ಚುನಾವಣೆಯಲ್ಲಿ ಜಯಭೇರಿ, ಆದರೆ ಸಂತಸಪಡಲು ಅಭ್ಯರ್ಥಿಯೇ ಇಲ್ಲ!

election-death
Published on

ವಾಷಿಂಗ್ಟನ್: ಕೆಲವೊಮ್ಮೆ ವಿಧಿಯಾಟವೇ ವಿಚಿತ್ರವಾಗಿರುತ್ತದೆ. ಕೋವಿಡ್‌ಗೆ ಬಲಿಯಾದ ವ್ಯಕ್ತಿಯೊಬ್ಬರು ಅಮೆರಿಕದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ!

ಉತ್ತರ ಡಕೋಟಾದ 55 ವರ್ಷದ ರಿಪಬ್ಲಿಕನ್ ನಾಯಕ ಡೇವಿಡ್ ಆ್ಯಂಡಲ್‌ ತಿಂಗಳ ಹಿಂದೆ ಅಂದೆ ಅಕ್ಟೋಬರ್ 5 ರಂದು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೆ, ಉತ್ತರ ಡಕೋಟಾ ರಾಜ್ಯದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಉತ್ತರ ಡಕೋಟಾದ ಬಿಸ್ಮಾರ್ಕ್ ಪ್ರದೇಶದಲ್ಲಿ ರಿಪಬ್ಲಿಕನ್ ಪಕ್ಷದ ಡೇವಿಡ್ ಕಣಕ್ಕಿಳಿದಿದ್ದರು. ಇಲ್ಲಿಯ ನಿಯಮದಂತೆ ಪ್ರತಿ ಜಿಲ್ಲೆಯಲ್ಲಿ ಇಬ್ಬರು ಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡುತ್ತಾರೆ.

ಆ್ಯಂಡಲ್‌ ಪರವಾಗಿ ಶೇ 35ರಷ್ಟು ಮತ ಚಲಾಯಿಸಲಾಗಿದೆ. ಇದರಿಂದ ಅವರು ಗೆಲುವು ಸಾಧಿಸಿದ್ದಾರೆ. ಆ್ಯಂಡಲ್‌ ಈ ಕ್ಷೇತ್ರದ ಜನಪ್ರಿಯ ಶಾಸಕರಲ್ಲಿ ಒಬ್ಬರಾದ ರೆಫೆ ಜೆಫ್​ ಡೆಲ್‌ಝರ್‌ ಅವರನ್ನು ಸೋಲಿಸಿದ್ದಾರೆ. ಮೃತ ಡೇವಿಡ್ ಶೇಕಡಾ 35ರಷ್ಟು ಮತಗಳನ್ನು ಸಂಪಾದಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಂಡಲ್‌ ಅವರ ತಾಯಿ, ರೈತರು, ಕಲ್ಲಿದ್ದಲು ಉದ್ಯಮಕ್ಕೆ ಸಾಕಷ್ಟು ಸೇವೆ ಸಲ್ಲಿಸಬೇಕು ಎಂದು ಪುತ್ರ ಆಸೆ ಪಟ್ಟಿದ್ದ. ಆದರೆ ಈ ಸಂಭ್ರಮ ಸವಿಯಲು ಆತನೇ ಬದುಕಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ. ಉತ್ತರ ಡಕೋಟಾದಲ್ಲಿ ಈಗ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಕರೊನಾ ಹಾಟ್‌ಸ್ಪಾಟ್‌ ಎಂದೇ ಗುರುತಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net