ವಿವಿಧ ಪದವೀಧರರಿಗೆ ಲೆದರ್​ ರಿಸರ್ಚ್​ ಇನ್​ಸ್ಟಿಟ್ಯೂಟ್‌ನಲ್ಲಿವೆ ಉದ್ಯೋಗಾವಕಾಶ; 47 ಹುದ್ದೆಗಳಿಗೆ ಆಹ್ವಾನ

udyoga
Published on

ಕೌನ್ಸಿಲ್​ ಆಫ್‌ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (ಸಿಎಸ್​ಐಆರ್​) ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್​ ಲೆದರ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ (ಸಿಎಲ್​ಆರ್​ಐ) ಚೆನ್ನೆ$ನಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರಾಜೆಕ್ಟ್​ ಸ್ಟಾಫ್‌​ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 47

ಸಿಎಲ್​ಆರ್​ಐನಲ್ಲಿನ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಹುದ್ದೆಗಳಿಗೆ ಅನುಗುಣವಾಗಿ 4 ತಿಂಗಳಿಂದ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯಥಿರ್ಗಳ ಕಾರ್ಯಕ್ಷಮತೆ ಆಧರಿಸಿ ಮುಂದಿನ ಯೋಜನೆಗೆ ನೇಮಕ ಮಾಡಿಕೊಳ್ಳಲಾಗುವುದು.

ಹುದ್ದೆ ವಿವರ

* ವೆರ್ಟನರಿ ಕನ್ಸಲ್ಟಂಟ್​ - 1

* ಸೀನಿಯರ್​ ಪ್ರಾಜೆಕ್ಟ್​ ಅಸೋಸಿಯೇಟ್​ - 2

* ಪ್ರಾಜೆಕ್ಟ್​ ಅಸೋಸಿಯೇಟ್​ ಐಐ - 3

* ಪ್ರಾಜೆಕ್ಟ್​ ಅಸೋಸಿಯೇಟ್​ ಐ - 12

* ಪ್ರಾಜೆಕ್ಟ್​ ಅಸಿಸ್ಟೆಂಟ್​ - 7

* ಸೈಂಟಿಫಿಕ್​ ಅಡ್ಮಿನಿಸ್ಟ್ರೆಟೀವ್​ ಅಸಿಸ್ಟೆಂಟ್​ - 19

* ಸೈಂಟಿಫಿಕ್​ ಅಡ್ಮಿನಿಸ್ಟ್ರೆಟೀವ್​ ಸೈಂಟಿಸ್ಟ್​ - 2

* ಫೀಲ್ಡ್​ ಅಸಿಸ್ಟೆಂಟ್​ - 1

ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಸಿವಿಲ್​, ಮೆಕ್ಯಾನಿಕಲ್​, ಕೆಮಿಕಲ್​, ಲೆದರ್​ ಟೆಕ್ನಾಲಜಿ, ಕಂಪ್ಯೂಟರ್​ ಸೈನ್ಸ್​/ ಕಂಪ್ಯೂಟರ್​ ಅಪ್ಲಿಕೇಷನ್ಸ್​/ ಸ್ಟಾ$ಟಿಸ್ಟಿಕ್ಸ್​ ಇಂಜಿನಿಯರಿಂಗ್​, ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಇಂಡಸ್ಟ್ರಿಯಲ್​ ಬಯೋ ಟೆಕ್ನಾಲಜಿ, ಕೆಮಿಸ್ಟ್ರಿ, ಆರ್ಗ್ಯಾನಿಕ್​ ಕೆಮಿಸ್ಟ್ರಿ, ಇನ್​ಆರ್ಗ್ಯಾನಿಕ್​, ಫಿಜಿಕಲ್​, ಅನಾಲಿಟಿಕಲ್​ ಕೆಮಿಸ್ಟ್ರಿ, ಫಿಜಿಕ್ಸ್​, ಜುವಾಲಜಿಯಲ್ಲಿ ಬಿ.ಟೆಕ್​, ಬಿಕಾಂ, ಬಿಎಸ್ಸಿ, ಎಂಎಸ್ಸಿ, ಎಂವಿಎಸ್​ಸಿ, ಡಾಕ್ಟೋರಲ್​ ಪದವಿ.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 35 ರಿಂದ 50 ವರ್ಷ ವಯೀಮಿತಿ ನಿಗದಿಪಡಿಸಲಾಗಿದೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 18,000 ರೂ.ನಿಂದ 42,000 ರೂ. ವೇತನ ಇದ್ದು, ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

ಸಂದರ್ಶನ ನಡೆಯುವ ದಿನಾಂಕ: ಸೈಂಟಿಫಿಕ್​ ಅಡ್ಮಿನಿಸ್ಟ್ರೆಟೀವ್​ ಅಸಿಸ್ಟೆಂಟ್​ ಮತ್ತು ಫೀಲ್ಡ್​ ಅಸಿಸ್ಟೆಂಟ್​ಗೆ ಏಪ್ರಿಲ್​ 27ರಂದು, ಉಳಿದ ಹುದ್ದೆಗಳಿಗೆ ಏ.29ರಂದು ಬೆಳಗ್ಗೆ 9 ಗಂಟೆಯಿಂದ ಸಂದರ್ಶನ ನಡೆಸಲಾಗುವುದು. 11 ಗಂಟೆ ನಂತರ ಬರುವ ಅಭ್ಯಥಿರ್ಗಳಿಗೆ ಪ್ರವೇಶ ಇರುವುದಿಲ್ಲ.

ಅಧಿಸೂಚನೆಗೆ: https://bit.ly/3eigLTg

ಮಾಹಿತಿಗೆ: www.clri.org

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net