More

    ಅನಾರೋಗ್ಯದ ನಡುವೆಯೂ ಆಸ್ಪತ್ರೆಯಿಂದ ಬಂದು ಮತ ಚಲಾಯಿಸಿದ ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ!

    ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ಅನಾರೋಗ್ಯದ ನಡುವೆಯೂ ತಮ್ಮ ನಾಗರಿಕ ಕರ್ತವ್ಯದಲ್ಲಿ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರು ತಮ್ಮ ಪತ್ನಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಜೊತೆಗೆ ಮತದಾನ ಮಾಡಿದ್ದಾರೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    77 ವರ್ಷ ವಯಸ್ಸಿನ ಐಟಿ ದಿಗ್ಗಜ ನಾರಾಯಣ ಮೂರ್ತಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ಕರೆ ತರಲಾಗಿದ್ದು, ಮತದಾನ ಮಾಡಿದ ಬಳಿಕ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಸುಧಾಮೂರ್ತಿ ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ ಮೂರ್ತಿ ಅವರು, ಮತದಾನ ಮಾಡುವ ಹಕ್ಕನ್ನು ಪ್ರತಿ ಐದು ವರ್ಷಗಳಿಗೆ ನಾವು ಪಡೆಯುತ್ತೇವೆ. ಇದೊಂದು ಜವಾಬ್ದಾರಿಯಾಗಿದ್ದು ಸಾಕಷ್ಟು ಚಿಂತಿಸಿ ಮತ ಚಲಾವಣೆ ಮಾಡಬೇಕು. ಪ್ರತಿಯೊಬ್ಬರು ಈ ಹಕ್ಕನ್ನು ಚಲಾಯಿಸಲೇಕು, ಯಾರೊಬ್ಬರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಐಟಿ ದಿಗ್ಗಜ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

    ಸುಮ್ಮನೆ ಮನೆಯಲ್ಲಿ ಕೂರಬೇಡಿ: ಈ ವೇಳೆ ಮಾತನಾಡಿದ ಸುಧಾಮೂರ್ತಿ ಅವರು,ಮತದಾನ ಶ್ರೇಷ್ಠ ದಾನ, ಮತ ಚಲಾಯಿಸುವ ದಿನ ಸುಮ್ಮನೆ ಮನೆಯಲ್ಲಿ ಕೂರಬೇಡಿ ಎಂದು ಹೇಳಿದರು. ಮಾತನಾಡುವುದಕ್ಕಿಂತಾ ಮತ ಚಲಾಯಿಸುವುದು ಮುಖ್ಯ. ಮನೆಯಿಂದ ಹೊರ ಬನ್ನಿ ಮತ ಚಲಾಯಿಸಿ, ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಸುಧಾಮೂರ್ತಿ ಎಂದರು.

    ನಗರದ ಜಯನಗರದಲ್ಲಿ ಇರುವ ಮತಗಟ್ಟೆಯಲ್ಲಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಇಬ್ಬರೂ ಮತ ಚಲಾವಣೆ ಮಾಡಿದರು. ಹಿರಿಯ ನಾಗರಿಕರಾದ ನಾವು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದೇವೆ. ಹೀಗಿರುವಾಗ ಯುವಕರು ಮನೆಯಿಂದ ಹೊರಗೆ ಬಂದು ಮತ ಚಲಾವಣೆ ಮಾಡದೇ ಇದ್ದರೆ ಹೇಗೆ ಎಂದು ಸುಧಾ ಮೂರ್ತಿ ಪ್ರಶ್ನಿಸಿದರು.

    ಹೆಚ್ಚಿನ ಯುವಕರು ಮತ ಚಲಾಯಿಸಿದ್ದಾರೆ: ನನ್ನಂತಹ ಹಿರಿಯ ನಾಗರಿಕರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ವಿದ್ಯಾವಂತ ಯುವ ಸಮೂಹ ತಪ್ಪದೇ ಮನೆಯಿಂದ ಹೊರ ಬಂದು ಮತದಾನ ಮಾಡಬೇಕು. ಕಡಿಮೆ ಮತದಾನಕ್ಕೆ ಹೆಸರಾಗಿರುವ ಬೆಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಕರೆ ನೀಡಿದರು. “ವಿದ್ಯಾವಂತರು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಮತದಾನಕ್ಕೆ ಬರುತ್ತಾರೆ. ತಿಳುವಳಿಕೆಯುಳ್ಳ ಮತದಾರರಾಗಿ, ನೀವು ನಿಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಸಲಹೆ ನೀಡಿದರು.

    ಮತ ಚಲಾಯಿಸಿದ ರಾಹುಲ್ ದ್ರಾವಿಡ್​: ಬೆಂಗಳೂರಿನಲ್ಲಿ ಟೀಂ ಇಂಡಿಯಾ ಮುಖ್ಯ​ ಕೋಚ್ ರಾಹುಲ್ ದ್ರಾವಿಡ್ ಕೂಡ ಮತ ಚಲಾಯಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, ಮತದಾನ ಮಾಡಲು ಎಲ್ಲ ಬನ್ನಿ. ಇದೊಂದು ಒಳ್ಳೆಯ ಅವಕಾಶ, ಪ್ರಜಾಪ್ರಭುತ್ವ‌ ಮುಂದೆ ತರುವ ಅವಕಾಶ ಇದು. ಮತ ಚಲಾಯಿಸಲು ಮಾಡಲು ಹೊರಗೆ ಬನ್ನಿ, ಬೆಂಗಳೂರಲ್ಲಿ ಜಾಸ್ತಿ ಜನ ಬರಬೇಕು. ಚುನಾವಣಾ ಆಯೋಗ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಯುವತಿಯರು ಮತದಾನ ಮಾಡಲು ಮುಂದೆ ಬನ್ನಿ ಅಂತ ಕರೆ ನೀಡಿದ್ದಾರೆ.

    ಆಂಧ್ರಪ್ರದೇಶ: ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ ಇವರೇ? ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts