More

    ಮಹಾನಗರ ಪಾಲಿಕೆಗಳಲ್ಲಿ 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ಮುನ್ಸಿಪಲ್​ ಕಾರ್ಪೋರೇಷನ್​ (ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ) ರಾಜ್ಯದ ಮಹಾನಗರ ಪಾಲಿಕೆಗಳ ಪೌರಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ.

    ಒಟ್ಟು ಹುದ್ದೆಗಳು: 219

    ಕಲಬುರಗಿ ಜಿಲ್ಲೆಯ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 219 ಪೌರಕಾರ್ಮಿಕ ಹುದ್ದೆಗೆ ದಿನಗೂಲಿ/ ಕ್ಷೇಮಾಭಿವೃದ್ಧಿ/ ಗುತ್ತಿಗೆ/ ಹೊರಗುತ್ತಿಗೆ/ ಸಮಾನ ಕೆಲಸಕ್ಕೆ ಸಮಾನ ವೇತನ/ ಇತರೆ ಆಧಾರದ ಮೇಲೆ ಕರ್ತವ್ಯ ನಿರತರಿಗೆ ಆದ್ಯತೆ ನೀಡಿ ಪರಿಗಣಿಸಲಾಗುವುದು.

    219 ಹುದ್ದೆಗಳಲ್ಲಿ 126 ಹುದ್ದೆಗಳು ಈ ಹಿಂದಿನ ಮಹಾನಗರ ಪಾಲಿಕೆ ಕಲಬುರಗಿ ಪೌರಕಾರ್ಮಿಕರ ನೇರ ನೇಮಕಾತಿ ಅಧಿಸೂಚನೆ ತರುವಾಯ ಕೈತಪ್ಪಿಹೋದ ರೋಸ್ಟರ್​ವಾರು ಬಿಂದುಗಳ ಬಾಕಿ ಹುದ್ದೆಗಳಾಗಿವೆ. ಉಳಿದ 93 ಹುದ್ದೆಗಳು ಈ ಹಿಂದಿನ ಪೌರಕಾರ್ಮಿಕರ ನೇರ ನೇಮಕಾತಿ ಅಧಿಸೂಚನೆ ತರವಾಯ ನೇರ ನೇಮಕಾತಿಗಾಗಿ ಖಾಲಿ ಇರುವ ಹುದ್ದೆಗಳ ಅಧಿಸೂಚನೆಯಾಗಿದೆ.

    ಆಸಕ್ತ ಅಭ್ಯರ್ಥಿಗಳು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರಗಿ, ಜಿಲ್ಲಾಧಿಕಾರಿಗಳು ಕಲಬುರಗಿ ಕಚೇರಿಯಿಂದ ಅಥವಾ ಆಯುಕ್ತರು, ಮಹಾನಗರ ಪಾಲಿಕೆ, ಕಲಬುರಗಿ ಕಚೇರಿಯಿಂದ ಪಡೆದುಕೊಂಡು ಅರ್ಜಿ ನಮೂನೆಯಲ್ಲಿನ ಎಲ್ಲ ಅಂಕಣಗಳನ್ನು ಭರ್ತಿ ಮಾಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 24 ಸ್ಥಾನ, ಮಹಿಳಾ ಅಭ್ಯರ್ಥಿಗಳಿಗೆ 49, ಗ್ರಾಮೀಣ ಅಭ್ಯರ್ಥಿಗಳಿಗೆ 89, ಮಾಜಿ ಸೈನಿಕರಿಗೆ 15, ಅಂಗವಿಕಲರಿಗೆ 20, ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ 9, ಯೋಜನಾ ನಿರಾಶ್ರಿತರಿಗೆ 13 ಸ್ಥಾನ ಮೀಸಲಿರಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 21.4.2021
    ಅರ್ಜಿ ಸಲ್ಲಿಸುವ ವಿಳಾಸ: ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಕಲಬುರಗಿ, ಜಿಲ್ಲಾಧಿಕಾರಿಗಳ ಕಚೇರಿ, ಮೊದಲ ಮಹಡಿ, ಕೊಠಡಿ ಸಂಖ್ಯೆ 11, ಮಿನಿ ವಿಧಾನಸೌಧ, ಕಲಬುರಗಿ & 585102

    ಅಧಿಸೂಚನೆಗೆ: https://bit.ly/3sg2GdT
    ಮಾಹಿತಿಗೆ: https://kalaburagi.nic.in

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಹಿಳೆಯರಿಂದ 34 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಪದವೀಧರರಿಗೆ ಬಂಪರ್​- ಬ್ಯಾಂಕ್ ಆಫ್​ ಬರೋಡಾದಲ್ಲಿ 511 ಹುದ್ದೆಗಳಿಗೆ ಆಹ್ವಾನ: ಕರ್ನಾಟಕದಲ್ಲೂ ಅವಕಾಶ

    ಬಿಇ ಪದವಿಧರರೆ? ಕೇಂದ್ರ ಸರ್ಕಾರದಲ್ಲಿವೆ 40 ಹುದ್ದೆಗಳು- 1.80 ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts