More

    ಸಂಜೆ ಹೊರಕ್ಕೆ ಹೋಗದಿದ್ರೆ ರೇಪ್​ ಆಗ್ತಿರಲಿಲ್ಲ: ಮಹಿಳಾ ಆಯೋಗದ ಸದಸ್ಯೆ ಹೇಳಿಕೆಗೆ ಭುಗಿಲೆದ್ದ ಆಕ್ರೋಶ

    ಬದೌನ್ (ಉತ್ತರ ಪ್ರದೇಶ): ಕಾಮುಕರ ಅಟ್ಟಹಾಸಕ್ಕೆ, ಕ್ರೌರ್ಯಕ್ಕೆ ಕೊನೆಯೇ ಇಲ್ಲವೇನೋ ಎನ್ನುವಂಥ ಭಯಾನಕ ಘಟನೆ, ನಿರ್ಭಯಾ ಪ್ರಕರಣವನ್ನೇ ನೆನಪಿಸುವ ಘಟನೆ ಈಚೆಗೆ ಉತ್ತರ ಪ್ರದೇಶದ ಬದೌನ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಸದಸ್ಯೆ ಚಂದ್ರಕುಮಾರಿ ದೇವಿ ಹೇಳಿಕೆ ನೀಡಿದ್ದು, ಇದೀಗ ಭಾರಿ ವಿವಾದ ಸೃಷ್ಟಿಸಿದೆ.

    50 ವರ್ಷದ ಮಹಿಳೆಯೊಬ್ಬರ ಗುಪ್ತಾಂಗಕ್ಕೆ ರಾಡ್​ ಹಾಕಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅತ್ಯಂತ ಕ್ರೂರ ಘಟನೆ ಇಲ್ಲಿ ನಡೆದಿತ್ತು. ಮಹಿಳೆಯ ಶವವೊಂದು ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಈ ಭಯಾನಕ ಘಟನೆ ಬೆಳಕಿಗೆ ಬಂದಿತ್ತು.

    ಕಾಮುಕರು ಸಂತ್ರಸ್ತೆಯ ಶ್ವಾಸಕೋಶವನ್ನು ಹಾನಿಗೊಳಿಸಿದ್ದಾರೆ. ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದದ್ದಲ್ಲದೆ ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಹಾನಿಗೊಳಿಸಿರುವುದು ಮರಣೋತ್ತರ ವರದಿಯಲ್ಲಿ ಬೆಳಕಿಗೆ ಬಂದಿದೆ.

    ಸಂಜೆ ಹೊರಕ್ಕೆ ಹೋಗದಿದ್ರೆ ರೇಪ್​ ಆಗ್ತಿರಲಿಲ್ಲ: ಮಹಿಳಾ ಆಯೋಗದ ಸದಸ್ಯೆ ಹೇಳಿಕೆಗೆ ಭುಗಿಲೆದ್ದ ಆಕ್ರೋಶ

    ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಮಹಿಳಾ ಆಯೋಗದ ಸದಸ್ಯೆ ಚಂದ್ರಕುಮಾರಿ ದೇವಿ, ‘ಅತ್ಯಾಚಾರಕ್ಕೊಳಗಾದ ಮಹಿಳೆ ಸಂಜೆಯ ನಂತರ ಮನೆಯಿಂದ ಹೊರಗೆ ಹೋಗದೆಯೇ ಇದ್ದಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ. ಮಹಿಳೆಯರು ಸಮಯದ ಬಗ್ಗೆ ಸದಾ ಯೋಚನೆ ಮಾಡಬೇಕು. ಯಾರ ಒತ್ತಡ ಬಂದರೂ ತಡವಾದ ನಂತರ ಹೊರ ಹೋಗಬಾರದು, ಅತ್ಯಾಚಾರ ಸಂತ್ರಸ್ತೆ ಮನೆಯಿಂದ ಒಬ್ಬಂಟಿಯಾಗಿ ಸಂಜೆ ನಂತರ ಹೋಗದೇ ಇದ್ದಿದ್ದರೆ ಅಥವಾ ಕುಟುಂಬ ಸದಸ್ಯರ ಜೊತೆ ಹೋಗಿದ್ದಿದ್ದರೆ ಆಕೆಯನ್ನು ರಕ್ಷಿಸಬಹುದಾಗಿತ್ತು ಎಂದು ಹೇಳಿದ್ದಾರೆ.

    ಇದು ಹಲವಾರು ಮಹಿಳಾ ಸಮುದಾಯವನ್ನು ಕೆರಳಿಸಿದೆ. ಆಯೋಗದ ಸದಸ್ಯೆ ಚಂದ್ರಕುಮಾರಿ ದೇವಿ ಅವರ ಹೇಳಿಕೆಯಿಂದ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥರಾದ ರೇಖಾ ಶರ್ಮಾ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು, ಈ ರೀತಿ ಅವರು ಏಕೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದಷ್ಟೇ ಟ್ವೀಟ್ ಮಾಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

    ಐದು ಮಕ್ಕಳ ತಾಯಿಯಾಗಿದ್ದ ಸಂತ್ರಸ್ತೆ, ಸಂಜೆ 6 ಕ್ಕೆ ದೇವಾಲಯಕ್ಕೆ ತೆರಳಿದ್ದರು. ಮನೆಗೆ ವಾಪಸಾಗುತ್ತಿದ್ದ ವೇಳೆ ಅಪಹರಿಸಿ ಗ್ಯಾಂಗ್​ರೇಪ್ ಮಾಡಿ ಎಸೆದು ಹೋಗಿದ್ದರು. ರಾತ್ರಿ 11: 30 ರ ವೇಳೆಗೆ ಅವರ ಶವ ಪತ್ತೆಯಾಗಿತ್ತು. ಮಹಿಳೆ ತೀವ್ರ ರಕ್ತಸ್ರಾವ ಹಾಗೂ ತನ್ನ ಖಾಸಗಿ ಅಂಗಗಳಲ್ಲಿ ತೀವ್ರವಾದ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಮಹಿಳೆಯ ಮೇಲೆ ಭಾರವಾದ ವಸ್ತುವಿನಿಂದ ಹೊಡೆಯಲಾಗಿದೆ ಎಂದು ಮರಣೋತ್ತರ ವರದಿ ಉಲ್ಲೇಖಿಸಲಾಗಿದೆ.

    ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?

    VIDEO: ಅಯ್ಯೋ ಈ ಸಿಂಹ ನಿಮ್ಗೆ ಏನೂ ಮಾಡಲ್ಲ… ಹೆದರಿಕೊಳ್ಬೇಡಿ… ಅಂದ್ರೆ ನಂಬಿಬಿಡ್ತೀರಾ?

    ‘ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ?’

    ನಾನು ತುಂಬಾ ಒಳ್ಳೆಯವಳು ಮೇಡಂ… ಆದ್ರೆ ಎಲ್ಲಾ ತಪ್ಪಾಗಿ ಭಾವಿಸ್ತಾರೆ, ಏನ್​ ಮಾಡ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts