More

    ಹೃದಯಾಘಾತದಿಂದ ಶುರುವಾದ ಲವ್​ಸ್ಟೋರಿ; ವಿಚ್ಛೇದನವಾಗಿ 5 ವರ್ಷ ಆದಮೇಲೆ ಪುನಃ ಒಂದಾದ ಜೋಡಿ

    ಪ್ರಯಾಗ್​ರಾಜ್: ಸಂಸಾರ ಎಂಬ ನೌಕೆಯಲ್ಲಿ ಹೊಂದಾಣಿಕೆ ಬಹು ಮುಖ್ಯ ಪಾತ್ರ ವಹಿಸಲಿದ್ದು, ಸದಾ ಕಷ್ಟುಸುಖದಲ್ಲಿ ನಿಲ್ಲುವ ಸಂಗಾತಿಯನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಳ್ತಾರೆ. ಅನೇಕ ಬಾರಿ ಪರಸ್ಪರ ಅರ್ಥವಾಗದಿರುವುದೇ ದೂರವಾಗಲು ಕಾರಣವಾಗುತ್ತದೆ. ಈಗಿನ ದಿನಗಳಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿವಾಹೇತರ ಸಂಬಂಧ ಸೇರಿದಂತೆ ಇನ್ನಿತರ ಕಾರಣಗಳು ಡಿವೋರ್ಸ್​ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

    ವಿಚ್ಛೇದನ ಪಡೆದ ನಂತರ ಸಂಗಾತಿ ನಮ್ಮಿಂದ ದೂರವಾದ ಮೇಲೆ ಅವರಿರಬೇಕಿತ್ತು ಎಂಬ ಆಲೋಚನೆ ಒಮ್ಮೆಯಾದರೂ ನಮ್ಮ ತಲೆಗೆ ಬರುವುದು ಸಹಜ. ಅದೇ ರೀತಿ ಇದೀಗ ಘಟನೆಯೊಂದರಲ್ಲಿ ಐದು ವರ್ಷಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದ ವ್ಯಕ್ತಿಯೋರ್ವ ಆಕೆಯನ್ನು ಪುನಃ ವಿವಾಹವಾಗಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.

    2012ರಲ್ಲಿ ವಿನಯ್​ ಜೈಸ್ವಾಲ್​ ಎಂಬುವವರು ಪೂಜಾ ಚೌಧರಿ ಎಂಬುವವರನ್ನು ಮದುವೆಯಾಗಿದ್ದರು. ಆರು ವರ್ಷಗಳ ದಾಂಪತ್ಯದ ಬಳಿಕ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಶುರುವಾಗಿದ್ದು, 2018ರಲ್ಲಿ ವಿಚ್ಛೇದನ ಪಡೆದು ದೂರಾಗಿದ್ದರು. ಇಬ್ಬರ ದಾರಿಗಳೂ ಬೇರೆಯಾದ್ವು. ಐದು ವರ್ಷಗಳ ನಂತರ ಮತ್ತೆ ಒಂದಾಗಲು ನಿರ್ಧರಿಸಿ, ಮದುವೆಯಾಗಿದ್ದಾರೆ. 

    Re Union

    ಇದನ್ನೂ ಓದಿ: ಕಲ್ಯಾಣ ಮಂಟಪವಾಯ್ತು ಆಸ್ಪತ್ರೆ; ಡೆಂಘಿ ರೋಗಿಗೆ ಆಸ್ಪತ್ರೆಯಲ್ಲೇ ಮದುವೆ

    ಕೆಲ ದಿನಗಳ ಹಿಂದೆ ವಿನಯ್​ಗೆ ಹಾರ್ಟ್​ ಅಟ್ಯಾಕ್​ ಆಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಈ ವಿಚಾರವನ್ನು ತಿಳಿದ ಮಾಜಿ ಪತ್ನಿ ಪೂಜಾ ಆಸ್ಪತ್ರೆಗೆ ಭೇಟಿ ನೀಡಿ ವಿನಯ್​ ಆರೋಗ್ಯವನ್ನು ವಿಚಾರಿಸಿದ್ದರು ಮತ್ತು ವಿನಯ್​ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಅವರ ಜತೆಗಿದ್ದು, ಆರೈಕೆಯನ್ನು ಮಾಡಿದ್ದರು. ದಿನ ಕಳೆದಂತೆ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿದ್ದು, ಒಂದಾಗುವ ನಿರ್ಧಾರಕ್ಕೆ ಬಂದಿದ್ದಾರೆ. 

    ಈಗ ವಿನಯ್ ಮತ್ತು ಅವರ ಪತ್ನಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕುಟುಂಬ ಸಮಾರಂಭದಲ್ಲಿ ಔಪಚಾರಿಕ ಮದುವೆ ನಡೆದಿದೆ. ಮದುವೆ ನೋಂದಣಿ ಕೆಲಸ ಕೂಡ ಆಗಿದ್ದು, ವಿಚ್ಛೇದನದ ತೀರ್ಪನ್ನು ರದ್ದುಗೊಳಿಸಲಾಗಿದೆ. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದೇವೆ. ಒಬ್ಬರಿಲ್ಲದೆ ಇನ್ನೊಬ್ಬರಿರಲು ಸಾಧ್ಯವಿಲ್ಲ ಎನ್ನುವ ಸತ್ಯದ ಅರಿವಾಗಿದೆ ಎಂದು ವಿನಯ್ ಹೇಳಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts