More

    ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ…

    ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ... ನಾನು ನನ್ನ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಪೂರ್ವ ಪತಿ ಅಪೀಲು ಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ.
    ಈಗ ನನಗೆ ಮತ್ತೊಬ್ಬರ ಜೊತೆ ಮದುವೆ ಆಗ ಬೇಕಿದೆ. ನಾನು ಎಷ್ಟು ದಿನ ಕಾಯ ಬೇಕು?

    ಉತ್ತರ:- ಹಿಂದೂ ವಿವಾಹ ಕಾಯ್ದೆಯ ಕಲಂ 15ರಂತೆ , ವಿಚ್ಛೇದನದ ಆದೇಶ ಆದ ನಂತರ , ಆ ಆದೇಶದ ಮೇಲೆ ಮೇಲ್ಮನವಿ (ಅಪೀಲ್​) ಹಾಕಲು ಇರುವ, ಅಪೀಲಿನ ಗಡುವು ತೀರುವವರೆಗೆ ನೀವು ಮರುಮದುವೆ ಆಗುವಂತಿಲ್ಲ.

    ಹಾಗೂ ಒಂದು ವೇಳೆ ನಿಮ್ಮ ಪೂರ್ವ ಪತಿ ಅಪೀಲು ದಾಖಲು ಮಾಡಿದರೆ, ಆ ಅಪೀಲು ವಜಾ ಆಗುವವರೆಗೆ ನೀವು
    ಮರುಮದುವೆ ಆಗುವಂತಿಲ್ಲ. ಒಂದುವೇಳೆ ನಿಮ್ಮ ಪತಿ ನಿಗದಿತ ಕಾಲಮಿತಿಯ ಒಳಗೆ ಅಪೀಲೇ ದಾಖಲು ಮಾಡದೇ ಇದ್ದರೆ, ಆಗ ನೀವು ಮರುಮದುವೆ ಆಗಬಹುದು.

    ಯಾವುದಕ್ಕೂ ನೀವು ನಿಮ್ಮ ವಿಚ್ಛೇದನದ ಪ್ರಕರಣದ ಸಂಖ್ಯೆಯನ್ನು ಹಾಕಿ, ಆ ಪ್ರಕರಣದ ಆದೇಶದ ಮೇಲೆ ಅಪೀಲು ದಾಖಲಾಗಿದೆಯೇ ಇಲ್ಲವೇ ಎನ್ನುವುದನ್ನು ಕಂಪ್ಯೂಟರಿನ ಸಹಾಯದಿಂದ ಪರೀಕ್ಷಿಸಿ , ಆ ನಂತರ ಮರುಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ.

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮದುವೆ ಸಾಕುಸಾಕಾಗಿದೆ, ಒಬ್ಬರ ಮೇಲೊಬ್ಬರಿಗೆ ಅಸಹ್ಯ ಹುಟ್ಟಿದೆ- ವಿಚ್ಛೇದನಕ್ಕೆ ಕಾಯಲೇಬೇಕಾ?

    ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?

    ಸಂಸಾರಕ್ಕೆ ಒಪ್ಪದಾಕೆಗೆ ಡಿವೋರ್ಸ್​ ಕೊಟ್ರೆ ಕೂಲಿ ಹಣದಲ್ಲೂ ಭಾಗ ಕೊಡ್ಬೇಕಾ? ಮನೆಯ ಪಾಲೂ ನೀಡ್ಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts