More

    ಭವಿಷ್ಯ ನಿರ್ಮಾಣಕ್ಕೆ ವಿದ್ಯಾರ್ಥಿ ಉದ್ಯೋಗ ಮಿತ್ರ ಸಹಕಾರಿ: ನಿವೃತ್ತ ಮುಖ್ಯಶಿಕ್ಷಕ ಜೆ.ರಾಣೆಪ್ಪ ಹೇಳಿಕೆ

    ಸಿರಿಗೇರಿ: ಶಾಲಾ ಮಕ್ಕಳು ನಿತ್ಯದ ಪಾಠ ಪ್ರವಚನದ ಜತೆಗೆ ವಿದ್ಯಾರ್ಥಿ ಉದ್ಯೋಗ ಮಿತ್ರ ಓದಿದರೆ ಭವಿಷ್ಯತ್ತಿನ ಗುರಿ ಮುಟ್ಟಲು ಸಾಧ್ಯ ಎಂದು ನಿವೃತ್ತ ಮುಖ್ಯಶಿಕ್ಷಕ ಜೆ.ರಾಣೆಪ್ಪ ಹೇಳಿದರು.

    ಗ್ರಾಮದ ವಿವೇಕಾನಂದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆಗಳನ್ನು ವಿತರಿಸಿ ಬುಧವಾರ ಮಾತನಾಡಿದರು.

    ಹಿಂದೆ ಗುರುಗಳ ಮಾರ್ಗದರ್ಶದಿಂದ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವಿತ್ತು. ಪ್ರಸ್ತುತ ಶಿಕ್ಷಕ ಮಾರ್ಗದರ್ಶನದ ಜತೆಗೆ ವಿದ್ಯಾರ್ಥಿ ಮಿತ್ರ ಸಂಚಿಕೆ ಓದು ಅತ್ಯುಪಯುಕ್ತವಾಗಿದೆ. ಎಲ್ಲರೂ ಸಂಚಿಕೆ ಕೊಂಡು ಓದುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.

    ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಸ್.ಎಂ.ನಾಗರಾಜ್ ಸ್ವಾಮಿ ಮಾತನಾಡಿ, ಹೆಸರೇ ಹೇಳುವಂತೆ ವಿದ್ಯಾರ್ಥಿ ಮಿತ್ರ ಸಂಚಿಕೆ ಮಕ್ಕಳಿಗೆ ತುಂಬಾ ಪ್ರಯೋಜನಾಕಾರಿ. ಇದರಿಂದ ಗ್ರಾಮೀಣ ಶಾಲೆಗಳಿಗೆ ಅನುಕೂಲವಾಗಿದೆ. ಸಿರಿಗೇರಿ ಹೋಬಳಿಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬರಲು ವಿದ್ಯಾರ್ಥಿ ಮಿತ್ರ ನೆರವಾಗಿದೆ. ಮಕ್ಕಳು ಪ್ರತಿದಿನ ವಿದ್ಯಾರ್ಥಿ ಮಿತ್ರ ಓದುವ ಜತೆಗೆ ಫೈಲ್ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಮುಖ್ಯಶಿಕ್ಷಕ ಎನ್.ಪಂಪಾಪತಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಇದ್ದಕ್ಕೆ ಪ್ರತಿಫಲವಾಗಿ ಉತ್ತಮ ಫಲಿಂತಾಶ ನೀಡಬೇಕು. ಪಾಲಕರು ಇದನ್ನು ಅರಿತು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

    ಡೀಸೆಲ್ ಶಶಿಧರ, ಜೆ.ಯರ‌್ರಿಸ್ವಾಮಿ, ಕಿರಾಣಿ ಪಂಪನಗೌಡ, ಶಿಕ್ಷಕರಾದ ರಂಗಣ್ಣ, ಖಾದರ್‌ಬಾಷಾ, ಪ್ರಮುಖರಾದ ಬೃಹ್ಮಠದ ಗಂಗಾಧರ ತಾತ, ಶ್ರೀರಾಮ್ ಹಾರ್ಡ್‌ವೇರ್ ಶಾಪ್‌ನ ವೆಂಕಟೇಶ್ ಶೆಟ್ಟಿ, ತೋಫಿಕ್ ಹಾರ್ಡ್‌ವೇರ್ ಶಾಪ್‌ನ ಅಜ್ಮಲ್, ಡಾ.ಪೂಜಾರ್ ನಾಗರಾಜ್, ಎಜಾಜ್ ಹುಸೇನ್, ಡಾ.ಯಾದವ್ ವೆಂಕಟೇಶ್ ಜಿ.ವಿ, ಸೊಸೈಟಿಯ ಅಜಾತ ಮೂರ್ತಿ, ಶಿವಮೂರ್ತಿ, ಶ್ರೀಹರಿ ಬೇಕರಿಯ ಲೋಕೇಶ್, ಸ್ನೇಹ ಜೀವಿ ಈರೇಶ್, ಜೀರ್ ಮಹೇಶ್, ಚಾನಾಳ್ ರಾಘು, ಮಹಾಬಲೇಶ್, ರಂಜಿತ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts