ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

job
Published on

ಭಾರತೀಯ ಕ್ರೀಡಾ ಪ್ರಾಧಿಕಾರದ (ಸ್ಪೋಟ್ಸ್ ಅಥಾರಿಟಿ ಆಫ್​ ಇಂಡಿಯಾ-ಎಸ್‍ಎಐ) ಪಂಜಾಬ್‍ನ ಎನ್‍ಸಿಒಇ/ ಎಚ್‍ಪಿಸಿ, ಎನ್‍ಎಸ್‍ಎನ್‍ಐಎಸ್ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಹುದ್ದೆಗಳು: 14

ಎಸ್‍ಎಐನಲ್ಲಿ ಅಭ್ಯರ್ಥಿಗಳನ್ನು ಆರಂಭಿಕವಾಗಿ 2 ವರ್ಷದ ಒಪ್ಪಂದದ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಸಂಸ್ಥೆಯ ಅಗತ್ಯತೆ ಹಾಗೂ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿಯನ್ನು 1 ವರ್ಷ ವಿಸ್ತರಿಸಲಾಗುವುದು.

ಹುದ್ದೆ ವಿವರ

* ಯಂಗ್ ಪ್ರೊಫೆಷನಲ್ಸ್- 3 (ಪ್ರಾಜೆಕ್ಟ್ ಆ್ಯಂಡ್ ಅಡ್ಮಿನ್) (ಎನ್‍ಸಿಒಇ-1, ಎಸ್ಟಾಬ್ಲಿಷ್‍ಮೆಂಟ್-1, ಅಕಾಡೆಮಿಕ್-1)

ಬಿ.ಟೆಕ್/ ಎಂಬಿಎ/ ಪಿಜಿಡಿಎಂ/ ಸ್ಪೋಟ್ರ್ಸ್ ಮ್ಯಾನೇಜ್‍ಮೆಂಟ್‍ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆ ಜವಾಬ್ದಾರಿ: ಎನ್‍ಸಿಒಇಯ ಅಂದಿನ ಆಡಳಿತಾತ್ಮಕ ಕೆಲಸಗಳನ್ನು ಮಾಡುವುದು, ನಿರ್ದಿಷ್ಟ ಯೋಜನೆಗಳ ಕಾರ್ಯಾಚರಣೆಗಳ ಕಾರ್ಯಕ್ರಮ, ನಿರ್ವಹಣೆ, ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಪರಿಶೀಲಿಸುವುದು ಮತ್ತು ವರದಿ ಮಾಡುವುದು ಇತ್ಯಾದಿ.

*ಯಂಗ್ ಪ್ರೊಫೆಷನಲ್ಸ್ (ಐಟಿ) (ಅಕಾಡೆಮೀಸ್-1, ಫ್ಯಾಕಲ್ಟಿ ಆಫ್​ ಸ್ಪೋಟ್ಸ್ ಸೈನ್ಸ್-1, ಐಟಿ ಆ್ಯಂಡ್ ಪ್ರೊಕ್ಯೂರ್‍ಮೆಂಟ್-1) - 3

ಐಟಿಯಲ್ಲಿ ಬಿಟೆಕ್/ ಎಂಎಸ್ಸಿ/ ಎಂಸಿಎ ಮಾಡಿರುವ ಅಭ್ಯರ್ಥಿಗಳು ಅರ್ಹರು.

ಹುದ್ದೆ ಜವಾಬ್ದಾರಿ: ಆರೋಗ್ಯ ಕೇಂದ್ರ, ಎïಒಎಸ್‍ಎಸ್‍ಗೆ ಐಟಿ ನಿರ್ವಹಣೆ, ವೈಜ್ಞಾನಿಕ ಸಾಫ್ಟ್​ವೇರ್​ಗಳ ಡೇಟಾ ನಿರ್ವಹಣೆ, ಅಗತ್ಯ ಸಹಕಾರ ನೀಡುವುದು.

* ಯಂಗ್ ಪ್ರೊಫೆಷನಲ್ಸ್ (ಅಥ್ಲೀಟ್ ರಿಲೇಷನ್ ಮ್ಯಾನೇಜರ್) (ಎನ್‍ಸಿಒಇ-7, ನ್ಯಾಷನಲ್ ಕ್ಯಾಂಪ್ಸ್-1) - 7

ಬಿ.ಟೆಕ್/ ಎಂಬಿಎ/ ಪಿಜಿಡಿಎಂ/ ಸ್ಪೋಟ್ಸ್ ಮ್ಯಾನೇಜ್‍ಮೆಂಟ್‍ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮಾಡಿರಬೇಕು.

ಹುದ್ದೆ ಜವಾಬ್ದಾರಿ: ಅಭ್ಯರ್ಥಿಗೆ ನಿಯೋಜಿಸಲಾದ ಕ್ರೀಡಾಪಟುಗಳ ಅಗತ್ಯ ಸೇವೆ ಸಲ್ಲಿಸುವುದು, ಎಸ್‍ಎಐನಲ್ಲಿ ಕ್ರೀಡಾಪಟುವಿನ ಪ್ರಸ್ತಾಪದ ಬಗ್ಗೆ ಆರಂಭದಿಂದ ಕೊನೆಯವರೆಗೆ ನೋಡಿಕೊಳ್ಳುವುದು, ಅಗತ್ಯವಿದ್ದಾಗ ಕ್ರೀಡಾಪಟುವಿನ ಜತೆ ವೈಯಕ್ತಿಕ ಸಂವಹನ ನಡೆಸಿ ಬೆಂಬಲ ನೀಡುವುದು ಇತ್ಯಾದಿ.

* ಯಂಗ್ ಪ್ರೊಫೆಷನಲ್ಸ್ (ಲೀಗಲ್) - 1

ಕಾನೂನು ಪದವಿ/ ಸ್ನಾತಕೋತ್ತರ ಪದವಿ, ಕ್ರೀಡಾ ಕಾನೂನಿನಲ್ಲಿ ಸ್ಪೇಷಲೈಸೇಷನ್ ಮಾಡಿರುವ ಅಭ್ಯರ್ಥಿಗಳು ಅರ್ಹರು.

ಹುದ್ದೆ ಜವಾಬ್ದಾರಿ: ಇಲಾಖೆ/ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ಕಾನೂನು ವಿಷಯಗಳನ್ನು ನಿರ್ವಹಿಸುವುದು, ಎಸ್‍ಎಐಗೆ ಸಂಬಂಧಿಸಿದ ಒಪ್ಪಂದಗಳು, ತಿಳಿವಳಿಕೆ ಪತ್ರ (ಎಂಒಯು) ಮತ್ತು ಇತರ ಕಾನೂನು ದಾಖಲೆಗಳ ಕರಡು ಸಿದ್ಧಪಡಿಸುವುದು ಮತ್ತು ನೋಡಿಕೊಳ್ಳುವುದು ಇತ್ಯಾದಿ.

ವಯೋಮಿತಿ: ಗರಿಷ್ಠ 35 ವರ್ಷ.

ವೇತನ: ಮಾಸಿಕ 40,000-60,000 ರೂ.ವರೆಗೆ ಇದೆ. ಇತರ ಯಾವುದೇ ಭತ್ಯೆ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಕ್ರೀಡಾ ಕ್ಷೇತ್ರದಲ್ಲಿನ ವೃತ್ತಿ ಅನುಭವ, ಸರ್ಕಾರಿ/ ಖಾಸಗಿ ಸಂಸ್ಥೆಯಲ್ಲಿನ ವೃತ್ತಿ ಅನುಭವ, ರಾಷ್ಟ್ರೀಯ, ಅಂತಾರಾಷ್ಟ್ರಿಯ ಕ್ರೀಡೆಯಲ್ಲಿ ಪಾಲ್ಗೊಂಡ ಅನುಭವ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 26.3.2021

ಅಧಿಸೂಚನೆಗೆ: https://bit.ly/3tquWvD

ಮಾಹಿತಿಗೆ: http://www.nsnis.org

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net