ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌: ಎಸ್‌ಬಿಐನಲ್ಲಿ 5121 ಹುದ್ದೆಗಳಿಗೆ ಆಹ್ವಾನ

SBI
Published on

ಸ್ಟೇಟ್​ ಬ್ಯಾಂಕ್​ ಆ್​ ಇಂಡಿಯಾ (ಎಸ್​ಬಿಐ)ದಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವಿದ್ದು, ದೇಶಾದ್ಯಂತ ಇರುವ ಹಲವು ಶಾಖೆಗಳಿಗೆ ಕ್ಲರಿಕಲ್​ ಕೇಡರ್​ನಲ್ಲಿ ಜೂನಿಯರ್​ ಅಸೋಸಿಯೇಟ್​ (ಕಸ್ಟಮರ್​ ಸಪೋರ್ಟ್​ ಆ್ಯಂಡ್​ ಸೇಲ್ಸ್​)ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.

ಒಟ್ಟು ಹುದ್ದೆಗಳು: 5121 ಇದ್ದು, ಕರ್ನಾಟಕದಲ್ಲಿ 426 ಹುದ್ದೆಗಳಿವೆ.

ಅಭ್ಯರ್ಥಿಗಳು ಒಂದು ರಾಜ್ಯದಿಂದ ಮಾತ್ರ ಅಜಿರ್ ಸಲ್ಲಿಸಲು ಅರ್ಹರಾಗಿದ್ದು, ಪ್ರಾದೇಶಿಕ ಸ್ಥಳದ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. 10ನೇ ತರಗತಿ ಅಥವಾ ದ್ವೀತಿಯ ಪಿಯುಸಿಯಲ್ಲಿ ಪ್ರಾದೇಶಿಕ ಭಾಷೆ ಅಧ್ಯಯನ ಮಾಡಿರಬೇಕು.

ರಾಜ್ಯವಾರು ಹುದ್ದೆ ವಿವರ

* ಗುಜರಾತ್​ - 942 * ಭೂಪಾಲ್​ - 208 * ಬೆಂಗಾಲ್​ - 300 * ಭುವನೇಶ್ವರ್​ - 75 * ಚಂಡೀಗಢ್​ - 510 * ಚೆನ್ನೆ$ - 475 * ದೆಹಲಿ - 150 * ದೆಹಲಿ/ ಚಂಡೀಗಢ್​ - 110 * ಹೈದರಾಬಾದ್​ - 275 * ಜೈಪುರ - 187 * ಕೇರಳ - 106 * ಲಖ್ನೌ/ ದೆಹಲಿ - 369 * ಮಹಾರಾಷ್ಟ್ರ/ ಮುಂಬೈ ಮೆಟ್ರೋ - 640 * ಮಹಾರಾಷ್ಟ್ರ - 10 * ನಾರ್ಥ್​ ಈಸ್ಟ್​ನ್​ - 256

- ಸ್ಪೆಷಲ್​ ರಿಕ್ರೂಟ್​ಮೆಂಟ್​ ಡೆವ್​ನಲ್ಲಿ * ಚಂಡೀಗಢ್​ - 55 * ನಾರ್ಥ್​ ಈಸ್ಟನ್​ - 30

ಕರ್ನಾಟಕದ ವಿವರ

ಕರ್ನಾಟಕದಲ್ಲಿ ಒಟ್ಟು 426 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 26 ಬ್ಯಾಕ್​ಲಾಗ್​ ಹುದ್ದೆಗಳು ಸೇರಿವೆ. 426 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 160 ಸ್ಥಾನ, ಎಸ್ಸಿಗೆ 64, ಎಸ್ಟಿಗೆ 49, ಆಥಿರ್ಕವಾಗಿ ಹಿಂದುಳಿದ ಅಭ್ಯರ್ಥಿಗೆ 40, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 165 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಅಂಗವಿಕಲ ಹಾಗೂ ಮಾಜಿಸೈನಿಕರಿಗೆ ಸ್ಥಾನ ಕಾಯ್ದಿರಿಸಲಾಗಿದೆ.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. 16.8.2021ರ ಒಳಗಾಗಿ ಇಂಟಿಗ್ರೇಟೆಡ್​ ಡುಯಲ್​ ಡಿಗ್ರಿ ಪಡೆದಿರಬೇಕು.

ವಯೋಮಿತಿ: 1.4.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಮಾಸಿಕ 19,900 ರೂ. ನಿಂದ 47,920 ರೂ. ವೇತನ ಇರುತ್ತದೆ. ಮುಂಬೈನಂತಹ ನಗರಗಳಲ್ಲಿ ಮಾಸಿಕ ವೇತನ ಎಲ್ಲ ಭತ್ಯೆಗಳನ್ನು ಒಳಗೊಂಡು 29,000 ರೂ. ಇರುತ್ತದೆ.

ಆಯ್ಕೆ ಪ್ರಕ್ರಿಯೆ: ಪ್ರಾದೇಶಿಕ ಭಾಷೆಯಲ್ಲಿ ಆನ್​ಲೈನ್​ ಪರೀಕ್ಷೆ ನಡೆಸಲಾಗುವುದು. ಪ್ರಿಲಿಮಿನರಿ ಪರೀೆಯಲ್ಲಿ ಇಂಗ್ಲಿಷ್​ ಭಾಷೆ, ನ್ಯುಮೆರಿಕಲ್​ ಎಬಿಲಿಟಿ, ರೀಸನಿಂಗ್​ ಎಬಿಲಿಟಿ ಕುರಿತ ಪ್ರಶ್ನೆಗಳನ್ನು ಕೇಳಲಾಗುವುದು. ಮುಖ್ಯ ಪರೀಕ್ಷೆಯಲ್ಲಿ ಜನರಲ್​/ ಫೈನಾನ್ಷಿಯಲ್​ ಅವೇರ್​ನೆಸ್​, ಸಾಮಾನ್ಯ ಇಂಗ್ಲಿಷ್​, ಕ್ವಾಂಟಿಟೇಟೀವ್​ ಆಪ್ಟಿಟ್ಯೂಡ್​, ರೀಸನಿಂಗ್​ ಎಬಿಲಿಟಿ ಆ್ಯಂಡ್​ ಕಂಪ್ಯೂಟರ್​ ಆಪ್ಟಿಟ್ಯೂಡ್​ ಕುರಿತ ಪ್ರಶ್ನೆಗಳಿರುತ್ತವೆ.

ಅಜಿರ್ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿಸೈನಿಕ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 750 ರೂ. ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 17.5.2021

ಅಧಿಸೂಚನೆಗೆ: https://bit.ly/3uh3WiJ

ಮಾಹಿತಿಗೆ: https://bank.sbi

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net