More

    ಡಿಪ್ಲೋಮಾ ಪದವೀಧರರಿಗೆ ಟೆಲಿಕಾಂನಲ್ಲಿ ಉದ್ಯೋಗಾವಕಾಶ- ಇಂದೇ ಕೊನೆ ದಿನ

    ದೇಶದ ಪ್ರಮುಖ ಟೆಲಿಕಾಂ ಕಂಪನಿ ಮತ್ತು ಬಹು ಘಟಕಗಳನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮವಾಗಿರುವ ಐಟಿಐ ಲಿಮಿಟೆಡ್ ಐಟಿ ಮತ್ತು ಟೆಲಿಕಾಂ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ.

    ರಕ್ಷಣಾ ಮತ್ತು ರೈಲ್ವೇ ಕ್ಷೇತ್ರಗಳಲ್ಲಿ ವೈವಿಧ್ಯಮಯ ಉತ್ಪನ್ನಗಳ ತಯಾರಿಕೆ ಮತ್ತು ಸೌರ ಉಪಕರಣಗಳು, ಎನ್‍ಜಿಎನ್ ಉತ್ಪನ್ನಗಳು, ಜಿಪಿಒಎನ್, ಎಲ್‍ಇಡಿ ಲೈಟಿಂಗ್, ಎಚ್‍ಡಿಪಿಇ, ಒಎಫ್ಸಿ, ಹಾಗೂ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಐಟಿಐ ಹೆಚ್ಚು ಗಮನ ಹರಿಸುತ್ತಿದ್ದು, ಇಂಜಿನಿಯರಿಂಗ್ ಡಿಪ್ಲೋಮಾ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

    ಒಟ್ಟು ಹುದ್ದೆಗಳು: 40. ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 17 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 4, ಇತರ ಹಿಂದುಳಿದ ವರ್ಗಕ್ಕೆ 11, ಎಸ್ಸಿಗೆ 6, ಎಸ್ಟಿಗೆ 2 ಸ್ಥಾನಗಳನ್ನು ಮೀಸಲಿರಿಸಿದೆ.

    ಹುದ್ದೆ ವಿವರ
    * ಮೆಕ್ಯಾನಿಕಲ್ – 29
    * ಎಲೆಕ್ಟ್ರಿಕಲ್ – 7
    * ಎಲೆಕ್ಟ್ರಾನಿಕ್ಸ್ – 4

    ಶೈಕ್ಷಣಿಕ ಅರ್ಹತೆ: ಪ್ರೌಢ ಶಿಕ್ಷಣ/ ತತ್ಸಮಾನ ಶಿಕ್ಷಣ, ಮೆಕ್ಯಾನಿಕ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‍ನಲ್ಲಿ 3 ವರ್ಷದ ಡಿಪ್ಲೋಮಾ ಕೋರ್ಸ್ ಮಾಡಿದ್ದು, ಕನಿಷ್ಠ ಶೇ.60 ಅಂಕ (ಮೀಸಲಾತಿ ಅಭ್ಯರ್ಥಿಗಳು ಶೇ.55 ಅಂಕ) ಪಡೆದಿರಬೇಕು.

    ವಯೋಮಿತಿ: ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ವೇತನ: ಮೂಲ ವೇತನ, ಡಿಎ ಮತ್ತು ಮನೆ ಬಾಡಿಗೆ ಭತ್ಯೆ ಸೇರಿ ಮಾಸಿಕ 19,029 ರೂ. ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿನ ಅಂಕ ಆಧರಿಸಿ ಅಂತಿಮ ಪಟ್ಟಿಯ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಉತ್ತೀರ್ಣರಾದವರನ್ನು ಆಯ್ಕೆ ಮಾಡಲಾಗುವುದು.

    ಸೂಚನೆ: ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿ ಪಡೆದು, ಅಗತ್ಯ ದಾಖಲೆಗಳ ಪ್ರತಿಗಳ ಜತೆ ದಿ.26.3.2021ರ ಒಳಗಾಗಿ CM —HR & Legal, Recruitment Cell ITI LIMITED SULTANPUR ROAD, RAEBARELI, UTTAR PRADESH— 229010 ವಿಳಾಸಕ್ಕೆ ಪೋಸ್ಟ್ ಮಾಡಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 18.3.2021
    ಅಧಿಸೂಚನೆಗೆ: https://bit.ly/2O8KchH
    ಮಾಹಿತಿಗೆ: http://www.itiltd.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿದೆ 25 ಹುದ್ದೆಗಳು- 45 ವರ್ಷಗಳವರೆಗೂ ಇದೆ ಅವಕಾಶ

    ಆರೋಗ್ಯ ಕೇಂದ್ರದಲ್ಲಿ ಉದ್ಯೋಗ: ಎಸ್​ಎಸ್​ಎಲ್​ಸಿಯಿಂದ ಎಂಬಿಬಿಎಸ್​ವರೆಗೆ ಅವಕಾಶ, ₹1 ಲಕ್ಷದವರೆಗೂ ಸಂಬಳ

    ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ ಆಗಿದೆಯೆ? ಮೆಟ್ರೋ ರೈಲ್​ ಕಾರ್ಪೋರೇಷನ್​ನಲ್ಲಿ ಭರಪೂರ ಉದ್ಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts