More

    ಮೆಟಲರ್ಜಿ ವಿಷಯದಲ್ಲಿ ಡಿಪ್ಲೋಮಾ ಆಗಿದೆಯಾ? ನಿಮಗಾಗಿ ಇವೆ 21 ಹುದ್ದೆಗಳು

    ಮಿಶ್ರ ಧಾತು ನಿಗಮ್ ಲಿಮಿಟೆಡ್‍ನ (ಎಂಐಡಿಎಚ್‍ಎಎನ್‍ಐ) ಹೈದರಾಬಾದ್‍ನ ಘಟಕದಲ್ಲಿ ಅಸಿಸ್ಟೆಂಟ್ ಮೆಟಲರ್ಜಿ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

    ಒಟ್ಟು ಹುದ್ದೆಗಳು: 21

    ಮಿಶ್ರ ಧಾತು ಸಂಸ್ಥೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು ಆರಂಭದಲ್ಲಿ 1 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ನಂತರ ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಗತ್ಯತೆ ನೋಡಿಕೊಂಡು 3 ವರ್ಷ ಅವಧಿ ವಿಸ್ತರಿಸಲಾಗುವುದು.

    ಆಸಕ್ತ ಅಭ್ಯರ್ಥಿಗಳು ಮೆಟಲರ್ಜಿಕಲ್‍ನಲ್ಲಿ ಡಿಪ್ಲೋಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರುವುದರ ಜತೆಗೆ ಕೈಗಾರಿಕೆ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 4.4.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇರುತ್ತದೆ. ಮಾಸಿಕ 27,090 ರೂ. ವೇತನ ನಿಗದಿಪಡಿಸಲಾಗಿದ್ದು, ಪಿಎï, ಇಎಸ್‍ಐ, ವೈದ್ಯಕೀಯ ಸೌಲಭ್ಯ ಹಾಗೂ ಇತರ ಸೌಲಭ್ಯ/ಭತ್ಯೆ ನೀಡಲಾಗುವುದು.

    ಮೀಸಲಾತಿ: 21 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 8 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ 2, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 6, ಎಸ್ಸಿಗೆ 3, ಎಸ್ಟಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಮಾಜಿ ಸೈನಿಕರಿಗೆ 4 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

    ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಬೆಳಗ್ಗೆ 7.30ಗಂಟೆಗೆ ಸಂದರ್ಶನ ಸ್ಥಳದಲ್ಲಿರಬೇಕು. 11 ಗಂಟೆ ನಂತರ ಬರುವ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ. ಅಭ್ಯರ್ಥಿಗಳು ಎಲ್ಲ ದಾಖಲೆಗಳ ಮೂಲ ಪ್ರತಿ ಜತೆ 2 ಭಾವಚಿತ್ರವನ್ನು ತರಬೇಕು. ಅಗತ್ಯ ದಾಖಲೆ ಪೂರೈಸಿದ ಅಭ್ಯರ್ಥಿಗಳನ್ನು ಮಾತ್ರ ಲಿಖಿತ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು. ಒಂದೇ ದಿನದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಯದಿದ್ದರೆ ಮುಂದಿನ ದಿನಕ್ಕೆ ಪ್ರಕ್ರಿಯೆ ಮುಂದೂಡಲಾಗುವುದು. ಅಭ್ಯರ್ಥಿಗಳು ಇದಕ್ಕೆ ಸಿದ್ಧರಾಗಿ ಬರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪರೀಕ್ಷೆಯು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಇರಲಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರೊನಾ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

    ಸಂದರ್ಶನ ನಡೆಯುವ ದಿನಾಂಕ: 17.4.2021
    ಸಂದರ್ಶನ ನಡೆಯುವ ಸ್ಥಳ: Brahm Prakash DAV School, MIDHANI Township, Hyderabad – 500058

    ಅಧಿಸೂಚನೆಗೆ: https://bit.ly/3cXX9o1
    ಮಾಹಿತಿಗೆ: https://midhani-india.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ವಿಷಯಗಳಲ್ಲಿ ಇಂಜಿನಿಯರಿಂಗ್​ ಪದವಿ ಮುಗಿಸಿದವರಿಗೆ ಅರ್ಜಿ ಆಹ್ವಾನ

    10ನೇ ತರಗತಿ ಪಾಸಾದ ಮಹಿಳೆಯರಿಗೆ ಒಳ್ಳೇ ಅವಕಾಶ: ಗ್ರಾಮ ಪಂಚಾಯ್ತಿಗಳಲ್ಲಿ ನೇಮಕಾತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts