ಇಡ್ಲಿ ಪಾಲಿಟಿಕ್ಸ್‌! ಅಮೆರಿಕದ ಚುನಾವಣೆಯಲ್ಲಿ ಗೆಲ್ಲಲು ಭಾರತದ ಇಡ್ಲಿ ನೆನಪು...

kamala haris
Published on

ವಾಷಿಂಗ್ಟನ್: ಅಮೆರಿಕದಲ್ಲಿ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ಅಮೆರಿಕದಲ್ಲಿರುವ ಭಾರತೀಯ ಮತದಾರರನ್ನು ಓಲೈಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಲೇ ಇವೆ.

ಆಡಳಿತಾರೂಢ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇವರಿಬ್ಬರ ಟಾರ್ಗೆಟ್‌ ಸದ್ಯ ಅಲ್ಲಿಯ ಭಾರತೀಯರಾಗಿದ್ದಾರೆ.

ಆದ್ದರಿಂದ ಭಾರತೀಯ ಇಡ್ಲಿಯ ನೆನಪು ಮಾಡಿಕೊಂಡು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಪದವಿ ಅಭ್ಯರ್ಥಿ ಸೆನೆಟರ್ ಕಮಲಾ ಹ್ಯಾರಿಸ್ ಮತದಾರರ ಮನವನ್ನು ಗೆಲ್ಲಲು ಹವಣಿಸುತ್ತಿದ್ದಾರೆ. ಪಾಕಿಸ್ತಾನದ ಪರವಾಗಿ ಹಲವು ಕಡೆಗಳಲ್ಲಿ ಮಾತನಾಡಿ ಕೆಲವು ಭಾರತೀಯರ ವಿರೋಧ ಕಟ್ಟಿಕೊಂಡಿರುವ ಕಮಲಾ ಹ್ಯಾರೀಸ್‌, ಇದೀಗ ಭಾರತೀಯರ ಮತಗಳಿಸುವ ಸಲುವಾಗಿ ಭಾರತದ ಇಡ್ಲಿ ನೆನಪು ಮಾಡಿಕೊಂಡು ಭಾಷಣ ಮಾಡಿದ್ದಾರೆ.

ನಿನ್ನೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರೀಸ್‌, ನನಗೆ ಭಾರತವೆಂದರೆ ತುಂಬಾ ಇಷ್ಟ. ಭಾರತದ ಜತೆ ನಮ್ಮ ಕುಟುಂಬದ ಬಾಂಧವ್ಯ ಜೋರಾಗಿದೆ. ಭಾರತೀಯ ಮೂಲ ಪರಂಪರೆ ಬಗ್ಗೆ ಅಪಾರ ಗೌರವವಿದೆ ಎಂದರು.

ಇದೇ ಸಂದರ್ಭದಲ್ಲಿ ಇಲ್ಲಿಯ ಇಡ್ಲಿ ನೆನಪಿಸಿಕೊಂಡ ಕಮಲಾ, ಭಾರತದ ಇಡ್ಲಿ ತಿನ್ನಲು ತಮ್ಮ ತಾಯಿ ಒತ್ತಾಯ ಮಾಡುತ್ತಿದ್ದರೂ. ನಮ್ಮ ತಾಯಿಗೆ ಅಲ್ಲಿಯ ಇಡ್ಲಿ ಎಂದರೆ ತುಂಬಾ ಪ್ರೀತಿಯಾಗುತ್ತಿತ್ತು. ನಾನು ಭಾರತಕ್ಕೆ ಹೋದಾಗ ಇಡ್ಲಿ ತಿನ್ನುವುದಕ್ಕೆ ತಾಯಿ ಒತ್ತಾಯ ಮಾಡುತ್ತಿದ್ದರು. ಭಾರತದ ಇಡ್ಲಿಗೂ ನನಗೂ ತುಂಬಾ ಹತ್ತಿರದ ಬಾಂಧವ್ಯವಿದೆ ಎಂದು ಹೇಳಿದರು.

ನನ್ನ ತಾಯಿ ಶ್ಯಾಮಲಾ ಕ್ಯಾಲಿಫೋರ್ನಿಯಾಕ್ಕೆ ವಿಮಾನದಲ್ಲಿ ಬಂದಿಳಿದ್ದಾಗ ಅವರಿಗೆ 19 ವರ್ಷ ವಯಸ್ಸಾಗಿತ್ತು. ಆಗ ಅವರಲ್ಲಿ ಏನೂ ಇರಲಿಲ್ಲ. ಆದರೆ ಭಾರತದಲ್ಲಿ ತಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರಿಂದ ಕಲಿತ ಮೌಲ್ಯದ ಪಾಠಗಳಿದ್ದವು. ನನ್ನ ಅಜ್ಜಿ ರಾಜನ್ ಮತ್ತು ತಾತ ಪಿ ವಿ ಗೋಪಾಲನ್ ಅವರು ಮೌಲ್ಯ, ಸಂಸ್ಕೃತಿಯನ್ನು ನನ್ನ ತಾಯಿಗೆ ಕಲಿಸಿಕೊಟ್ಟಿದ್ದರು. ಪ್ರಪಂಚದಲ್ಲಿ ಅನ್ಯಾಯ ಕಂಡುಬಂದಾಗ ಅದರ ವಿರುದ್ಧ ಹೋರಾಡುವ ಮನಸ್ಥಿತಿ, ಕರ್ತವ್ಯ ಹೊಂದಿರಬೇಕು ಎಂದಿದ್ದರು. ಇದೇ ತಮಗೂ ಸ್ಫೂರ್ತಿಯಾಯಿತು ಎಂದರು.

55 ವರ್ಷದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಕಪ್ಪುವರ್ಣೀಯ ಮಹಿಳೆ. ಇವರು ತಮ್ಮ ತಾತನ ಜತೆ ಚೆನ್ನೈಗೆ ಹೋಗಿದ್ದರಂತೆ, ಈ ಕುರಿತು ಭಾಷಣದಲ್ಲಿ ನೆನಪು ಮಾಡಿಕೊಮಡ ಅವರು, ಭಾರತದ ಇತಿಹಾಸ, ಪ್ರಜಾಪ್ರಭುತ್ವ ಸ್ಥಾಪನೆ ಬಗ್ಗೆ ಹೇಳುತ್ತಿದ್ದುದನ್ನು ಸ್ಮರಿಸಿಕೊಂಡರು. ಜತೆಗೆ ಇಡ್ಲಿಯ ಕುರಿತು ಒತ್ತಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net