More

    ಈ ಕನ್ನಡ ಸಿನಿಮಾವನ್ನು ನೀವು ನೋಡಲೆಬೇಕೆಂದರು ಸುಧಾಮೂರ್ತಿ, ಯಾವುದು ಆ ಸಿನಿಮಾ?

    ಬೆಂಗಳೂರು: ಎರಡನೇ ಲಾಕ್​​ಡೌನ್ ನಂತರ ಕನ್ನಡ ಚಿತ್ರರಂಗ ಈಗ ಒಂದಿಷ್ಟು ಚೇತರಿಸಿಕೊಳ್ಳುತ್ತಿದೆ. ಹೌದು, ಭಜರಂಗಿ-2, ಸಲಗ, ಕೋಟಿಗೊಬ್ಬ-3, ಪ್ರೇಮ್ಂ ಪೂಜ್ಯಂ, ಮುಗಿಲ್​​ಪೇಟೆ ಸಿನಿಮಾಗಳು ಸಿನಿ ಪ್ರೇಕ್ಷಕರನ್ನು ಬಹಳಷ್ಟು ರಂಜಿಸುತ್ತಿವೆ. ಈ ಪೈಕಿ ಸದ್ಯ ನಟ ರಮೇಶ್ ಅರವಿಂದ್ ಅವರ ‘100’ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ‘100’ ಸಿನಿಮಾ ಒಂದು ಸೈಬರ್ ಕ್ರೈಂ ಬಗೆಗಿನ ಕಥೆಯಾಗಿದ್ದು ನವೆಂಬರ್ 19 ರಂದು ಬಿಡುಗಡೆಯಾಗಿತ್ತು. ಒಂದು ಚೇಸಿಂಗ್ ಸೀನ್ ಮತ್ತು 4 ಭರ್ಜರಿ ಫೈಟ್​​ಗಳು ಈ ಸಿನಿಮಾದ ಹೈಲೈಟ್​​ ಎಂದು ಸಿನಿಮಾ ತಂಡ ಹೇಳಿಕೊಂಡಿತ್ತು. ಕೇವಲ ಮನೋರಂಜನೆಗೆ ಮಾತ್ರ ಅಲ್ಲಾ, ಈ ಸಿನಿಮಾದಲ್ಲಿ ಒಳ್ಳೆಯ ಸಂದೇಶವು ಇರುವ ಕಾರಣ ಹಲವರು ಈ ಸಿನಿಮಾವನ್ನು ಈಗಾಗಲೇ ಭೇಷ್ ಎಂದಿದ್ದು ಸಿನಿಮಾ ತಂಡವನ್ನು ಅಭಿನಂದಿಸಿದ್ದಾರೆ.

    ಸದ್ಯ, ಭಾನುವಾರದಂದು ಈ ಸಿನಿಮಾ ನೋಡಿದ ಇನ್ಫೋಸಿಸ್ ಫೌಂಡೇಶನ್​ನ ಮುಖ್ಯಸ್ಥೆ ಸುಧಾಮೂರ್ತಿ ಅವರು ‘ಇದು ಒಂದು ನೋಡಲೇ ಬೇಕಾದ ಸಿನಿಮಾ’ ಎಂದು ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಾಹಿತ್ಯ, ನಾಟಕ, ಕಲೆ, ಸಿನಿಮಾ ರಂಗಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸುಧಾಮೂರ್ತಿ ವಿಡಿಯೋ ಒಂದರಲ್ಲಿ ‘ನಾನು 100 ಸಿನಿಮಾ ನೋಡಿದೆ. ಸಿನಿಮಾ ತುಂಬಾ ಚನ್ನಾಗಿ ಮೂಡಿಬಂದಿದೆ. ಈಗಿನ ಯುವಜನತೆ ಹೇಗೆ ಮೊಬೈಲ್, ನೆಟ್ ಮತ್ತು ಸೋಶಿಯಲ್ ಮೀಡಿಯಾಗಳಿಗೆ ದಾಸರಾಗುತ್ತಿದ್ದಾರೆ ಎಂಬುದು ತೋರಿಸಲಾಗಿದೆ. ಜೊತೆಗೆ ಒಂದೊಳ್ಳೆ ಮೆಸೇಜ್ ಕೊಟ್ಟಿದ್ದಾರೆ. ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ’ ಎಂದು ಹೇಳಿದ್ದಾರೆ.

    ಈ ಹಿಂದೆ ಗೃಹಸಚಿವರು ತಮ್ಮ ಅಧಿಕಾರಿಗಳ ಜೊತೆ ‘100’ ಸಿನಿಮಾ ನೋಡಿ, ರಮೇಶ್ ಅರವಿಂದ್ ನಿರ್ದೇಶನವನ್ನು ಪ್ರಶಂಶಿಸಿದರು. ‘ಸೋಶಿಯಲ್ ಮೀಡಿಯಾಗಳ ದುರ್ಬಳಕೆಯ ಬಗ್ಗೆ ಮತ್ತು ಯುವ ಜನಾಂಗ ಇದಕ್ಕೆ ಹೇಗೆ ದಾಸರಾಗುತ್ತಾರೆಂದು ಈ ಸಿನಿಮಾದಲ್ಲಿ ತುಂಬಾ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ರಮೇಶ್ ಅವರ ನಿರ್ದೇಶನವು ಸಹ ಎಲ್ಲರಿಗೂ ಇಷ್ಟವಾಗುತ್ತೆ. ಕೇವಲ ಮನೋರಂಜನೆಗೆ ಮಾತ್ರ ಅಲ್ಲಾ, ಈ ಸಿನಿಮಾದಲ್ಲಿ ಒಳ್ಳೆಯ ಸಂದೇಶವು ಇದೆ.’ ಅಂತಾ ಗೃಹಸಚಿವರು ಹೇಳಿದ್ದಾರೆ. ಹೀಗೆ, ಹಲವಾರು ಗಣ್ಯರು ‘100 ಸಿನಿಮಾ ನೋಡಿ ಒಳ್ಳೆಯ ಮಾತುಗಳನ್ನಾಡಿದ್ದು ಎಲ್ಲರಿಗೂ ‘100’ ಸಿನಿಮಾ ನೋಡುವ ಆಸೆಯನ್ನು ಹೆಚ್ಚಿಸಿದ್ದಾರೆ.

    ಭಾರೀ ಮಳೆಗೆ ರಾಗಿ ಬೆಳೆ ನಾಶ: ಶುಲ್ಕ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದ ವಿದ್ಯಾರ್ಥಿಗೆ ಕಿಚ್ಚನ ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts