More

    ಪದವೀಧರರಿಗೆ ಬಂಪರ್​- ಬ್ಯಾಂಕ್ ಆಫ್​ ಬರೋಡಾದಲ್ಲಿ 511 ಹುದ್ದೆಗಳಿಗೆ ಆಹ್ವಾನ: ಕರ್ನಾಟಕದಲ್ಲೂ ಅವಕಾಶ

    ಬ್ಯಾಂಕ್ ಆಫ್​ ಬರೋಡಾದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆಗಳು: 511

    ಬರೋಡದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 5 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಬ್ಯಾಂಕ್‍ನ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಬಹುದಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ, ಪಡೆಯುತ್ತಿರುವ/ ಪಡೆಯುತ್ತಿದ್ದ ವೇತನ, ಕೌಶಲ ಆಧರಿಸಿ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿರ್ಧರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹುದ್ದೆ ವಿವರ
    * ಸೀನಿಯರ್ ರಿಲೇಷನ್‍ಶಿಪ್ ಮ್ಯಾನೇಜರ್ – 407
    * ಎ-ವೆಲ್ತ್ ರಿಲೇಷನ್‍ಶಿಪ್ ಮ್ಯಾನೇಜರ್ – 50
    * ಟೆರಿಟೊರಿ ಹೆಡ್ – 6
    * ಪ್ರೊಡಕ್ಟ್ ಹೆಡ್ (ಇನ್ವೆಸ್ಟ್‍ಮೆಂಟ್ ಆ್ಯಂಡ್ ರಿಸರ್ಚ್) – 1
    * ಹೆಡ್ (ಆಪರೇಷನ್ಸ್ ಆ್ಯಂಡ್ ಟೆಕ್ನಾಲಜಿ) – 1
    * ಡಿಜಿಟಲ್ ಸೇಲ್ಸ್ ಮ್ಯಾನೇಜರ್ – 1
    * ಐಟಿ ಫಂಕ್ಷನಲ್ ಅನಲಿಸ್ಟ್ ಮ್ಯಾನೇಜರ್ – 1

    ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಗುಣವಾಗಿ ಯಾವುದೇ ಪದವಿ ಅಥವಾ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೋಮಾ ಮಾಡಿದ್ದು, ವೃತ್ತಿ ಅನುಭವ ಅವಶ್ಯ.

    ವಯೋಮಿತಿ: 1.4.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 24 ರಿಂದ 31 ವರ್ಷ, ಗರಿಷ್ಠ 35 ರಿಂದ 45 ವರ್ಷ.

    ಎಲ್ಲೆಲ್ಲಿ ನೇಮಕಾತಿ: ಮಂಗಳೂರು, ಬೆಂಗಳೂರು, ಅಹಮದಾಬಾದ್, ಚಂಡೀಗಢ, ಇಂದೋರ್, ಲಖನೌ, ರಾಜ್‍ಕೋಟ್, ಅಲಹಾಬಾದ್, ಚೆನ್ನೈ, ಜೈಪುರ, ಲುದಿಯಾನಾ, ಸೂರತ್, ಆನಂದ್, ಕೋಯಂಬತ್ತೂರ್, ಜೋದ್‍ಪುರ, ಮುಂಬೈ, ಉದಯ್‍ಪುರ, ಬರೇಲಿ, ದೆಹಲಿ, ಜಲಂದರ್, ವಡೋದರ, ಗುರುಗಾಂವ್, ಕಾನ್‍ಪುರ್, ನಾಗ್‍ಪುರ್, ವಾರಣಾಸಿ, ಭೂಪಾಲ್, ಹೈದರಾಬಾದ್, ಕೋಲ್ಕತಾ, ಪುಣೆ, ವಿಶಾಖಪಟ್ಟಣ

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 211 ಸ್ಥಾನ, ಎಸ್ಸಿಗೆ 76, ಎಸ್ಟಿಗೆ 37, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 137, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 50 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೂ ಸ್ಥಾನ ಕಾಯ್ದಿರಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಅಥವಾ ಗುಂಪುಚರ್ಚೆಗೆ ಆಹ್ವಾನಿಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ 100 ರೂ., ಉಳಿದ ಅಭ್ಯರ್ಥಿಗಳಿಗೆ 600 ರೂ. ಶುಲ್ಕ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 29.4.2021
    ಅಧಿಸೂಚನೆಗೆ: https://bit.ly/3defc9G
    ಮಾಹಿತಿಗೆ: http://www.bankofbaroda.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ಪದವೀಧರರಿಗೆ ಆದಾಯ ತೆರಿಗೆ ಇಲಾಖೆಯಿಂದ ಆಹ್ವಾನ: ನಾಳೆಯೇ ಕೊನೆಯ ದಿನ

    ಅಂಗನವಾಡಿಯಲ್ಲಿದೆ 90 ಕಾರ್ಯಕರ್ತೆ, ಸಹಾಯಕಿ ಹುದ್ದೆಗಳು- 4ನೇ ತರಗತಿಯವರಿಗೂ ಅವಕಾಶ

    ಕಾಮರ್ಸ್‌ ಪದವೀಧರರಿಗೆ ಭರ್ಜರಿ ಅವಕಾಶ: ಆರ್ಥಿಕ ವ್ಯವಹಾರ ಇಲಾಖೆಯಲ್ಲಿ 34 ಹುದ್ದೆಗಳು

    ಬಿಇ ಪದವಿಧರರೆ? ಕೇಂದ್ರ ಸರ್ಕಾರದಲ್ಲಿವೆ 40 ಹುದ್ದೆಗಳು- 1.80 ಲಕ್ಷ ರೂ.ವರೆಗೆ ಸಂಬಳ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts