More

    ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗ ದೂರು ದಾಖಲು!

    ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಸದ ತೇಜಸ್ವಿ ಸೂರ್ಯ ಇದೀಗ ಮರುಚುನಾವಣೆ ಬಯಸಿದ್ದು, ಕರ್ನಾಟಕದ ಒಟ್ಟು 28 ಸ್ಥಾನಗಳ ಪೈಕಿ 14 ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ಭರದಿಂದ ಸಾಗುತ್ತಿದೆ. ಈ ನಡುವೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿ ಸೌಮ್ಯ ರೆಡ್ಡಿ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಧ್ಯೆ ಬಿರುಸಿನ ಪೈಪೋಟಿ ಭುಗಿಲೆದ್ದಿದ್ದು, ಸದ್ಯ ಕ್ಷೇತ್ರದ ಮತದಾರರು ಬೆಳಗ್ಗಿನಿಂದಲೇ ಮತ ಚಲಾಯಿಸಲು ಆರಂಭಿಸಿದರು.

    ಇದನ್ನೂ ಓದಿ: ಅನಾರೋಗ್ಯದ ನಡುವೆಯೂ ಆಸ್ಪತ್ರೆಯಿಂದ ಬಂದು ಮತ ಚಲಾಯಿಸಿದ ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ!

    ಈ ಮಧ್ಯೆ ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ ತೇಜಸ್ವಿ, “80% ಬಿಜೆಪಿ ಬೆಂಬಲಿಗರು ಮತ್ತು ಮತದಾರರು ಇದ್ದರೂ ಸಹ ಕೇವಲ 20% ಜನರು ಮಾತ್ರ ಮತ ಚಲಾಯಿಸಲು ಬರುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಅನುಕೂಲವಾಗಿದೆ” ಎಂದು ಹೇಳಿದ್ದಾರೆ. “ನಾವು 80% ಇದ್ದೇವೆ. ಆದರೆ ಮತದಾನದ ದಿನದಂದು ಹೊರಗೆ ಬರುತ್ತಿರುವುದು ಕೇವಲ 20% ಮಾತ್ರ. ಕಾಂಗ್ರೆಸ್ ಬೆಂಬಲಿಗರು 20% ಇದ್ದಾರೆ. ಆದ್ರೆ, ಅವರು ಹೊರಗೆ ಬಂದು 80% ನಷ್ಟು ಮತ ಚಲಾಯಿಸುತ್ತಿದ್ದಾರೆ” ಎಂದು ತಿಳಿಸಿದ್ದರು.

    ”ಪ್ರತಿಯೊಬ್ಬ ಬಿಜೆಪಿ ಮತದಾರ ಹೊರಗೆ ಬಂದು ಮತ ಹಾಕಬೇಕು. ಏಕೆಂದರೆ ನಮ್ಮ ಮತ ಮುಖ್ಯ, ನೀವು ಮತ ಹಾಕದಿದ್ದರೆ ಕಾಂಗ್ರೆಸ್​​ನ ಶೇ.20 ರಷ್ಟು ಜನ ಹೊರ ಬಂದು ಮತ ಹಾಕುತ್ತಿದ್ದಾರೆ. ಬಿಸಿಲು, ಮಳೆ ಏನೇ ಇರಲಿ, ಅಂತಿಮವಾಗಿ ನಿಮ್ಮ ಮತವೇ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವುದು. ಮುಂದಿನ ಐದು ವರ್ಷಗಳವರೆಗೆ. ಅದು ನಿಮಗೆ ನೆನಪಿರಲಿ” ಎಂದು ಸೂರ್ಯ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಇದನ್ನೂ ಓದಿ: ಪಕ್ಷ ಬೇಧ ಮರೆತು ನನಗೆ ಬೆಂಬಲ, ರಾಜ್ಯದಲ್ಲಿ ಅಧಿಕ ಬಹುಮತದ ಗೆಲುವು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ

    ಈ ಹಿನ್ನೆಲೆ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿಯಾದ ತೇಜಸ್ವಿ ವಿರುದ್ಧ ಇದೀಗ ಚುನಾವಣಾ ಆಯೋಗ ದೂರು ದಾಖಲಿಸಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ (ಈ ಹಿಂದಿನ ಟ್ವಿಟರ್​) ಬರೆದಿರುವ ಆಯೋಗ, 25.04.24 ರಂದು ಜಯನಗರ PS u/s 123(3)ರಲ್ಲಿ ಸಂಸದ ತೇಜಸ್ವಿ ಸೂರ್ಯ, ವೋಟಿಂಗ್ ವಿಚಾರವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಮೇರೆಗೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts