿಸಿದರು ಎಂಬುದನ್ನು ತಮ್ಮ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net