ಪದವಿ ಯಾವುದೇ ಇರಲಿ... ಕ್ರೀಡಾ ಪ್ರಾಧಿಕಾರದಲ್ಲಿದೆ ವಿವಿಧ ಹುದ್ದೆಗಳು- 60 ಸಾವಿರ ರೂ.ವರೆಗೆ ಸಂಬಳ

sports authority
Published on

ಭಾರತೀಯ ಕ್ರೀಡಾ ಪ್ರಾಧಿಕಾರದ (ಸ್ಪೋರ್ಟ್ಸ್​ ಅಥಾರಿಟಿ ಆಫ್‌​ ಇಂಡಿಯಾ- ಎಸ್​ಎಐ) ದೆಹಲಿಯ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 14

ಎಸ್​ಎಐನಲ್ಲಿ ಅಭ್ಯರ್ಥಿಗಳನ್ನು ಆರಂಭಿಕವಾಗಿ 2 ವರ್ಷದ ಒಪ್ಪಂದದ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಸಂಸ್ಥೆಯ ಅಗತ್ಯತೆ ಹಾಗೂ ಅಭ್ಯಥಿರ್ಗಳ ಕಾರ್ಯಕ್ಷಮತೆ ಆಧರಿಸಿ ಅವಧಿಯನ್ನು 1 ವರ್ಷ ವಿಸ್ತರಿಸಲಾಗುವುದು.

ಹುದ್ದೆ ವಿವರ

* ಯಂಗ್​ ಪ್ರೊಫೆಷನಲ್ಸ್​ (ಲೀಗಲ್​)- 1

ಕಾನೂನು ಪದವಿ/ ಸ್ನಾತಕೋತ್ತರ ಪದವಿ, ಕ್ರೀಡಾ ಕಾನೂನಿನಲ್ಲಿ ಸ್ಪೇಷಲೈಸೇಷನ್​ ಮಾಡಿರುವ ಅಭ್ಯಥಿರ್ಗಳು ಅರ್ಹರು.

ಹುದ್ದೆ ಜವಾಬ್ದಾರಿ: ಇಲಾಖೆ/ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ಕಾನೂನು ವಿಷಯಗಳನ್ನು ನಿರ್ವಹಿಸುವುದು, ಎಸ್​ಎಐಗೆ ಸಂಬಂಧಿಸಿದ ಒಪ್ಪಂದಗಳು, ತಿಳಿವಳಿಕೆ ಪತ್ರ (ಎಂಒಯು) ಮತ್ತು ಇತರ ಕಾನೂನು ದಾಖಲೆಗಳ ಕರಡು ಸಿದ್ಧಪಡಿಸುವುದು ಮತ್ತು ನೋಡಿಕೊಳ್ಳುವುದು ಇತ್ಯಾದಿ.

* ಯಂಗ್​ ಪ್ರೊಫೆಷನಲ್ಸ್​ (ಪ್ರಾಜೆಕ್ಟ್​ ಆ್ಯಂಡ್​ ಅಡ್ಮಿನ್​) -1

ಬಿಬಿಎ/ ಎಂಬಿಎ/ ಪಿಜಿಡಿಸಿಎ/ ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆ ಜವಾಬ್ದಾರಿ: ಎನ್​ಸಿಒಇಯ ಅಂದಿನ ಆಡಳಿತಾತ್ಮಕ ಕೆಲಸಗಳನ್ನು ಮಾಡುವುದು, ನಿದಿರ್ಷ್ಟ ಯೋಜನೆಗಳ ಕಾರ್ಯಾಚರಣೆಗಳ ಕಾರ್ಯಕ್ರಮ, ನಿರ್ವಹಣೆ, ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಪರಿಶೀಲಿಸುವುದು ಮತ್ತು ವರದಿ ಮಾಡುವುದು ಇತ್ಯಾದಿ.

* ಯಂಗ್​ ಪ್ರೊಫೆಷನಲ್ಸ್​ (ಅಥ್ಲೀಟ್​ ರಿಲೇಷನ್​ ಮ್ಯಾನೇಜರ್​) - 12

ಯಾವುದೇ ಪದವಿ ಮಾಡಿದ್ದು, ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಹಾಗೂ ಬಿ.ಟೆಕ್​/ ಎಂಎಸ್​ಸಿ/ ಎಂಸಿಎ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆ ಜವಾಬ್ದಾರಿ: ಅಭ್ಯರ್ಥಿಗೆ ನಿಯೋಜಿಸಲಾದ ಕ್ರೀಡಾಪಟುಗಳ ಅಗತ್ಯ ಸೇವೆ ಸಲ್ಲಿಸುವುದು, ಎಸ್​ಎಐನಲ್ಲಿ ಕ್ರೀಡಾಪಟುವಿನ ಪ್ರಸ್ತಾಪದ ಬಗ್ಗೆ ಆರಂಭದಿಂದ ಕೊನೆಯವರೆಗೆ ನೋಡಿಕೊಳ್ಳುವುದು, ಅಗತ್ಯವಿದ್ದಾಗ ಕ್ರೀಡಾಪಟುವಿನ ಜತೆ ವೈಯಕ್ತಿಕ ಸಂವಹನ ನಡೆಸಿ ಬೆಂಬಲ ನೀಡುವುದು ಇತ್ಯಾದಿ.

ವಯೋಮಿತಿ: ಗರಿಷ್ಠ 35 ವರ್ಷ.

ವೇತನ: ಮಾಸಿಕ 40,000- 60,000 ರೂ. ವರೆಗೆ ಇದೆ. ಇತರ ಯಾವುದೇ ಭತ್ಯೆ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ: ಅಭ್ಯಥಿರ್ಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಕ್ರೀಡಾ ಕ್ಷೇತ್ರದಲ್ಲಿನ ವೃತ್ತಿ ಅನುಭವ, ಸರ್ಕಾರಿ/ ಖಾಸಗಿ ಸಂಸ್ಥೆಯಲ್ಲಿನ ವೃತ್ತಿ ಅನುಭವ, ರಾಷ್ಟ್ರೀಯ, ಅಂತಾರಾಷ್ಟ್ರಿಯ ಕ್ರೀಡೆಯಲ್ಲಿ ಪಾಲ್ಗೊಂಡ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ನಂತರ ಅಂತಿಮ ಮೆರಿಟ್​ ಲಿಸ್ಟ್​ ಬಿಡುಗಡೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 4.5.2021

ಅಧಿಸೂಚನೆಗೆ: https://bit.ly/3vbkg4K

ಮಾಹಿತಿಗೆ: https://sportsauthorityofindia.nic.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net