ಐಪಿಎಲ್-17ರ ಫೈನಲ್‌ಗೇರಿದ ಕೆಕೆಆರ್: ಸ್ಟಾರ್ಕ್ ದಾಳಿಗೆ ಸನ್‌ರೈಸರ್ಸ್‌ ಸ್ಟನ್

1 Min Read
ಐಪಿಎಲ್-17ರ ಫೈನಲ್‌ಗೇರಿದ ಕೆಕೆಆರ್: ಸ್ಟಾರ್ಕ್ ದಾಳಿಗೆ ಸನ್‌ರೈಸರ್ಸ್‌ ಸ್ಟನ್

ಅಹಮದಾಬಾದ್: ಟೂರ್ನಿಯ ದುಬಾರಿ ಆಟಗಾರ ಹಾಗೂ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ (34ಕ್ಕೆ 3) ಬಿಗಿ ಬೌಲಿಂಗ್ ದಾಳಿ, ನಾಯಕ ಶ್ರೇಯಸ್ ಅಯ್ಯರ್ (58*ರನ್, 24 ಎಸೆತ, 5 ಬೌಂಡರಿ, 5 ಸಿಕ್ಸರ್) ಮತ್ತು ವೆಂಕಟೇಶ್ ಅಯ್ಯರ್ (51* ರನ್, 28 ಎಸೆತ, 5ಬೌಂಡರಿ, 4 ಸಿಕ್ಸರ್) ದಿಟ್ಟ ಜತೆಯಾಟದ ಬಲದಿಂದ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-17ರ ಮೊದಲ ಕ್ವಾಲಿೈಯರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಕೆಕೆಆರ್ ತಂಡ 4ನೇ ಬಾರಿಗೆ ೈನಲ್‌ಗೆ ಲಗ್ಗೆಯಿಟ್ಟಿತು. ಪ್ಯಾಟ್ ಕಮ್ಮಿನ್ಸ್ ಬಳಗ ಸೋತರೂ ಫೈನಲ್‌ಗೇರಲು ಇನ್ನೊಂದು ಅವಕಾಶವಿದ್ದು, ಆರ್‌ಸಿಬಿ-ರಾಜಸ್ಥಾನ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರ ವಿರುದ್ಧ ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ ಸೆಮಿಫೈನಲ್ ಮಾದರಿಯ 2ನೇ ಕ್ವಾಲಿಫೈಯರ್‌ನಲ್ಲಿ ಆಡಲಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ತಂಡ, ಆರಂಭಿಕ ಆಘಾತದ ಬಳಿಕ ರಾಹುಲ್ ತ್ರಿಪಾಠಿ (55 ರನ್, 35 ಎಸೆತ, 7 ಬೌಂಡರಿ, 1 ಸಿಕ್ಸರ್) ಆಸರೆಯಲ್ಲಿ ಚೇತರಿಸಿಕೊಂಡರೂ 19.3 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಕೆಕೆಆರ್ ವೆಂಕಟೇಶ್-ಶ್ರೇಯಸ್ ಅಯ್ಯರ್ ಅಜೇಯ ಜತೆಯಾಟದ ನೆರವಿನಿಂದ 13.4 ಓವರ್‌ಗಳಲ್ಲಿ 2 ವಿಕೆಟ್‌ಗೆ 164 ರನ್‌ಗಳಿಸಿ ಇನ್ನೂ 6.2 ಓವರ್ ಬಾಕಿಯಿರುವಂತೆಯೇ ಗೆಲುವಿನ ಸಂಭ್ರಮ ಕಂಡಿತು.

ಸಾಧಾರಣ ಮೊತ್ತದ ಚೇಸಿಂಗ್‌ಗೆ ಇಳಿದ ಕೆಕೆಆರ್‌ಗೆ ರಹಮಾನುಲ್ಲಾ ಗುರ್ಬಜ್ (23) ಹಾಗೂ ಸುನೀಲ್ ನಾರಾಯಣ್ (21) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 20 ಎಸೆತಗಳಲ್ಲಿ 40 ರನ್ ಕಸಿದು ಉತ್ತಮ ಅಡಿಪಾಯ ಹಾಕಿದರು. ಬಳಿಕ 3ನೇ ವಿಕೆಟ್‌ಗೆ ಜತೆಯಾದ ವೆಂಕಟೇಶ್-ಶ್ರೇಯಸ್ ಜೋಡಿ ಸನ್‌ರೈಸರ್ಸ್‌ ಬೌಲರ್‌ಗಳನ್ನು ದಂಡಿಸಿ ಚೇಸಿಂಗ್ ಸುಲಭಗೊಳಿಸಿದರು. ಇವರಿಬ್ಬರು 44 ಎಸೆತಗಳಲ್ಲಿ 97 ರನ್ ಕಸಿದು ಯಶಸ್ವಿಯಾಗಿ ದಡ ಸೇರಿಸಿದರು.

See also  ಮಾರ್ಟಳ್ಳಿಯ ಕೀರೆಪಾತಿ ತಂಡ ಪ್ರಥಮ

4. ಕೆಕೆಆರ್ ತಂಡ 4ನೇ ಬಾರಿಗೆ ಐಪಿಎಲ್‌ನ ೈನಲ್ ಆಡಲಿದೆ.ಇದಕ್ಕೂ ಮುನ್ನ 2012, 2014ರಲ್ಲಿ ಚಾಂಪಿಯನ್, 2021ರಲ್ಲಿ ರನ್ನರ್ ಅಪ್ ಆಗಿತ್ತು.

Share This Article