

ದೆಹಲಿಯಲ್ಲಿರುವ ನ್ಯಾಷನಲ್ ಕಮಿಷನ್ ಆಫ್ ಹೋಮಿಯೋಪಥಿಯಲ್ಲಿ ಹಲವು ಉದ್ಯೋಗಾವಕಾಶಗಳಿದ್ದು, ಬ್ರಾಡ್‍ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ಮೂಲಕ ಈ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 15
ಹುದ್ದೆ ವಿವರ
* ಕನ್ಸಲ್ಟಂಟ್ ಟೆಕ್ನಿಕಲ್ (ಹೋಮಿಯೋಪಥಿ) - 3
* ಕನ್ಸಲ್ಟಂಟ್ ಅಕೌಂಟಂಟ್ - 1
* ಕನ್ಸಲ್ಟಂಟ್ ಐಟಿ - 1
* ಲೀಗಲ್ ಆಫೀಸರ್ (ಕನ್ಸಲ್ಟಂಟ್) - 1
* ಅಡ್ಮಿನ್ ಕನ್ಸಲ್ಟಂಟ್ - 3
* ಪ್ರೈವೇಟ್ ಸೆಕ್ರೆಟರಿ - 1
* ಸೀನಿಯರ್ ಟೆಕ್ನಿಕಲ್ ಆಫೀಸರ್ - 5
* ಸ್ಟೆನೋಗ್ರಾಫರ್ - 3
* ಜೂನಿಯರ್ ಟೆಕ್ನಿಕಲ್ ಆಫೀಸರ್ - 2
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಯಾವುದೇ ಪದವಿ, ಕಾನೂನು ಪದವಿ, ಬಿಟೆಕ್/ ಬಿಇ/ ಕಂಪ್ಯೂಟರ್ ಸೈನ್ಸ್, ಎಂಸಿಎ, ಹೋಮಿಯೋಪಥಿಯಲ್ಲಿ ಎಂಡಿ ಮಾಡಿರಬೇಕು. ಸ್ಟೆನೋಗ್ರಾಫರ್ ಹುದ್ದೆಗೆ ವೇಗವಾಗಿ ಉಕ್ತಲೇಖನ ತೆಗೆದುಕೊಳ್ಳುವ ಸಾಮಥ್ರ್ಯ ಹೊಂದಿರಬೇಕು. ಎಲ್ಲ ಹುದ್ದೆಗೂ ವೃತ್ತಿ ಅನುಭವ ಕೇಳಲಾಗಿದೆ. ಅಡ್ಮಿನ್, ಅಕೌಂಟ್ ಕನ್ಸಲ್ಟಂಟ್ ಹಾಗೂ ಪ್ರೈವೇಟ್ ಸೆಕ್ಟ್ರೇಟರಿ ಹುದ್ದೆಗೆ ನಿವೃತ್ತ ಸರ್ಕಾರಿ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು.
ವೇತನ: ಜೂ.ಟೆಕ್ನಿಕಲ್ ಅಧಿಕಾರಿಗೆ ಮಾಸಿಕ 35,000 ರೂ., ಸ್ಟೆನೋಗ್ರಾಫರ್ ಹಾಗೂ ಸೀನಿಯರ್ ಟೆಕ್ನಿಕಲ್ ಅಧಿಕಾರಿಗೆ ಮಾಸಿಕ 40,000 ರೂ., ಪ್ರೈವೇಟ್ ಸೆಕ್ರೆಟರಿಗೆ ಮಾಸಿಕ 43,000 ರೂ., ಉಳಿದ ಹುದ್ದೆಗಳಿಗೆ ಮಾಸಿಕ 50,000 ರೂ. ವೇತನ ಇದೆ.
ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಪ್ರತಿ ಪ್ರತ್ಯೇಕ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500ರೂ. ಪ್ರತ್ಯೇಕವಾಗಿ ಪಾವತಿಸಬೇಕು), ಎಸ್‍ಸಿ, ಎಸ್‍ಟಿ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. (ಇನ್ನೊಂದು ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 300ರೂ. ಪ್ರತ್ಯೇಕ).
ಅರ್ಜಿ ಸಲ್ಲಿಸಲು ಕೊನೇ ದಿನ: 9.8.2021
ಅಧಿಸೂಚನೆಗೆ: https://bit.ly/36QDWAT
ಮಾಹಿತಿಗೆ: www.becil.com