More

    ಎಚ್​ಎಂಟಿಗೆ ಬೇಕಾಗಿದ್ದಾರೆ ಪ್ರತಿಭಾನ್ವಿತರು: ವಿವಿಧ ಹುದ್ದೆಗಳಿಗೆ ಆಹ್ವಾನ- ಬೆಂಗಳೂರಿನಲ್ಲಿ ಕೆಲಸ

    ಎಚ್​ಎಂಟಿ ಮಷಿನ್​ ಟೂಲ್ಸ್​ ಲಿಮಿಟೆಡ್​ ಭಾರತದಾದ್ಯಂತ ಕಾರ್ಯಕ್ಷೇತ್ರ ಹೊಂದಿದ್ದು, ಪ್ರಸ್ತುತ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್​ಎಂಟಿ ಮಷಿನ್​ ಟೂಲ್ಸ್​ ಲಿಮಿಟೆಡ್​ನ ಎಂಬಿಎಕ್ಸ್​ ಯುನಿಟ್​ನಲ್ಲಿ ಖಾಲಿ ಇರುವ ಕಂಪನಿ ಟ್ರೇನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

    ಒಟ್ಟು ಹುದ್ದೆಗಳು: 12

    ಎಚ್​ಎಂಟಿಯಲ್ಲಿ ಮಷಿನಿಸ್ಟ್​, ಫಿಟ್ಟರ್​, ಎಲೆಕ್ಟ್ರಿಷಿಯನ್​ ಹುದ್ದೆಗಳಿಗೆ ಕಂಪನಿ ಟ್ರೇನಿಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಲ್ಲಿ ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ಸ್ಥಾನ ಮೀಸಲಿರಿಸಲಾಗಿದೆ. ಈ ಹುದ್ದೆಗಳು 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ನಂತರ ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
    ನ್ಯಾಷನಲ್​ ಕೌನ್ಸಿಲ್​ ಾರ್​ ವೆಕೇಷನಲ್​ ಟ್ರೇನಿಂಗ್​ (ಎನ್​ಸಿವಿಟಿ)/ ಐಟಿಐ ಮತ್ತು ಎನ್​ಎಸಿ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಕಂಪನಿ ಟ್ರೇನಿ ಹುದ್ದೆಗೆ ಅರ್ಹರಾಗಿದ್ದು, ಗರಿಷ್ಠ ವಯೋಮಿತಿ 33 ವರ್ಷ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಮಷಿನ್​ ಟೂಲ್ಸ್​ ಇಂಡಸ್ಟ್ರಿಯಲ್ಲಿ ಅನುಭವ ಇರಬೇಕು. ಎಚ್​ಎಂಟಿ ಮಷಿನ್​ ಟೂಲ್ಸ್​ ಲಿಮಿಟೆಡ್​ನಲ್ಲಿ ವೃತ್ತಿ ಅನುಭವ ಅಥವಾ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

    ಸ್ಟೆ$ಪೆಂಡ್​: ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮೊದಲ ವರ್ಷ ಮಾಸಿಕ 13,000 ರೂ. ಸ್ಟೆ$ಪೆಂಡ್​ ನೀಡಲಾಗುವುದು. ಎರಡನೇ ವರ್ಷ 13,500 ರೂ., 3ನೇ ವರ್ಷ 14,000 ರೂ. ವೇತನ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಸಂಸ್ಥೆಯ ನಿಯಮದ ಪ್ರಕಾರ ವೇತನ ಗ್ರೇಡ್​ 2ರ ಅನ್ವಯ ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಸಿಸಿಎ, ಕ್ಯಾಂಟೀನ್​ ಭತ್ಯೆ, ವಾಷಿಂಗ್​ ಭತ್ಯೆ, ಪಿಎ್​, ಗ್ರಾಚ್ಯುಟಿ, ಇಎಸ್​ಐ/ ವೈದ್ಯಕಿಯ ಸೌಲಭ್ಯ, ಪ್ರಯಾಣ ಭತ್ಯೆ, ಕಾರ್ಯಕ್ಷಮತೆ ಭತ್ಯೆ, ಮಾಸಿಕ ಪ್ರೋತ್ಸಾಹ ಧನ, ಲೀವ್​ ಎನ್​ಕ್ಯಾಶ್​ಮೆಂಟ್​ ಭತ್ಯೆಗಳನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಪ್ರಾಕ್ಟಿಕಲ್​ ಪರೀೆಕ್ಚೆ/ ಲಿಖಿತ ಪರೀೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾಗುವುದು. ಪ್ರಾಕ್ಟಿಕಲ್​ ಪರೀೆಯಲ್ಲಿ ಕೌಶಲ ಪರೀೆ ಇರುತ್ತದೆ. ಲಿಖಿತ ಪರೀೆಯಲ್ಲಿ ಆಪ್ಟಿಟ್ಯೂಡ್​ ಆ್ಯಂಡ್​ ಸಾಮಾನ್ಯ ಜ್ಞಾನದ ಕುರಿತು ಪ್ರಶ್ನೆಗಳಿರುತ್ತದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 250 ರೂ., ಇತರ ಅಭ್ಯರ್ಥಿಗಳಿಗೆ 500 ರೂ. ಇದೆ. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 29.4.2021
    ಅರ್ಜಿ ಸಲ್ಲಿಕೆ ವಿಳಾಸ: DM(HRM) HMT Machine Tools Ltd (A Govt. of IndiaUndertaking) Bangalore Complex Jalahalli, Bangalore –560013 

    ಅಧಿಸೂಚನೆಗೆ: https://bit.ly/2QubgIS
    ಮಾಹಿತಿಗೆ: http://www.hmtindia.com

    ಮಹಾನಗರ ಪಾಲಿಕೆಗಳಲ್ಲಿ 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಹಿಳಾ ಇಂಜಿನಿಯರಿಂಗ್​ ಪದವೀಧರರಿಗೆ ಗುಡ್​ ನ್ಯೂಸ್​: ಎನ್​ಟಿಪಿಸಿಯಲ್ಲಿ 50 ಹುದ್ದೆಗಳಿಗೆ ಆಹ್ವಾನ

    ವಿವಿಧ ಪದವೀಧರರಿಗೆ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಕ್ಕೆ ಆಹ್ವಾನ: ₹70 ಸಾವಿರದವರೆಗೂ ವೇತನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಹಿಳೆಯರಿಂದ 34 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts