

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾವೇರಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ನಡುವೆ ನೆಕ್ ಟು ನೆಕ್ ಫೈಟ್ ಶುರುವಾಗಿದೆ. ಕೆಲವು ಸಮೀಕ್ಷೆಗಳು ಟ್ರಂಪ್ ಗೆಲುವು ಸಾಧಿಸುತ್ತಾರೆ ಎಂದಿದ್ದರೆ ಇನ್ನು ಕೆಲವರು ಜೋ ಬಿಡನ್ ಹೆಸರು ಹೇಳಿದ್ದಾರೆ.
ಆದರೆ ಈ ನಡುವೆಯೇ ಟ್ರಂಪ್ ಕೆಂಡಾಮಂಡಲವಾಗಿದ್ದು, ಜೋ ಬಿಡನ್ ಗೆಲುವು ಸಾಧ್ಯವೇ ಇಲ್ಲ. ಒಂದು ವೇಳೆ ಹಾಗೇನಾದರೂ ಆದರೆ ನಾನು ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಶ್ವೇತಭವನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವೇ ಗೆಲ್ಲುವುದು. ಆದರೆ ಎಲ್ಲಿಯೋ ಮೋಸದ ಸುಳಿವು ಸಿಗುತ್ತಿಲ್ಲ, ಹೀಗಾಗಲು ತಾವು ಬಿಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಗೆದ್ದ ನಾಲ್ವರು ಭಾರತೀಯರು!
ಬಿಡೆನ್ ಅವರು 225 ಎಲೆಕ್ಟ್ರೋಲ್ ಮತಗಳನ್ನು ಪಡೆದರೆ, ಟ್ರಂಪ್ 213 ಮತಗಳೊಂದಿಗೆ ಹಿನ್ನೆಡೆ ಅನುಭವಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಲು 538 ಮತಗಳ ಪೈಕಿ ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯ ಇದೆ.
ಫಲಿತಾಂಶದಲ್ಲಿ ಹಿನ್ನಡೆ ಅನುಭವಿಸಿರುವ ಡೋನಾಲ್ಡ್ ಟ್ರಂಪ್ ಅವರು ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಮೋಸ ನಡೆದಿದ್ದು, ಅಮೆರಿಕ ಜನತೆಗೆ ವಂಚನೆ ಎಸಗಲಾಗಿದೆ. ನಾವು ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಹೇಳಿದ್ದಾರೆ.
ಇದು ಅಮೆರಿಕದ ಸಾರ್ವಜನಿಕರಿಗೆ ಮಾಡಿದ ವಂಚನೆ. ಇದು ನಮ್ಮ ದೇಶಕ್ಕೆ ದೊಡ್ಡ ಮುಜುಗರ. ಈ ಚುನಾವಣೆಯನ್ನು ನಾವೇ ಗೆದ್ದಿರುವುದು ಎಂದರು.