ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಯಲ್ಲಿ ಡಿಪ್ಲೊಮಾ ಪದವೀಧರರಿಗೆ ಭರ್ಜರಿ ಅವಕಾಶ

udyogamitra
Published on

ದೇಶದ ಪ್ರಮುಖ ಟೆಲಿಕಾಂ ಕಂಪೆನಿ ಮತ್ತು ಬಹು ಘಟಕಗಳನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮವಾಗಿರುವ ಐಟಿಐ ಲಿಮಿಟೆಡ್​ ಐಟಿ ಮತ್ತು ಟೆಲಿಕಾಂ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ರಕ್ಷಣಾ ಮತ್ತು ರೈಲ್ವೇ ಕ್ಷೇತ್ರಗಳಲ್ಲಿ ವೈವಿಧ್ಯಮಯ ಉತ್ಪನ್ನಗಳ ತಯಾರಿಕೆ ಮತ್ತು ಸೌರ ಉಪಕರಣಗಳು, ಎನ್​ಜಿಎನ್​ ಉತ್ಪನ್ನಗಳು, ಜಿಪಿಒಎನ್​, ಎಲ್​ಇಡಿ ಲೈಟಿಂಗ್​, ಎಚ್​ಡಿಪಿಇ, ಒಎ್​ಸಿ, ಹಾಗೂ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಐಟಿಐ ಹೆಚ್ಚು ಗಮನ ಹರಿಸುತ್ತಿದ್ದು, ಇಂಜಿನಿಯರಿಂಗ್​ ಡಿಪ್ಲೊಮಾ ಪದವೀಧರನ್ನು ನೇಮಕ ಮಾಡಿಕೊಳ್ಳಲು ಉತ್ತರ ಪ್ರದೇಶ ಟಕದಿಂದ ಅಜಿರ್ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 40

40 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯಥಿರ್ಗಳಿಗೆ 17 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳಿಗೆ 4, ಇತರ ಹಿಂದುಳಿದ ವರ್ಗಕ್ಕೆ 11, ಎಸ್ಸಿಗೆ 6, ಎಸ್ಟಿಗೆ 2 ಸ್ಥಾನಗಳನ್ನು ಮೀಸಲಿರಿಸಿದೆ.

ಹುದ್ದೆ ವಿವರ
* ಮೆಕ್ಯಾನಿಕಲ್​ - 29
* ಎಲೆಕ್ಟ್ರಿಕಲ್​ - 7
* ಎಲೆಕ್ಟ್ರಾನಿಕ್ಸ್​ - 4

ಶೈಕ್ಷಣಿಕ ಅರ್ಹತೆ: ಪ್ರೌಢ ಶಿಕ್ಷಣ/ ತತ್ಸಮಾನ ಶಿಕ್ಷಣ, ಮೆಕ್ಯಾನಿಕ್​, ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ನಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್​ ಮಾಡಿದ್ದು, ಕನಿಷ್ಠ ಶೇ.60 ಅಂಕ (ಮೀಸಲಾತಿ ಅಭ್ಯಥಿರ್ಗಳು ಶೇ.55 ಅಂಕ) ಪಡೆದಿರಬೇಕು.

ವಯೋಮಿತಿ: ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯಥಿರ್ಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಮೂಲ ವೇತನ, ಡಿಎ ಮತ್ತು ಮನೆ ಬಾಡಿಗೆ ಭತ್ಯೆ ಸೇರಿ ಮಾಸಿಕ 19,029 ರೂ. ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯಥಿರ್ಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳನ್ನು ಲಿಖಿತ ಪರೀೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿನ ಅಂಕ ಆಧರಿಸಿ ಅಂತಿಮ ಪಟ್ಟಿಯ ಅಭ್ಯಥಿರ್ಗಳನ್ನು ವೈದ್ಯಕಿಯ ಪರೀೆಗೆ ಒಳಪಡಿಸಿ ಅದರಲ್ಲಿ ಉತ್ತೀರ್ಣರಾದವರನ್ನು ಆಯ್ಕೆ ಮಾಡಲಾಗುವುದು.

ಸೂಚನೆ: ಆನ್​ಲೈನ್​ನಲ್ಲಿ ಅಜಿರ್ ಸಲ್ಲಿಸಿದ ಬಳಿಕ ಅಜಿರ್ಯ ಪ್ರತಿ ಪಡೆದು, ಅಗತ್ಯ ದಾಖಲೆಗಳ ಪ್ರತಿಗಳ ಜತೆ ದಿ.21.5.2021ರ ಒಳಗಾಗಿ CM —HR & Legal, Recruitment Cell ITI LIMITED SULTANPUR ROAD, RAEBARELI, UTTAR PRADESH— 229010 ವಿಳಾಸಕ್ಕೆ ಪೋಸ್ಟ್​ ಮಾಡಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 15.5.2021
ಅಧಿಸೂಚನೆಗೆ: https://bit.ly/3taDtSS
ಮಾಹಿತಿಗೆ: http://www.itiltd.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net