More

    ಬಿಇ ಪದವಿಧರರೆ? ಕೇಂದ್ರ ಸರ್ಕಾರದಲ್ಲಿವೆ 40 ಹುದ್ದೆಗಳು- 1.80 ಲಕ್ಷ ರೂ.ವರೆಗೆ ಸಂಬಳ

    ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ತನ್ನ 26ನೇ ಬ್ಯಾಚ್ ಮೂಲಕ ಎಕ್ಸಿಕ್ಯೂಟೀವ್ ಟ್ರೇನಿ ತರಬೇತಿ ನೀಡಲು ಸಿದ್ಧತೆ ನಡೆಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಸಬಹುದು.
    ಒಟ್ಟು ಸ್ಥಾನಗಳು: 40

    ಪವರ್ ಗ್ರಿಡ್ ಸಂಸ್ಥೆಗೆ ನೇಮಕ ಮಾಡಿಕೊಳ್ಳಲಾಗುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

    ಸ್ಥಾನಗಳ ವಿವರ
    * ಇಟಿ (ಎಕ್ಸಿಕ್ಯೂಟಿವ್ ಟ್ರೇನಿ) ಎಲೆಕ್ಟ್ರಿಕಲ್ – 20
    * ಇಟಿ ಎಲೆಕ್ಟ್ರಾನಿಕ್ಸ್ – 10
    * ಇಟಿ ಸಿವಿಲ್ – 10

    ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಪವರ್ ಸಿಸ್ಟಂ/ ಪವರ್ ಇಂಜಿನಿಯರಿಂಗ್/ ಸಿವಿಲ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್‍ನಲ್ಲಿ ಬಿಇ, ಬಿಟೆಕ್ ಮಾಡಿದ್ದು, ಕನಿಷ್ಠ ಶೇ.70 ಅಂಕ ಪಡೆದಿರಬೇಕು. 2021ನೇ ಸಾಲಿನಲ್ಲಿ ಗೇಟ್‍ಗೆ ನೋಂದಾಯಿತರಾಗಿರಬೇಕು.

    ವಯೋಮಿತಿ: ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ಮೀಸಲಾತಿ: 40 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 23 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 7, ಎಸ್‍ಇಗೆ 3, ಎಸ್ಟಿಗೆ 2, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಇಟಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‍ನಲ್ಲಿ ತಲಾ ಒಂದೊಂದು ಸ್ಥಾನ ಕಾಯ್ದಿರಿಸಲಾಗಿದೆ.

    ಅರ್ಜಿ ಸಲ್ಲಿಕೆ ವಿಧಾನ: 2021ರ ಗೇಟ್ ನೋಂದಣಿ ಸಂಖ್ಯೆ ಹಾಗೂ ಇತರ ದಾಖಲೆಗಳನ್ನು ನೀಡಿ ಪವರ್‍ಗ್ರಿಡ್ ವೆಬ್‍ಸೈಟ್‍ನಲ್ಲಿ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಗೇಟ್ ನೋಂದಣಿ ಸಂಖ್ಯೆ ಹಾಗೂ ಅಭ್ಯರ್ಥಿಯ ಹೆಸರನ್ನು ಸರಿಯಾಗಿ ನೋಂದಣಿ ಮಾಡಬೇಕು. ವೆಬ್‍ಸೈಟ್ ಲಾಗಿನ್ ಐಡಿ, ನೋಂದಣಿ ಸಂಖ್ಯೆಯನ್ನು ಕೊನೆಯವರೆಗೆ ಕಾಯ್ದಿರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಅಂಚೆ ಮೂಲಕ ಅರ್ಜಿ ಕಳುಹಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಸಂಸ್ಥೆಯ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು.

    ವೇತನ: ಮೊದಲ ವರ್ಷದ ತರಬೇತಿ ಅವಧಿಯಲ್ಲಿ ಮಾಸಿಕ 60,000 – 1,80,000 ರೂ. ವೇತನ ನೀಡಲಾಗುವುದು. ನಂತರ ಇದೇ ವೇತನ ಶ್ರೇಣಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಿಸಲಾಗುವುದು. ಆಗ ಡಿಎ, ಮನೆ ಬಾಡಿಗೆ ಭತ್ಯೆ, ಮಾಸಿಕ ಭತ್ಯೆ, ಮೊಬೈಲ್ ಸೌಲಭ್ಯ, ಪಿಎï, ಗ್ರಾಚುಟಿ, ಪೆನ್‍ಷನ್ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

    ಸೇವಾ ಬಾಂಡ್: ಆಯ್ಕೆಯಾಗುವ ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು 5,00,000 ರೂ. ಸೇವಾಬಾಂಡ್ ಹಾಗೂ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು 2,50,000 ರೂ. ಸೇವಾ ಬಾಂಡ್ ನೀಡಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 15.4.2021
    ಅಧಿಸೂಚನೆಗೆ: https://bit.ly/3dhEouF
    ಮಾಹಿತಿಗೆ: http://www.powergridindia.com

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ಪದವೀಧರರಿಗೆ ಆದಾಯ ತೆರಿಗೆ ಇಲಾಖೆಯಿಂದ ಆಹ್ವಾನ: ನಾಳೆಯೇ ಕೊನೆಯ ದಿನ

    ಅಂಗನವಾಡಿಯಲ್ಲಿದೆ 90 ಕಾರ್ಯಕರ್ತೆ, ಸಹಾಯಕಿ ಹುದ್ದೆಗಳು- 4ನೇ ತರಗತಿಯವರಿಗೂ ಅವಕಾಶ

    ಕಾಮರ್ಸ್‌ ಪದವೀಧರರಿಗೆ ಭರ್ಜರಿ ಅವಕಾಶ: ಆರ್ಥಿಕ ವ್ಯವಹಾರ ಇಲಾಖೆಯಲ್ಲಿ 34 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts