More

    ಕಾಮರ್ಸ್‌ ಪದವೀಧರರಿಗೆ ಭರ್ಜರಿ ಅವಕಾಶ: ಆರ್ಥಿಕ ವ್ಯವಹಾರ ಇಲಾಖೆಯಲ್ಲಿ 34 ಹುದ್ದೆಗಳು

    ಆರ್ಥಿಕ ವ್ಯವಹಾರ ಇಲಾಖೆಯಲ್ಲಿನ (ಡಿಇಎ) ವಿವಿಧ ವಿಭಾಗಗಳಲ್ಲಿ ಯಂಗ್  ಪ್ರೊಫೆಷನಲ್ಸ್ ಹಾಗೂ ಕನ್ಸಲ್ಟಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವೆಬ್‍ಸೈಟ್ ಪೋರ್ಟಲ್ ಮೂಲಕ ಕಳುಹಿಸಲಾಗುವ ಅರ್ಜಿಗಳಿಗೆ ಮಾತ್ರ ಮಾನ್ಯತೆ ನೀಡಲಾಗುವುದು.

    ಒಟ್ಟು ಹುದ್ದೆಗಳು: 34

    ಡಿಇಎ ವಿಭಾಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿz್ದÉೀವೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸುವಂತೆ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. 3 ವರ್ಷದ ಒಪ್ಪಂದದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಒಂದು ವರ್ಷ ಅವಧಿ ವಿಸ್ತರಿಸಲಾಗುವುದು.

    ಹುದ್ದೆ ವಿವರ
    * ಯಂಗ್ ಪ್ರೊಫೆಷನಲ್ಸ್ (ಜನರಲ್/ ಫೈನಾನ್ಸ್)- 18
    ಎಕನಾಮಿಕ್ಸ್/ ಫೈನಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಬಿಎ (ಫೈನಾನ್ಸ್) ಅಥವಾ ಎಲ್‍ಎಲ್‍ಎಂ ಮಾಡಿರುವ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 40,000 ವೇತನ ಇದೆ. ವೇತನ ಹೆಚ್ಚಳ ಹಾಗೂ ಇತರ ಭತ್ಯೆ ಇರುವುದಿಲ್ಲ.

    * ಕನ್ಸಲ್ಟಂಟ್ (ಜನರಲ್/ ಫೈನಾನ್ಸ್) – 16
    ಎಕನಾಮಿಕ್ಸ್/ ಫೈನಾನ್ಸ್ನ ಲ್ಲಿ ಸ್ನಾತಕೋತ್ತರ ಪದವಿ/ ಎಂಬಿಎ (ಫೈನಾನ್ಸ್)/ ಎಲ್‍ಎಲ್‍ಎಂ ಜತೆ ವೃತ್ತಿ ಅನುಭವ ಅವಶ್ಯ. ಗರಿಷ್ಠ ವಯೋಮಿತಿ 50 ವರ್ಷ ಎಂದು ನಿಗದಿಪಡಿಸಲಾಗಿದೆ. ಮಾಸಿಕ 80,000 ರೂ. ವೇತನ ನಿಗದಿಪಡಿಸಲಾಗಿದೆ. ವೇತನ ಹೆಚ್ಚಳ ಹಾಗೂ ಇತರ ಯಾವುದೇ ಭತ್ಯೆಗಳಿರುವುದಿಲ್ಲ.

    ಯಾವ ವಿಭಾಗಳಲ್ಲಿ ಉದ್ಯೋಗ?
    ಎಕನಾಮಿಕ್, ಫೈನಾನ್ಸ್, ಕಾನೂನು ವಿಭಾಗಗಳ ಬಜೆಟ್, ಎಫ್ಎಸ್‍ಎಲ್‍ಆರ್, ಆ್ಡ್ಯಂಡ್‌ ಬ್ಯಾಂಕ್ ಆ್ಯಂಡ್ ಏಷ್ಯನ್, ಡೆವಲಪ್‍ಮೆಂಟ್ ಬ್ಯಾಂಕ್ (ಎಫ್ ಬಿ ಆ್ಯಂಡ್ ಎಡಿಬಿ), ಯುಎನ್ ಆ್ಯಂಡ್ ಒಎಂಐ, ಐ ಆ್ಯಂಡ್ ಇ (ಐಪಿಎï), ಎಫ್ ಎಂ, ಇನ್ವೆಸ್ಟ್‍ಮೆಂಟ್, ಎïಎಸ್ ಆ್ಯಂಡ್ ಸಿಎಸ್, ಒ/ಒ ಸಿಇಎ, ಒ/ಒ ಪಿಇಎ, ಐಇಆರ್, ಒ/ಒ ಸೆಕ್ (ಇಎ) ವರ್ಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

    ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಹೆಸರಲ್ಲಿ ಅಥವಾ ಅನಾಮಧೇಯವಾಗಿ ಅಥವಾ ಬೇರೆಯವರ ಹೆಸರಲ್ಲಿ ಪುಸ್ತಕ ಪ್ರಕಾಶನ, ರೇಡಿಯೋಗಳಲ್ಲಿ ಸಂದರ್ಶನ ನೀಡುವುದು, ಲೇಖನಗಳನ್ನು ಬರೆಯುವಂತಿಲ್ಲ. ಸಂಸ್ಥೆಯ ಗೌಪ್ಯತೆ, ರಹಸ್ಯಗಳನ್ನು ಇತರರಿಗೆ ಬಹಿರಂಗಪಡಿಸುವಂತಿಲ್ಲ, ಸರ್ಕಾರದ ಹಿತಾಸಕ್ತಿಗೆ ಸಂಬಂಧಿಸಿದಂತೆ ಸಿಬ್ಬಂದಿಯು ಯಾವುದೇ ಸಂದರ್ಭದಲ್ಲಿ ಅಭಿಪ್ರಾಯ, ಸಲಹೆ ನೀಡುವಂತಿಲ್ಲ ಹಾಗೂ ಪ್ರತಿನಿಧಿಯಾಗಿ ಭಾಗವಹಿಸುವಂತಿಲ್ಲ ಕಟ್ಟಪ್ಪಣೆ ವಿಧಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 20.4.2021
    ಅಧಿಸೂಚನೆಗೆ: https://bit.ly/3wIGoFg
    ಮಾಹಿತಿಗೆ: https://dea.gov.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿಜ್ಞಾನ ವಿಭಾಗದ ಪದವೀಧರರಿಗೆ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗಾವಕಾಶ

    ನೀವು ಸೈನ್ಸ್​ ವಿದ್ಯಾರ್ಥಿಯೆ? ಹಾಗಿದ್ದರೆ ರಾಜ್ಯ ಸರ್ಕಾರದ ಇಲಾಖೆಯಲ್ಲಿದೆ 154 ಹುದ್ದೆಗಳು

    ಕಾಮರ್ಸ್​ ಪದವೀಧರರೆ? ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಕ್ಕೆ ಯುಪಿಎಸ್‍ಸಿಯಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts