More

    ಅಕ್ರಮ ಆಸ್ತಿ ವಿವಾದ: 3 ಕೇಸ್‌ ವಾಪಸ್‌ ಪಡೆದ ವಕೀಲ- ಬಿಎಸ್‌ವೈ ಫುಲ್‌ ಖುಷ್‌

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ವಿರುದ್ಧ ಕೇಸು ದಾಖಲು ಮಾಡಿದ್ದ ವಕೀಲರೊಬ್ಬರು ಈ ಕೇಸ್‌ಗಳನ್ನು ಇದೀಗ ವಾಪಸ್‌ ಪಡೆದಿದ್ದಾರೆ.

    ಶಿವಮೊಗ್ಗ ಮೂಲದ ವಕೀಲ ಬಿ. ವಿನೋದ್ ಎನ್ನುವವರು ಯಡಿಯೂರಪ್ಪ ವಿರುದ್ಧ ಮೂರು ಕೇಸು ದಾಖಲು ಮಾಡಿದ್ದರು.

    ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಹುಣಸೇಕಟ್ಟೆ, ಕೋಟೆಗಂಗೂರು ಮತ್ತು ಕೆಹೆಚ್‌ಬಿ ಕಾಲೋನಿಗಳಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕೇಸ್‌ ಇದಾಗಿದೆ.

    ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಗೆದ್ದ ನಾಲ್ವರು ಭಾರತೀಯರು!

    ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿದ್ದರು. ಈ ಅರ್ಜಿಯ ವಿಚಾರಣೆ ಹೈಕೋರ್ಟ್‌ ಮುಂದೆ ಇಂದು ಬರುವ ಸಾಧ್ಯತೆ ಇತ್ತು. ಆದರೆ ಈ ನಡುವೆಯೇ ವಕೀಲ ವಿನೋದ್‌ ಅವರು, ಮೂರೂ ಕೇಸುಗಳನ್ನು ವಾಪಸ್‌ ಪಡೆದುಕೊಂಡಿದ್ದಾರೆ.

    ಈ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

    ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಜಾನ್ ಮೈಖೆಲ್‌ ಕುನ್ಹಾ ಅವರ ಮುಂದೆ ಹಾಜರಾಗಿ ತಾವು ದಾಖಲಿಸಿದ ಮೂರು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ವಿನೋದ್‌ ಹೇಳಿದ್ದಾರೆ. ವಕೀಲರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿರುವ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಂಡಿದೆ.

    ಈ ನಡುವೆಯೇ ವಿನೋದ್‌ ಅವರು, ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧವೂ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೂರವನ್ನು ಅವರು ವಾಪಸ್ ಪಡೆದಿಲ್ಲದ ಕಾರಣ, ವಿಚಾರಣೆ ಮುಂದುವರೆಯಲಿದೆ.

    ಇಡೀ ಗುಜರಾತ್​ ಕಾಂಗ್ರೆಸ್ಸನ್ನು 25 ಕೋಟಿಗೆ ಖರೀದಿಸಬಹುದು!

    ಶ್ರೀರಾಮುಲು ಆಪ್ತನ ಮಗಳ ಅದ್ದೂರಿ ಮದುವೆ: ಮಾಸ್ಕ್​ ಇಲ್ಲ… ಅಂತರವಿಲ್ಲ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts