ಸಿವಿಲ್‌, ಮೆಕ್ಯಾನಿಕಲ್‌, ಇಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವೀಧರರಿಂದ ಅರ್ಜಿ ಆಹ್ವಾನ

jobs
Published on

ಎಚ್​ಎಸ್​ಸಿಸಿ (ಇಂಡಿಯಾ) ಲಿಮಿಟೆಡ್​ ಎಂದೇ ಖ್ಯಾತಿ ಪಡೆದಿರುವ ಮಿನಿರತ್ನ ಸಂಸ್ಥೆಯಾಗಿರುವ ಹಾಸ್ಪಿಟಲ್​ ಸವಿರ್ಸ್​ ಕನ್ಸ್​ಲ್ಟಂಟನ್ಸಿ ಕಾರ್ಪೊರೇಷನ್​ ಲಿಮಿಟೆಡ್​ನ ನೋಯ್ಡಾ ಟಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆಗಳು: 13

ಎಚ್​ಎಸ್​ಸಿಸಿ ಲಿಮಿಟೆಡ್​ನಲ್ಲಿ ನೇಮಕ ಮಾಡಿಕೊಳ್ಳಲಾಗುವ ಹುದ್ದೆಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಸಲ್ಲಿಕೆಯಾದ ಅರ್ಜಿಗಳಲ್ಲಿ ಶಾರ್ಟ್​ಲಿಸ್ಟ್​ ಮಾಡಲಾದ ಅಣ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಕ್ರಮ, ಸ್ಥಳ, ದಿನಾಂಕ ಕುರಿತ ಮಾಹಿತಿಯನ್ನು ಮೇಲ್​ ಮೂಲಕ ತಿಳಿಸಲಾಗುವುದು. ಅಂಚೆಮೂಲಕ ಹೊರತುಪಡಿಸಿ ಉಳಿದ ಮೂಲಗಳಿಂದ ಕಳುಹಿಸಿದ ಅರ್ಜಿಗಳಿಗೆ ಮಾನ್ಯತೆ ಇಲ್ಲ.

ಹುದ್ದೆ ವಿವರ
* ಇ-2 - ಸಿವಿಲ್​/ ಎಲೆಕ್ಟ್ರಿಕಲ್​/ ಮೆಕ್ಯಾನಿಕಲ್​ - 3
* ಇ-1 - ಸಿವಿಲ್​/ ಎಲೆಕ್ಟ್ರಿಕಲ್​/ ಮೆಕ್ಯಾನಿಕಲ್​ - 5
* ಇ-0 - ಸಿವಿಲ್​/ ಎಲೆಕ್ಟ್ರಿಕಲ್​/ ಮೆಕ್ಯಾನಿಕಲ್​ - 5

ವಿದ್ಯಾರ್ಹತೆ: ಸಿವಿಲ್​/ ಎಲೆಕ್ಟ್ರಿಕಲ್​/ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಪದವಿ ಪಡೆದಿದ್ದು, ಕರಿಷ್ಠ ಶೇ.60 ಅಂಕ ಪಡೆದಿರಬೇಕು. ಸಿವಿಲ್​, ಮೆಕ್ಯಾನಿಕಲ್​, ಎಲೆಕ್ಟ್ರಿಕಲ್​ ಹುದ್ದೆಗಳಲ್ಲಿ ವೃತ್ತಿ ಅನುಭವ ಅವಶ್ಯ. ಎಲ್ಲ ಹುದ್ದೆಗಳಿಗೂ ಎಂಎಸ್​ ಆಫೀಸ್​, ಎಂಎಸ್​ ಪ್ರಾಜೆಕ್ಟ್​, ಪೆಮವೆರ ಹಾಗೂ ಇತರ ಕಂಪ್ಯೂಟರ್​ ಜ್ಞಾನ ಅವಶ್ಯ.

ವಯೋಮಿತಿ: 1.5.2021ಕ್ಕೆ ಅನ್ವಯವಾಗುವಂತೆ ಇ-0 ಕೋಡ್​ ಹುದ್ದೆಗೆ ಗರಿಷ್ಠ 24 ವರ್ಷ, ಇ-1 ಕೋಡ್​ ಹುದ್ದೆಗೆ ಗರಿಷ್ಠ 28 ವರ್ಷ, ಇ-2 ಕೋಡ್​ ಹುದ್ದೆಗೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಣ್ಯರ್ಥಿಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 6 ಸ್ಥಾನ, ಎಸ್ಸಿಗೆ 2, ಎಸ್ಟಿಗೆ 2, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 3 ಸ್ಥಾನ ಮೀಸಲಿರಿಸಲಾಗಿದೆ.

ವೇತನ: ಇ-0 ಕೋಡ್​ ಹುದ್ದೆಗೆ ಮಾಸಿಕ 30,000-1,20,000 ರೂ., ಇ-1 ಕೋಡ್​ ಹುದ್ದೆಗೆ ಮಾಸಿಕ 40,000-1,40,000 ರೂ., ಇ-2 ಕೋಡ್​ ಹುದ್ದೆಗೆ ಮಾಸಿಕ 50,000-1,60,000 ರೂ. ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 17.5.2021
ಅರ್ಜಿ ಸಲ್ಲಿಕೆ ವಿಳಾಸ: Deputy General Manager (HRM) HSCC(I)Ltd E-6(A), Sector-1, Noida (U.P)-201301 

ಅಧಿಸೂಚನೆಗೆ: https://bit.ly/3u9T2eG
ಮಾಹಿತಿಗೆ: http://www.hsccltd.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net