ವಿಜ್ಞಾನ ಪದವೀಧರರಿಗೆ ಇಲ್ಲಿದೆ ಬಂಪರ್‌ ಅವಕಾಶ: ದಕ್ಷಿಣ ರೈಲ್ವೆಯಲ್ಲಿ 191 ಹುದ್ದೆಗಳಿಗೆ ಆಹ್ವಾನ

railway
Published on

ಚೆನ್ನೈನಲ್ಲಿರುವ ದಣ ರೈಲ್ವೆ ಮುಖ್ಯ ಕಚೇರಿ ವೈದ್ಯಕಿಯ ಸಿಬ್ಬಂದಿ ಅಗತ್ಯವಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದೆಂದು ಅಧಿಸೂಚನೆ ಹೊರಡಿಸಲಾಗಿದೆ. ಆಯ್ಕೆಯಾಗುವ ಅಭ್ಯಥಿರ್ಗಳು ಕೂಡಲೆ ಕೆಲಸಕ್ಕೆ ಹಾಜರಾಗಬೇಕಿದ್ದು, ಈ ಹುದ್ದೆಗಳು ಸೀಮಿತ ಅವಧಿಯದ್ದಾಗಿವೆ ಎಂದು ಇಲಾಖೆ ತಿಳಿಸಿದೆ.
ಒಟ್ಟು ಹುದ್ದೆಗಳು: 191

ಹುದ್ದೆ ವಿವರ
* ನರ್ಸಿಂಗ್​ ಸೂಪರಿಂಟೆಂಡೆಂಟ್​ - 83
* ಫಿಜಿಯೋಥೇರಪಿಸ್ಟ್​ - 1
* ಇಸಿಜಿ ಟೆಕ್ನಿಷಿಯನ್​ - 4
* ಹೆಮೊಡಯಾಲಿಸಿಸ್​ ಟೆಕ್ನಿಷಿಯನ್​ - 3
* ಆಸ್ಪತ್ರೆ ಸಹಾಯಕ - 48
* ಹೌಸ್​ ಕೀಪಿಂಗ್​ ಅಸಿಸ್ಟೆಂಟ್​ (ಮೆಡಿಕಲ್​) - 40
* ಲ್ಯಾಬ್​ ಅಸಿಸ್ಟೆಂಟ್​ ಗ್ರೇಡ್​ 2 - 9
* ರೇಡಿಯೋಗ್ರಾರ್​ - 3

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ/ ವಿಜ್ಞಾನ ಪದವಿ, ಮೆಡಿಕಲ್​ ಲ್ಯಾಬೊರೇಟರಿ ಟೆಕ್ನಾಲಜಿ, ಕೆಮಿಸ್ಟ್ರಿ, ಫಿಜಿಕ್ಸ್​ನಲ್ಲಿ ಡಿಪ್ಲೊಮಾ, ಜನರಲ್​ ನಸಿರ್ಂಗ್​ ಮತ್ತು ಮಿಡ್​ವೈರಿಯಲ್ಲಿ 3ವರ್ಷದ ಕೋರ್ಸ್​/ ಬಿಎಸ್ಸಿ, ಫಿಜಿಯೋಥೆರಪಿ ಪದವಿ.

ವಯೋಮಿತಿ: ನಸಿರ್ಂಗ್​ ಸೂಪರಿಂಟೆಂಡೆಂಟ್​ಗೆ 20 ರಿಂದ 40 ವರ್ಷ, ಫಿಜಿಯೋಥೆರಪಿಸ್ಟ್​ಗೆ 18 &33 ವರ್ಷ, ಇಸಿಜಿ ಟೆಕ್ನಿಷಿಯನ್​ಗೆ 18&33 ವರ್ಷ, ಹೆಮೊಡಯಾಲಿಸಿಸ್​ ಟೆಕ್ನಿಷಿಯನ್​ಗೆ 20&33, ಆಸ್ಪತ್ರೆ ಸಹಾಯಕನಿಗೆ 18&30, ಲ್ಯಾಬ್​ ಅಸಿಸ್ಟೆಂಟ್​ಗೆ 18&33, ರೇಡಿಯೋಗ್ರಾಫರ್​ಗೆ 19&33 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯಥಿರ್ಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಆಸ್ಪತ್ರೆ ಸಹಾಯಕ, ಹೌಸ್​ ಕೀಪಿಂಗ್​ಗೆ ಮಾಸಿಕ 18,000 ರೂ., ಲ್ಯಾಬ್​ ಅಸಿಸ್ಟೆಂಟ್​ಗೆ ಮಾಸಿಕ 21,700 ರೂ., ಇಸಿಜಿ ಟೆಕ್ನಿಷಿಯನ್​ಗೆ ಮಾಸಿಕ 25,500 ರೂ., ರೇಡಿಯೋಥೆರಪಿಸ್ಟ್​ಗೆ ಮಾಸಿಕ 29,200 ರೂ., ಫಿಜಿಯೋಥೆರಪಿಸ್ಟ್​ ಹಾಗೂ Haemodialysis ಟೆಕ್ನಿಷಿಯನ್​ಗೆ ಮಾಸಿಕ 35,400 ರೂ., ನಸಿರ್ಂಗ್​ ಸೂಪರಿಂಟೆಂಡೆಂಟ್​ಗೆ ಮಾಸಿಕ 44,900 ರೂ. ವೇತನ ನಿಗದಿಪಡಿಸಲಾಗಿದೆ. ವೇತನ ಜತೆ ಎಲ್ಲ ಹುದ್ದೆಗೂ ಡಿಎ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಪ್ಯಾರಾಮೆಡಿಕಲ್​ ಸ್ಟಾಫ್‌ಗಳನ್ನು ಟೆಲಿಕಾನ್ಫರೆನ್ಸ್​ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳಿಗೆ ಸಂದರ್ಶನದ ದಿನಾಂಕ, ಸಮಯ ತಿಳಿಸಲಾಗುವುದು.

ಪ್ರತ್ಯೇಕ ಲಿಂಕ್​: ಪ್ರತಿ ಹುದ್ದೆಗೂ ಅರ್ಜಿ ಸಲ್ಲಿಸಲು ಪ್ರತ್ಯೇಕ ಲಿಂಕ್​ ನೀಡಲಾಗಿದೆ. ಆಸಕ್ತ ಅಭ್ಯಥಿರ್ಗಳು ಆ ಲಿಂಕ್​ ಮೂಲಕವೇ ಹೆಸರು ನೋಂದಾಯಿಸಿಕೊಂಡು ಅಜಿರ್ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 30.4.2021
ಅಧಿಸೂಚನೆಗೆ: https://bit.ly/3aASmqX
ಮಾಹಿತಿಗೆ: https://sr.indianrailways.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net