More

    ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಭರ್ತಿಗೆ ಕಾಮರ್ಸ್‌ ಪದವೀಧರರಿಂದ ಅರ್ಜಿ ಆಹ್ವಾನ

    ಎಕನಾಮಿಕ್ಸ್ ಹಾಗೂ ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಪರಿಣತಿ ಹೊಂದಿದ್ದು, ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಅವಕಾಶ ಕಲ್ಪಿಸಿದೆ. ಯುಪಿಎಸ್‍ಸಿ ಅಖಿಲ ಭಾರತ ಆರ್ಥಿಕ ಸೇವೆ ಹಾಗೂ ಅಂಕಿ-ಅಂಶಗಳ ಸೇವೆಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ.

    ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಈ ಪರೀಕ್ಷೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ವಿಸ್ತೃತ ಮಾಹಿತಿ ಪುಸ್ತಕದಲ್ಲಿ ನೀಡಲಾಗಿರುವ ವಿವರಗಳನ್ನು ಮನನ ಮಾಡಿಕೊಂಡು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

    ಶೈಕ್ಷಣಿಕ ಅರ್ಹತೆ:
    ಸ್ಟ್ಯಾಟಿಸ್ಟಿಕ್ಸ್ ಸರ್ವಿಸ್ ಪರೀಕ್ಷೆಗೆ ಸ್ಟ್ಯಾಟಿಸ್ಟಿಕ್ಸ್/ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್/ ಅಪ್ಲೈಡ್ ಸ್ಟ್ಯಾಟಿಸ್ಟಿಕ್ಸ್ ನಲ್ಲಿ ಪದವಿ ಪಡೆದಿರಬೇಕು. ಎಕನಾಮಿಕ್ಸ್ ಸರ್ವಿಸ್ ಪರೀಕ್ಷೆಗೆ ಎಕನಾಮಿಕ್ಸ್/ ಅಪ್ಲೈಡ್ ಎಕನಾಮಿಕ್ಸ್/ ಬಿಜಿನೆಸ್ ಎಕನಾಮಿಕ್ಸ್/ ಎಕನೋಮೆಟ್ರಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿರಬೇಕು.

    ಯಾವ ಸೇವೆಗಳಲ್ಲಿ ನೇಮಕಾತಿ?
    * ಇಂಡಿಯನ್ ಎಕನಾಮಿಕ್ ಸರ್ವಿಸ್ – 15
    * ಇಂಡಿಯನ್ ಸ್ಟಾೃಟಿಸ್ಟಿಕ್ಸ್ ಸರ್ವಿಸ್ – 11

    ವಯೋಮಿತಿ: 1.1.2021ಕ್ಕೆ ಅನ್ವಯಿಸುವಂತೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. (1991 ಆಗಸ್ಟ್ 2 ರಿಂದ 2000 ಆಗಸ್ಟ್ 1ರ ನಡುವೆ ಜನಿಸಿರಬೇಕು) ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇರುತ್ತದೆ.

    ಪರೀಕ್ಷೆ ಯಾವಾಗ?
    ಪರೀಕ್ಷೆಯು ಜು.16ರಂದು ನಡೆಯಲಿದೆ. ಇದರಲ್ಲಿ ಅರ್ಹತೆ ಪಡೆದವರನ್ನು ಸಂದರ್ಶನಕ್ಕೆ ಆಯ್ಕೆಮಾಡಲಾಗುವುದು.

    ಪರೀಕ್ಷೆ ವಿಧಾನ:
    ಪರೀಕ್ಷೆಯು ಬಹು ಆಯ್ಕೆ ಮಾದರಿ ಹಾಗೂ ಕನ್ವೆಂಷನಲ್ ಮಾದರಿಯಲ್ಲಿರುತ್ತದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಪ್ರಶ್ನೆ ಪತ್ರಿಕೆಯು ಇಂಗ್ಲಿಷ್‍ನಲ್ಲಿ ಮಾತ್ರ ಇರಲಿದ್ದು, ಉತ್ತರವನ್ನು ಇಂಗ್ಲಿಷ್‍ನಲ್ಲೇ ಉತ್ತರಿಸಲು ನಿರ್ದೇಶಿಸಲಾಗಿದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಅನ್ನು ಏ.26ರ ಒಳಗೆ ಪಾವತಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ:
    ಅಭ್ಯರ್ಥಿಗಳು ವೆಬ್‍ಸೈಟ್‍ನಲ್ಲಿ ನೀಡಲಾದ ಲಿಂಕ್ ಮೂಲಕ ಅಗತ್ಯ ಮಾಹಿತಿ ಹಾಗೂ ಅಗತ್ಯ ದಾಖಲೆಗಳ ಸ್ಕಾೃನ್ ಕಾಪಿಯನ್ನು ಕಳುಹಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಆಯ್ಕೆಯ ಪರೀಕ್ಷಾ ಕೇಂದ್ರ ಹಾಗೂ ಯಾವ ಸರ್ವಿಸ್‍ಗೆ ಎಂದು ನಮೂದಿಸಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಹಿಂಪಡೆಯಲು ಅವಕಾಶ ಇದ್ದು, ಮೇ4-10ರ ವರೆಗೆ ಅರ್ಜಿ ಹಿಂಪಡೆಯಬಹುದಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 27.4.2021
    ಅಧಿಸೂಚನೆಗೆ: https://bit.ly/39UMHvx
    ಮಾಹಿತಿಗೆ: http://www.upsc.gov.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕೇಂದ್ರ ಸರ್ಕಾರದ ಪಿಎಫ್​ಸಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಒಂದೂವರೆ ಲಕ್ಷ ರೂ. ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts