More

    ಪಕ್ಷ ಬೇಧ ಮರೆತು ನನಗೆ ಬೆಂಬಲ, ರಾಜ್ಯದಲ್ಲಿ ಅಧಿಕ ಬಹುಮತದ ಗೆಲುವು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ

    ಮದ್ದೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜನರು ಪಕ್ಷ ಬೇಧ ಮರೆತು ನನಗೆ ಬೆಂಬಲ ನೀಡಿದ್ದಾರೆ. ಅಂತೆಯೇ ರಾಜ್ಯದಲ್ಲಿ ಅಧಿಕ ಬಹುಮತ ಗೆಲುವಿನ ವಿಶ್ವಾಸವಿದೆ ಎಂದು ಮೈತ್ರಿ ಅಭ್ಯರ್ಥಿಯೂ ಆದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
    ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ಮತ ಇದೆ. ಈಗಾಗಲೇ ಮತ ಹಾಕಿ ಬಂದಿದ್ದೇನೆ. ಈಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಾಲೂಕುವಾರು ಭೇಟಿ ನೀಡುತ್ತಿದೀನಿ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಇದ್ದೀನಿ. ಮಂಡ್ಯದಲ್ಲಿ ನಮಗೆ ತುಂಬಾ ಚೆನ್ನಾಗಿ ಇದೆ. ಯಾವುದೇ ರೀತಿಯ ಸಮಸ್ಯೆ ನಮಗೆ ಇಲ್ಲ. ಅತ್ಯಂತ ಉತ್ಸಾಹದಿಂದ ಮತದಾನ ನಡೆಯುತ್ತಿದೆ ಎಂದರು.
    ಚುನಾವಣೆ ಎಂದರೆ ಅಪಪ್ರಚಾರ, ನಮ್ಮ ವಿರೋಧ ಮಾಡುವುದು ಸಹಜ. ಮಂಡ್ಯ ಜಿಲ್ಲೆಯಲ್ಲಿ ಎಲ್ಲರೂ ನಮಗೆ ಸಹಕಾರ ನೀಡಿದ್ದಾರೆ. ಕಾಂಗ್ರೆಸ್‌ನ ಕೆಲ ನಾಯಕರು ಕಾರ್ಯಕರ್ತರು ಬೆಂಬಲಿಸಿದ್ದಾರೆ. ಪಕ್ಷ, ಜಾತಿಭೇದ ಮರೆತು ಬೆಂಬಲ ನೀಡಿದ್ದಾರೆ. ಸಂಪೂರ್ಣವಾಗಿ ಮಂಡ್ಯ ಜನರು ನನ್ನ ಬೆಂಬಲಿಸಿದ್ದಾರೆ. ಚುನಾವಣೆ ನಾನು ಮಾಡಿಲ್ಲ, ಮಂಡ್ಯ ನನ್ನ ಪರ ಚುನಾವಣೆ ಮಾಡಿದ್ದಾರೆ. ನನ್ನ ಗೆಲುವು ಮಂಡ್ಯ ಜಿಲ್ಲೆಯ ಜನರಿಗೆ ಸೇರಬೇಕು. ಎರಡನೇ ಹಂತದ ಚುನಾವಣೆ ಪ್ರಚಾರಕ್ಕೂ ಹೋಗುತ್ತೇನೆ ಎಂದು ಹೇಳಿದರು.
    ಸುಮಲತಾ ಬೆಂಬಲ ನೀಡಿಲ್ಲ ಎಂಬ ಎಚ್.ಡಿ.ದೇವೇಗೌಡರು ಹೇಳಿಕೆಗೆ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಸುಮಲತಾ ಅವರ ಪ್ರಶ್ನೆ ಇಲ್ಲಿ ಬರಲ್ಲ. ದೇವೇಗೌಡರು ಏಕೆ ಹೇಳಿದಾರೆ ಗೊತ್ತಿಲ್ಲ. ದೇವೇಗೌಡರಿಗೆ ಮಾಹಿತಿ ಕೊರತೆ ಇರಬಹುದು. ಪಕ್ಷ ಭೇದ ಮರೆತು ಮಂಡ್ಯದಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ನನಗೆ ಯಾರು ವಿರೋಧ ಮಾಡಿಲ್ಲ. ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಜೆಡಿಎಸ್ ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ ಎಂದು ಸುಮಲತಾ ಹೇಳಿದ್ದಾರೆ. ನಾನೇ ಸುಮಲತಾ ಮನೆಗೆ ಹೋಗಿ ಅವರ ಸಹಕಾರ ಕೇಳಿದ್ದೇನೆ. ಅದಕ್ಕಿಂತ ನಾನು ಏನು ಮಾಡಲು ಸಾಧ್ಯ. ಅಂಬರೀಷ್ ಅಭಿಮಾನಿಗಳು ಒಳಗೊಂಡಂತೆ ನನಗೆ ಸಹಾಯ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧ್ಯವಾದರೆ ಎರಡು ದಿನ ಪ್ರಚಾರಕ್ಕೆ ಬನ್ನಿ ಅಕ್ಕ ಎಂದಿದ್ದೆ. ಮಾಜಿ ಸಚಿವ ಆರ್.ಅಶೋಕ್ ಅವರು ಸಹ ನಾನು ಕರೆದಾಗ ಇದ್ದರು. ಅಶೋಕ್ ಸಹ ಮಂಡ್ಯಕ್ಕೆ ಬಂದು ಪ್ರಚಾರ ಮಾಡಿ ಎಂದರು. ಎಲ್ಲ ಬಿಜೆಪಿ ನಾಯಕರು ನನ್ನ ಪರ ಕೆಲಸ ಮಾಡಿದ್ದಾರೆ. ಇಂದು ಸುಮಲತಾ ಅವರು ಇಂದು ನನಗೆ ಮತ ಕೊಟ್ಟಿದ್ದಾರೆ. ಈ ಗೊಂದಲಗಳಿಗೆ ಯಾರು ಪ್ರಚಾರ ಕೊಡುವುದು ಬೇಡಾ. ಯಾರು ಯಾರ ಬಗ್ಗೆಯೂ ಸಣ್ಣತನದಲ್ಲಿ ಮಾತನಾಡೋದು ಬೇಡ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿರೋದರಿಂದ ರಾಜ್ಯದಲ್ಲಿ ಅತ್ಯಂತ ಬಹುಮತಗಳಲ್ಲಿ ಗೆಲ್ಲಲು ಕಾರಣವಾಗಲಿದೆ. ಪಕ್ಷ, ಜಾತಿಯ ವ್ಯಾಮೋಹಕ್ಕೆ ಒಳಗಾಗದೆ ಜನರು ನನಗೆ ಮತ ನೀಡಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts