More

    ವಿವಿಧ ವಿಷಯಗಳಲ್ಲಿ ಇಂಜಿನಿಯರಿಂಗ್​ ಪದವಿ ಮುಗಿಸಿದವರಿಗೆ ಅರ್ಜಿ ಆಹ್ವಾನ

    ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್​ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಹೈದರಾಬಾದ್ ವಿಭಾಗದಿಂದ ಕರ್ನಾಟಕದ ಮೈಸೂರು ಘಟಕಕ್ಕೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 111

    ಇಸಿಐಎಲ್‍ನಲ್ಲಿ 4 ವರ್ಷದ ಒಪ್ಪಂದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ದೂರ ಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.

    ಹುದ್ದೆ ವಿವರ
    * ಸೈಂಟಿಫಿಕ್ ಅಸಿಸ್ಟೆಂಟ್-ಎ – 24
    * ಜೂನಿಯರ್ ಆರ್ಟಿಸನ್ – 86
    * ಆಫೀಸ್ ಅಸಿಸ್ಟೆಂಟ್ – 1

    ಯಾವ ವಿಭಾಗದಲ್ಲಿ ನೇಮಕ?
    ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಇನ್‍ಸ್ಟ್ರುಮೆಂಟೇಷನ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಕೆಮಿಕಲ್, ಫಿಟ್ಟರ್ ಕೆಮಿಕಲ್ ಪ್ಲಾಂಟ್ ಆಪರೇಟರ್ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಪವರ್/ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಇನ್‍ಸ್ಟ್ರುಮೆಂಟೇಷನ್/ ಪ್ರೊಸೆಸ್​ ಇನ್‍ಸ್ಟ್ರುಮೆಂಟೇಷನ್/ ಮೆಕ್ಯಾನಿಕಲ್/ ಮೆಕಟ್ರೋನಿಕ್ಸ್/ ರೊಬೊಟಿಕ್ ಆ್ಯಂಡ್ ಆಟೋಮೇಷನ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ, ಕೆಮಿಸ್ಟ್ರಿಯಲ್ಲಿ ಬಿಎಸ್ಸಿ, 2 ವರ್ಷದ ಐಟಿಐ ಮಾಡಿರಬೇಕು. ಕೆಮಿಕಲ್ ಪ್ಲಾಂಟ್ ಆಪರೇಟರ್ ಹುದ್ದೆಗೆ ದ್ವಿತೀಯ ಪಿಯುಸಿಯಲಿ ಫಿಜಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾಥಮೆಟಿಕ್ಸ್ ಅಧ್ಯಯನ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಆಫೀಸ್ ಅಸಿಸ್ಟೆಂಟ್‍ಗೆ ಬಿಎಸ್ಸಿ/ ಬಿಎ/ ಬಿಕಾಂ ಪದವಿ ಪಡೆದಿರಬೇಕು.

    ವಯೋಮಿತಿ: ಎಲ್ಲ ಹುದ್ದೆಗಳಿಗೂ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ವೇತನ: ಸೈಂಟಿಫಿಕ್ ಅಸಿಸ್ಟೆಂಟ್ ಹಾಗೂ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 20,802 ರೂ. ವೇತನ ಇದೆ. ಜೂನಿಯರ್ ಆರ್ಟಿಸನ್‍ಗೆ 18,882 ರೂ. ವೇತನ ನಿಗದಿಪಡಿಸಲಾಗಿದೆ. ಯೂನಿಫಾರ್ಮ್ ಹೊಲಿಗೆ ಹಾಗೂ ವಾಷಿಂಗ್ ವೆಚ್ಚ, ಪಿಪಿಎï, ಪ್ರಯಾಣ ಭತ್ಯೆ, ಇಎಸ್‍ಐ ಜತೆ ವಿಮಾ ಪರಿಹಾರ ನೀಡಲಾಗುವುದು.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 51 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ 5, ಇತರ ಹಿಂದುಳಿದ ವರ್ಗದವರಿಗೆ 29, ಎಸ್ಸಿಗೆ 18, ಎಸ್ಟಿಗೆ 8 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ:
    ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಹಾಗೂ ಟ್ರೇಡ್ ಪರೀಕ್ಷೆಗೆ ಆಹ್ವಾನಿಸಲಾಗುವುದು. ನಂತರ ದಾಖಲೆ ಪರಿಶೀಲನೆ ನಡೆಸಿ ಸಂದರ್ಶನ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

    ಸಂದರ್ಶನ ನಡೆಯುವ ದಿನಾಂಕ: ಏಪ್ರಿಲ್ 17 ಮತ್ತು 18 ರಂದು ಬೆಳಗ್ಗೆ 10 ಗಂಟೆಗೆ.
    ಸಂದರ್ಶನ ನಡೆಯುವ ಸ್ಥಳ: Atomic Energy Central School, RMP Yelwal Colony, Hunsur Road, Yelwal Post, Mysore – 571130

    ಅಧಿಸೂಚನೆಗೆ: https://bit.ly/2OvnmAR
    ಮಾಹಿತಿಗೆ: http://www.ecil.co.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಹ್ವಾನ- ಎಸ್​ಎಸ್​ಎಲ್​ಸಿ ಆದವರಿಗೂ ಅವಕಾಶ

    10ನೇ ತರಗತಿ ಪಾಸಾದ ಮಹಿಳೆಯರಿಗೆ ಒಳ್ಳೇ ಅವಕಾಶ: ಗ್ರಾಮ ಪಂಚಾಯ್ತಿಗಳಲ್ಲಿ ನೇಮಕಾತಿ

    ಯುವ ಇಂಜಿನಿಯರ್ಸ್​ಗೆ ಯುಪಿಎಸ್​ಸಿಯಿಂದ ಭರ್ಜರಿ ಅವಕಾಶ: ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts