More

    ಅಂಗನವಾಡಿಯಲ್ಲಿದೆ 90 ಕಾರ್ಯಕರ್ತೆ, ಸಹಾಯಕಿ ಹುದ್ದೆಗಳು- 4ನೇ ತರಗತಿಯವರಿಗೂ ಅವಕಾಶ

    ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 6 ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.

    ಕಾರ್ಯಕರ್ತೆಯರ ಹುದ್ದೆಗಳು: 17 (8 ಮಿನಿ ಅಂಗನವಾಡಿ)
    ಸಹಾಯಕಿಯರ ಹುದ್ದೆಗಳು: 73
    ಒಟ್ಟು : 90

    ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿ ಹುದ್ದೆಗಳು ಖಾಲಿ ಇದ್ದು, ಗೌರವಧನದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಮಾಡಿಕೊಳ್ಳಲಾಗುವುದು. ಸಹಾಯಕಿ ಹುದ್ದೆಗೆ ಅಂಗವಿಕಲರು ಅರ್ಹರಾಗಿರುವುದಿಲ್ಲ. ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ತಹಸೀಲ್ದಾರ್ ಕಚೇರಿಯಿಂದ ಪಡೆದದ್ದು), ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಆನ್‍ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು, ದಾಖಲೆಗಳು ಅಸ್ಪಷ್ಟವಾಗಿದ್ದರೆ ಅರ್ಜಿ ತಿರಸ್ಕರಿಸಲಾಗುವುದು.

    ಎಲ್ಲಿವೆ ಹುದ್ದೆಗಳು?
    ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಗುಡಿಬಂಡೆ, ಚಿಕ್ಕಬಳ್ಳಾಪುರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಗ್ರಾಮಗಳ ಅಂಗನವಾಡಿಗಳಲ್ಲಿ ಹುದ್ದೆಗಳು ಖಾಲಿ ಇವೆ.

    ಈ ಪ್ರಮಾಣಪತ್ರಗಳಿದ್ದಲ್ಲಿ ಸಲ್ಲಿಸಿ
    ಅಭ್ಯರ್ಥಿಗಳು ವಿಧವೆ, ವಿಚ್ಛೇದಿತೆ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. ದೇವದಾಸಿಯರ ಮಕ್ಕಳು, ಅಂಗವಿಕಲರಾಗಿದ್ದಲ್ಲಿ ಸರ್ಕಾರದಿಂದ ದೃಢೀಕರಿಸಿದ ಪ್ರಮಾಣಪತ್ರ, ಪರಿತ್ಯಕ್ತೆ ಎಂದು ಗ್ರಾಪಂನಿಂದ ನೀಡಿದ ಪತ್ರ, ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಸೀಲ್ದಾರ್‍ರಿಂದ ಪಡೆದ ಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬಹುದು. ಈ ಪ್ರಮಾಣಪತ್ರಗಳನ್ನು ಆಯಾ ಮೀಸಲಾತಿಗೆ ಪರಿಗಣಿಸಲಾಗುತ್ತದೆ.

    ವಿದ್ಯಾರ್ಹತೆ: ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ. ಕನ್ನಡ ಭಾಷೆ ಜ್ಞಾನ ಅವಶ್ಯ.

    ವಯೋಮಿತಿ: 5.4.2021ಕ್ಕೆ ಕನಿಷ್ಠ 18ವರ್ಷ, ಗರಿಷ್ಠ 35 ವರ್ಷ. ಅಂಗವಿಕಲರಿಗೆ 10 ವರ್ಷ ವಯೋಸಡಿಲಿಕೆ ಇದೆ.

    ಆದ್ಯತೆ: ವಿದ್ಯಾರ್ಹತೆ, ವಯೋಮಿತಿ, ಆಸಿಡ್ ದಾಳಿಗೆ ತುತ್ತಾದವರು, ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರಿಗೆ, ವಿಧವೆಯರಿಗೆ, ಸ್ಥಳೀಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.

    ಗೌರವಧನ
    ಈ ನೇಮಕಾತಿಗಳು ಗೌರವಧನ ಆಧಾರಿತವಾಗಿವೆ. ಕಾರ್ಯಕರ್ತೆಗೆ ಮಾಸಿಕ 10,000 ರೂ, ಮಿನಿ ಅಂಗನವಾಡಿ ಕಾರ್ಯಕರ್ತೆಗೆ 5,750 ರೂ., ಸಹಾಯಕಿಯರಿಗೆ 5,000 ರೂ. ವೇತನ ನಿಗದಿಯಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 21.4.2021
    ಅಧಿಸೂಚನೆಗೆ: https://bit.ly/3wG2qsm
    ಮಾಹಿತಿಗೆ: https://anganwadirecruit.kar.nic.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿಜ್ಞಾನ ವಿಭಾಗದ ಪದವೀಧರರಿಗೆ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗಾವಕಾಶ

    ಕಾಮರ್ಸ್‌ ಪದವೀಧರರಿಗೆ ಭರ್ಜರಿ ಅವಕಾಶ: ಆರ್ಥಿಕ ವ್ಯವಹಾರ ಇಲಾಖೆಯಲ್ಲಿ 34 ಹುದ್ದೆಗಳು

    ಕಾಮರ್ಸ್​ ಪದವೀಧರರೆ? ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಕ್ಕೆ ಯುಪಿಎಸ್‍ಸಿಯಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts