

ಬೆಂಗಳೂರಿನಲ್ಲಿರುವ ಸೆಂಟ್ರಲ್ ಆಯುರ್ವೇದ ರಿಸರ್ಚ್ ಇನ್‍ಸ್ಟಿಟ್ಯೂಟ್ ಕೇಂದ್ರ ಆಯುಷ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಮುಂದಾಗಿದೆ.
ಒಟ್ಟು ಹುದ್ದೆಗಳು: 19
ಆಯುರ್ವೇದ ಸಂಸ್ಥೆ ಮಧುಮೇಹಕ್ಕೆ ಸಂಬಂಧಿಸಿದ Centre of Excellence in Research and Clinical services for Madhumeha (Diabetes Mellitus) ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಹುದ್ದೆಗಳು 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಲಿಖಿತ ಪರೀಕ್ಷೆ/ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಹುದ್ದೆ ವಿವರ
* ಕನ್ಸಲ್ಟಂಟ್ (ಆಯುರ್ವೇದ-1, ಅಡ್ಮಿನ್ - 1, ಮೆಡಿಸಿನ್-1) - 3
* ಎಸ್‍ಆರ್‍ಎï (ಐಟಿ-1, ಆಯುರ್ವೇದ -2, ಯೋಗ- 1, ಬಯೋ-ಸ್ಟಾೃಟಿಸ್ಟಿಕ್ಸ್-1, ಕೆಮಿಸ್ಟ್ರಿ-1) - 6
* ಸೋಷಿಯಲ್ ವರ್ಕರ್ - 2
* ಡೇಟಾ ಎಂಟ್ರಿ ಆಪರೇಟರ್ - 2
* ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್ - 2
* ಪಂಚಕರ್ಮ ಟೆಕ್ನಿಷಿಯನ್ - 2
* ಡ್ರೈವರ್ - 1
* ಸ್ಪೆಷಲಿಸ್ಟ್ ಕನ್ಸಲ್ಟಂಟ್ - 1
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಪಂಚಕರ್ಮ ಟೆಕ್ನಿಷಿಯನ್ ಕೋರ್ಸ್‍ನಲ್ಲಿ ಡಿಪ್ಲೋಮಾ, ಪದವಿ, ಸೋಷಿಯಲ್ ವರ್ಕ್/ ಕ್ಲಿನಿಕಲ್ ಸೈಕಾಲಜಿ, ಆಯುರ್ವೇದಿಕ್ ಮೆಡಿಸಿನ್‍ನಲ್ಲಿ ಪದವಿ, ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ/ ಕೆಮಿಕಲ್ ಸೈನ್ಸ್, ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಸ್ಟ್ಯಾಟಿಸ್ಟಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿ, ಯೋಗ ಎಂಎಸ್ಸಿ, ಬಿಎಎಂಎಸ್, ಎಂಬಿಬಿಎಸ್, ಎಂಡಿ ಮಾಡಿದ್ದು, ವೃತ್ತಿ ಅನುಭವ ಹೊಂದಿರಬೇಕು.
ವಯೋಮಿತಿ: ಕನ್ಸಲ್ಟಂಟ್ ಹುದ್ದೆಗೆ ಗರಿಷ್ಠ 65 ವರ್ಷ, ಎಸ್ಆರ್ಎಫ್ಗೆ ಗರಿಷ್ಠ 35 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಕನ್ಸಲ್ಟಂಟ್ ಹುದ್ದೆಗೆ ಮಾಸಿಕ 50,000 ರೂ., ಜೆಆರ್ಎಫ್ಗೆ ಮಾಸಿಕ 35,000 ರೂ. ವೇತನ ಹಾಗೂ ಶೇ.24 ಮನೆ ಬಾಡಿಗೆ ಭತ್ಯೆ, ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್‍ಗೆ ಮಾಸಿಕ 16,000 ರೂ., ಸ್ಪೆಷಲಿಸ್ಟ್ಗೆ ಪ್ರತಿ ಭೇಟಿಗೆ 3000 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 20,000 ರೂ. ವೇತನ ನಿಗದಿಪಡಿಸಲಾಗಿದೆ.
ಸಂದರ್ಶನಕ್ಕೆ ಹಾಜರಾಗುವ ದಿನ: ಏಪ್ರಿಲ್ 21 ಮತ್ತು 22 ರಂದು ಬೆಳಗ್ಗೆ 10 ಗಂಟೆಯಿಂದ
ಸಂದರ್ಶನ ನಡೆಯುವ ಸ್ಥಳ: # 12, U ttarahalli M anavarthe K aval, U ttarahalli (H obli), B angalore South (Tq.), K anakapura M ain Road, T alaghattapura (post), B engaluru-560109
ಅಧಿಸೂಚನೆಗೆ: https://bit.ly/31WTekT
ಮಾಹಿತಿಗೆ: http://www.ccras.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: