

ಪವರ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ (ಪಿಎಫ್ಸಿ) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ದೆಹಲಿ ವಿಭಾಗದಲ್ಲಿ ಕೆಲ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಹತೆಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 11
ಪವರ್ ಫೈನಾನ್ಸ್ ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಿಗೆ ಶಾರ್ಟ್ಲಿಸ್ಟ್ ಮಾಡಲಾಗುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನಕ್ಕೆ ಬೇರೆ ಊರಿನಿಂದ ಬರುವ ಅಭ್ಯರ್ಥಿಗಳಿಗೆ ಸಂಸ್ಥೆಯ ನಿಯಮದ ಪ್ರಕಾರ ಪ್ರಯಾಣ ಭತ್ಯೆ ನೀಡಲಾಗುವುದು.
* ಅಸಿಸ್ಟೆಂಟ್ ಆಫೀಸರ್ (ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್-1, ಅಪ್ಲಿಕೇಷನ್ ಡೆವಲಪ್ಮೆಂಟ್-1, ಐಟಿ ಸೆಕ್ಯುರಿಟಿ - 1 ) - 3
* ಡೆಪ್ಯುಟಿ ಮ್ಯಾನೇಜರ್ (ಡಿಸಾಸ್ಟರ್ ರಿಕವರಿ) - 1
* ಡೆಪ್ಯುಟಿ ಆಫೀಸರ್ (ಲೀಗಲ್-2, ಎಚ್ಆರ್ - 1) - 3
* ಮ್ಯಾನೇಜರ್ - 2
* ಮ್ಯಾನೇಜರ್ ರಾಜ್ಭಾಷಾ- 1
* ಡೆಪ್ಯುಟಿ ಮ್ಯಾನೇಜರ್ (ಪಿಆರ್) - 1
ವಿದ್ಯಾರ್ಹತೆ: ಸಿಎಸ್/ಐಟಿ, ಎಲೆಕ್ಟ್ರಿಕಲ್ನಲ್ಲಿ ಬಿಇ, ಬಿಟೆಕ್ ಎಂಎಸ್ಸಿ(ಐಟಿ)/ ಸ್ನಾತಕೋತ್ತರ ಡಿಪ್ಲೊಮಾ, ಎಂಕಾಂ, ಕನಿಷ್ಠ ಒಂದು ವರ್ಷದ ಐಟಿ ತರಬೇತಿ, ಎಂಸಿಎ/ ಪಿಜಿಡಿಸಿಎ, ಎಂಬಿಎ/ ಎಂಇ/ ಎಂಟೆಕ್, ಎಲ್ಎಲ್ಬಿ ಪದವಿ, ಯಾವುದೇ ಪದವಿಯೊಂದಿಗೆ ಕನಿಷ್ಠ 2 ವರ್ಷದ ಪರ್ಸನಲ್ ಮ್ಯಾನೇಜ್ಮೆಂಟ್/ ಎಚ್ಆರ್ನಲ್ಲಿ ಡಿಪ್ಲೊಮಾ, ಸಿಎ/ಸಿಎಂಎ, ಇಂಗ್ಲಿಷ್ ಒಂದು ವಿಷಯವಾಗಿ ಹಿಂದಿ ಸ್ನಾತಕೋತ್ತರ ಪದವಿ/ ಟ್ರಾನ್ಸ್ಲೇಷನ್ನಲ್ಲಿ ಪದವಿ/ ಡಿಪ್ಲೊಮಾ, ಪಿಆರ್/ ಮಾಸ್ ಕಮ್ಯುನಿಕೇಷನ್/ ರ್ಜನಲಿಸಂನಲ್ಲಿ ಸ್ನಾತಕೋತ್ತರ ಪದವಿ/ 2 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.55&60 ಅಂಕ ಪಡೆದಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿ 31, 32, 34, 37ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಅಸಿಸ್ಟೆಂಟ್ ಆಫೀಸರ್ಗೆ ಮಾಸಿಕ 53,000 ರೂ., ಡೆಪ್ಯುಟಿ ಆಫೀಸರ್ಗೆ ಮಾಸಿಕ 71,000 ರೂ., ಆಫೀಸರ್ಗೆ ಮಾಸಿಕ 89,000, ಅಸಿಸ್ಟೆಂಟ್ ಮ್ಯಾನೇಜರ್ಗೆ 1,06,000 ರೂ., ಡೆಪ್ಯುಟಿ ಮ್ಯಾನೇಜರ್ಗೆ ಮಾಸಿಕ 1,24,000 ರೂ. ಹಾಗೂ ಮ್ಯಾನೇಜರ್ಗೆ 1,42,000 ರೂ. ವೇತನ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 23.4.2021
ಅಧಿಸೂಚನೆಗೆ: https://bit.ly/3szlPYI
ಮಾಹಿತಿಗೆ: http://www.pfcindia.com
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: