ಹೆಂಡದ ನಶೆ ಇಳಿಯುವ ಮುನ್ನ ಹೆಣವಾದ ವ್ಯಸನಿಗಳು! ತನಿಖೆಗೆ ಆದೇಶ

henda
Published on

ಬುಲಂದ್​​ಶೆಹರ್​ (ಉತ್ತರ ಪ್ರದೇಶ): ವಿಷಪೂರಿತವಾಗಿದ್ದ ಮದ್ಯವನ್ನು ಸೇವಿಸಿ, ಐದು ಮಂದಿ ಮೃತಪಟ್ಟು, ಹಲವಾರು ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರಪ್ರದೇಶದ ಬುಲಂದ್​​ಶೆಹರ್​ನಲ್ಲಿ ನಡೆದಿದೆ.

ಅಕ್ರಮ ಮದ್ಯ ಸೇವಿಸಿ ಇವರು ಮೃತಪಟ್ಟಿದ್ದಾರೆ. ಈ ಮದ್ಯವು ವಿಷಪೂರಿತವಾಗಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅಕ್ರಮ ಸೇವನೆ ಮಾಡಿ 5 ಮಂದಿ ಮೃತರಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವವರಿಗೆ ಚಿಕಿತ್ಸೆ ನೀಡುವುದು ನಮ್ಮ ಆದ್ಯತೆಯಾಗಿದೆ. 16 ಮಂದಿಗೆ ಡಯಾಲಿಸಿಸ್ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಹೊರಗಿನಿಂದ ಬಂದ ವ್ಯಕ್ತಿಯೊಬ್ಬ ಈ ಮದ್ಯವನ್ನು ಮಾರಾಟ ಮಾಡಿದ್ದಾನೆ. ಕಡಿಮೆ ಬೆಲೆಗೆ ಸಿಕ್ಕಿದೆ ಎಂದು ಅನೇಕ ಮಂದಿ ಇದನ್ನು ಸೇವಿಸಿದ್ದಾರೆ. ಇದು ವಿಷಪೂರಿತವಾಗಿದ್ದ ಹಿನ್ನೆಲೆಯಲ್ಲಿ ಸಾವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರವೀಂದ್ರಕುಮಾರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net