ಕ್ರೀಡಾ ಪಟುಗಳಿಗೆ ಭರ್ಜರಿ ಅವಕಾಶ‌: ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾದಲ್ಲಿ 220 ಹುದ್ದೆಗಳಿಗೆ ಆಹ್ವಾನ

udyoga-sports
Published on

ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾನಲ್ಲಿ (ಎಸ್​ಎಐ) ಅಸಿಸ್ಟೆಂಟ್​ ಕೋಚ್​ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯಥಿರ್ಗಳಿಂದ ಅಜಿರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 220

ಎಸ್​ಎಐನಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಸಿಸ್ಟೆಂಟ್​ ಕೋಚ್​ ಹುದ್ದೆಯು ಆರಂಭದಲ್ಲಿ 4 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಪ್ರತಿವರ್ಷದ ಅಭ್ಯಥಿರ್ಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.

ಯಾವ ವಿಭಾಗಗಳಲ್ಲಿ ಹುದ್ದೆ?

*ಅರ್ಚರಿ - 13 * ಅಥ್ಲೆಟಿಕ್ಸ್​ - 20 * ಬಾಕ್ಸಿಂಗ್​ - 13 *ಹಾಕಿ - 13 *ಶೂಟಿಂಗ್​ - 3 * ವೇಟ್​ಲಿಫ್ಟಿಂಗ್​ - 13 * ಕುಸ್ತಿ& 13 * ಸೈಕ್ಲಿಂಗ್​ - 13 * ಫೆನ್ಸಿಂಗ್​ - 13 * ಜೂಡೋ - 13 * ರೋಯಿಂಗ್​ - 13 * ಸ್ವಿಮ್ಮಿಂಗ್​ - 7 * ಟೇಬಲ್​ ಟೆನಿಸ್​ - 7 * ಬಾಸ್ಕೆಟ್​ ಬಾಲ್​ - 6 * ಫುಟ್ಬಾಲ್- & 10 * ಜಿಮ್ನಾಸ್ಟಿಕ್ಸ್​ - 6 * ಹ್ಯಾಂಡ್​ಬಾಲ್​ - 3 * ಕಬಡ್ಡಿ ಮತ್ತು ಖೋ&ಖೋ - 7 * ಕರಾಟೆ - 4 * ಕಯಾಕಿಂಗ್​ ಆ್ಯಂಡ್​ ಕನೋಯಿಂಗ್​ - 6 * ಸೆಪಕ್​ ಟಕ್ರಾ - 5 * ಸ್ಟಾ್​ಬಾಲ್​ - 1 * ಟೆಕ್ವಾಂಡೋ - 6 * ವಾಲಿಬಾಲ್​ - 6 ಹಾಗೂ ವುಶು ವಿಭಾಗದಲ್ಲಿ 6 ಹುದ್ದೆಗಳಿವೆ.

ವಿದ್ಯಾರ್ಹತೆ: ಎಸ್​ಎಐ, ಎನ್​ಎನ್​ಐಎಸ್​ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೋಚಿಂಗ್​ನಲ್ಲಿ ಡಿಪ್ಲೊಮಾ ಮಾಡಿರಬೇಕು. ಒಲಿಂಪಿಕ್​/ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಅಭ್ಯಥಿಗಳು ಅರ್ಹರು.

ವಯೋಮಿತಿ: ಅಜಿರ್ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 40 ವರ್ಷ.

ವೇತನ: ಮಾಸಿಕ 41,420 ರೂ. ನಿಂದ 1,12,400 ರೂ. ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನ ದಿನಾಂಕ, ಸ್ಥಳ, ಸಮಯವನ್ನು ಎಸ್​ಎಐ ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 20.5.2021

ಅಧಿಸೂಚನೆಗೆ: https://bit.ly/3tC7koh

ಮಾಹಿತಿಗೆ: https://sportsauthorityofindia.nic.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net