More

    ವೃದ್ಧನ ಮೇಲೆ ಕಾರ್​ ಹರಿಸಿ ಮೃತದೇಹಕ್ಕೆ ಚುಂಬಿಸಿ, 9 ಬಾರಿ ಇರಿದ ತೃತೀಯಲಿಂಗಿ! ವಿಕೃತಿಗೆ ಬೆಚ್ಚಿಬಿದ್ದ ಜನ..

    ಹಸ್ಟನ್‌ : ಅಮೆರಿಕದಲ್ಲಿ 64 ವರ್ಷದ ವೃದ್ಧನಿಗೆ ಲಿಂಗ ಪರಿವರ್ತಿತ ಮಹಿಳೆಯೊಬ್ಬಳು ಬರ್ಬರವಾಗಿ ಹತ್ಯೆಗೈದಿರುವ ಸುದ್ದಿ ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.

    ಇದನ್ನೂ ಓದಿ: ‘ಹೆಡ್​ಬುಷ್’ನಾಯಕಿ ಈಗ ಪವರ್​ಫುಲ್​ ಪೊಲೀಸ್ ಆಫೀಸರ್​..! ಸದ್ದು ಮಾಡುತ್ತಿದೆ ಫಸ್ಟ್ ಲುಕ್..

    ಕಾರಿನಲ್ಲಿ ಬಂದ ತೃತೀಯ ಲಿಂಗಿ ಮಹಿಳೆ ಆಘಾತಕಾರಿ ಎಂಬಂತೆ ಮೊದಲು ನಡೆದುಕೊಂಡು ಹೋಗುತ್ತಿದ್ದ ಆಂಡರ್ಸನ್ ಎಂಬ ವ್ಯಕ್ತಿಗೆ ಢಿಕ್ಕಿ ಹೊಡೆದು ಬೀಳಿಸಿದ್ದಾಳೆ. ಆ ಬಳಿಕ ರಿವರ್ಸ್ ಬಂದು ಮೈಮೇಲೆ ಕಾರು ಹರಿಸಿದ್ದಾಳೆ. ಇಳಿದು ಬಂದು ದೇಹವನ್ನು ಪದೇ ಪದೇ ಚುಂಬಿಸಿ 9 ಬಾರಿ ಇರಿದು ಅಟ್ಟಹಾಸ ತೋರಿರುವುದು ಸುತ್ತಲಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಫಿಶರ್ ಎಂಬ ಲಿಂಗ ಪರಿವರ್ತಿತೆ ಈ ಭೀಕರ ಕೃತ್ಯ ಎಸಗಿದ್ದಾಳೆ.

    ಕೃತ್ಯ ಎಸಗಿದ ಬಳಿಕ ಕಪ್ಪು ಶಾರ್ಟ್ಸ್ ಧರಿಸಿದ್ದ ಫಿಶರ್ ಮತ್ತೊಂದು ಕಾರನ್ನು ಹತ್ತಲು ಪ್ರಯತ್ನಿಸಿದ್ದು, ಸಾಧ್ಯವಾಗಲಿಲ್ಲ. ದಾರಿಹೋಕರು ಭಯಾನಕ ದೃಶ್ಯಗಳನ್ನು ವೀಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಫಿಶರ್ ಳನ್ನು ಬಂಧಿಸಿ ಕೊಲೆ ಆರೋಪ ಹೊರಿಸಲಾಗಿದೆ. ಆಕೆ ಆಸ್ಪತ್ರೆಯ ಸಿಬಂದಿಯೊಬ್ಬರ ಮೇಲೆಯೂ ಹಲ್ಲೆ ನಡೆಸಿದ್ದಾಳೆ ಎಂದು ಹ್ಯಾರಿಸ್ ಕೌಂಟಿ ದಾಖಲೆಗಳು ತಿಳಿಸಿವೆ.

    ನ್ಯಾಯಾಲಯದ ದಾಖಲೆಗಳಲ್ಲಿ ಕೃತ್ಯ ಎಸಗಿದ ಆರೋಪಿ ಪುರುಷ ಎಂದು ಉಲ್ಲೇಖಿಸಲಾಗಿದೆಯಾದರೂ ಪೊಲೀಸರು ಮಹಿಳೆ ಎಂದು ಗುರುತಿಸಿದ್ದಾರೆ. ಆಕೆಯ ಬಂಧನಕ್ಕೂ ಮುನ್ನ, ಫಿಶರ್ 2023ರಲ್ಲಿ ನಡೆದ ಪ್ರಕರಣವೊಂದರಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ಸಮುದಾಯದ ಮೇಲ್ವಿಚಾರಣೆಯಲ್ಲಿದ್ದಳು ಎನ್ನಲಾಗಿದೆ.

    ಈ ಹಿಂದೆ 2021 ರಲ್ಲಿ ಫಿಶರ್ ಮೇಲೆ ವೇಶ್ಯಾವಾಟಿಕೆ ಆರೋಪ ಹೊರಿಸಲಾಗಿತ್ತು, ಆದರೆ ಆ ಪ್ರಕರಣವನ್ನು ವಜಾಗೊಳಿಸಲಾಗಿತ್ತು. ಮೇ 24 ರಂದು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.

    ಪ್ರತ್ಯಕ್ಷದರ್ಶಿಗಳು ಹಾಡಹಗಲಿನ ಕೊಲೆಯನ್ನು ಕಂಡು ಬೆಚ್ಚಿ ಬಿದ್ದಿರುವುದಾಗಿ ಪೊಲೀಸರು ಹೇಳಿದ್ದಾರೆ. ಏನಾಯಿತು ಎಂದು ತಿಳಿಯಲಿಲ್ಲ, ಇಲ್ಲಿ ಮಕ್ಕಳು ಆಟವಾಡುತ್ತಿದ್ದರು, ಅವರ ಸ್ಥಿತಿಯನ್ನು ಊಹಿಸಿಕೊಳ್ಳಿ” ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

    10 ತಿಂಗಳ ಹಿಂದೆ ಆಫ್ ಆಗಿದ್ದ ಮೊಬೈಲ್ ಆನ್​ ಆಯ್ತು ನೋಡಿ…ಆಗಲೇ ಆ ರಹಸ್ಯ ಬಯಲಾಗಿದ್ದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts