

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ಕ್ಲರಿಕಲ್ ಕೇಡರ್ನಲ್ಲಿ ಫಾರ್ಮಸಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 67.
ಎಸ್ಬಿಐನಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಭ್ಯರ್ಥಿಗಳು ನಿಗದಿತ ಪ್ರದೇಶ ಹೊರತುಪಡಿಸಿ ದೇಶಾದ್ಯಂತ ಇರುವ ಯಾವುದೇ ಶಾಖೆಯಲ್ಲಿರುವ ಖಾಲಿ ಹುದ್ದೆ ಅಥವಾ ಔಷಧಾಲಯಗಳಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅಭ್ಯರ್ಥಿಗಳು ತಮ್ಮ ಮೇಲ್ ಐಡಿಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಲು ಸೂಚಿಸಿದೆ.
ಎಲ್ಲೆಲ್ಲಿ ನೇಮಕಾತಿ: ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಚಂಡೀಗಢ್, ಪಂಜಾಬ್, ಹರಿಯಾಣ, ಜಮ್ಮು -ಕಾಶ್ಮೀರ, ತಮಿಳುನಾಡು, ದೆಹಲಿ, ಉತ್ತರಾಖಂಡ್, ಅಸ್ಸಾಂ, ಮೆಘಾಲಯ, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಕೇರಳದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ: 1.1.2021ರ ಒಳಗೆ ಎಸ್ಎಸ್ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ಫಾರ್ಮಸಿಯಲ್ಲಿ ಡಿಪ್ಲೊಮಾ (ಡಿ.ಫಾರ್ಮಸಿ) ಅಥವಾ ಫಾರ್ಮಸಿಯಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ: 31.12.2020ಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 34 ಸ್ಥಾನ, ಇತರ ಹಿಂದುಳಿದ ವರ್ಗದ ಅಭ್ಯಥಿರ್ಗಳಿಗೆ 14, ಎಸ್ಸಿಗೆ 9, ಎಸ್ಟಿಗೆ 4, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳಿಗೆ 6 ಸ್ಥಾನಗಳನ್ನು ಮೀಸಲಿರಿಸಿದ್ದು, ಅಂಗವಿಕಲ ಅಭ್ಯರ್ಥಿಗಳಿಗೆ 2 ಸ್ಥಾನ ಕಾಯ್ದಿರಿಸಲಾಗಿದೆ.
ವೇತನ: ಮಾಸಿಕ 47,920 ರೂ. ವೇತನ ಇದೆ.
ಆಯ್ಕೆ ವಿಧಾನ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳನ್ನು ಆನ್ಲೈನ್ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಅಭ್ಯಥಿರ್ಗಳು ಅಜಿರ್ ಸಲ್ಲಿಸುವಾಗಲೇ ತಮ್ಮ ಆಯ್ಕೆಯ ಪರೀಕ್ಷಾ ಕೇಂದ್ರವನ್ನು ನಮೂದಿಸಬೇಕು. ಲಿಖಿತ ಪರೀೆಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ಇಂಗ್ಲಿಷ್, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿ, ವೃತ್ತಿ ಜ್ಞಾನ ಕುರಿತ ಪ್ರಶ್ನೆಗಳನ್ನು ಕೇಳಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯಥಿರ್ಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಅಜಿರ್ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯಥಿರ್ಗಳನ್ನು ಹೊರತುಪಡಿಸಿ ಉಳಿದ ಅಭ್ಯಥಿರ್ಗಳು 750 ರೂ. ಅಜಿರ್ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 3.5.2021
ಅಧಿಸೂಚನೆಗೆ: https://bit.ly/32u3AJl
ಮಾಹಿತಿಗೆ: https://bank.sbi/web/careers
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/