More

     ಜುಲೈ 26ರಿಂದ 9-11ನೇ ತರಗತಿ ಓಪನ್​: ಆದೇಶ ಹೊರಡಿಸಿದ ಗುಜರಾತ್​ ಸಿಎಂ

    ಗಾಂಧೀನಗರ: ಎಸ್​ಎಸ್​ಎಸ್​ಸಿ ಪರೀಕ್ಷೆಗಳು ಮುಗಿದಿರುವ ಬೆನ್ನಲ್ಲೇ ಶಾಲಾ ಕಾಲೇಜುಗಳನ್ನು ತೆರೆಯಬೇಕೇ ಬೇಡವೇ ಎಂಬ ಬಗ್ಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಇನ್ನೂ ಚಿಂತನೆ ನಡೆಸುತ್ತಿವೆ.

    ಆದರೆ ಇದರ ಬೆನ್ನಲ್ಲೇ ಗುಜರಾತ್​ ಸರ್ಕಾರ 9ರಿಂದ 11ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಜುಲೈ 26ರಿಂದ ಶಾಲೆ ತೆರೆಯಲು ಅನುಮತಿ ನೀಡಿದೆ. ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.

    ಕೋವಿಡ್-19 ನಿಯಮಗಳ ಅನುಸಾರ ಶಾಲೆಗಳನ್ನು ತೆರೆಯಲಾಗಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಶಾಲೆಯಲ್ಲಿ ದೈಹಿಕ ಶಿಕ್ಷಣ ತರಗತಿಗೆ ಹಾಜರಾಗಲು ಸಿದ್ಧರಿರುವ ವಿದ್ಯಾರ್ಥಿಗಳ ಪೋಷಕರು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಸಲ್ಲಿಸಬೇಕಾಗುತ್ತದೆ. ಜತೆಗೆ, ತರಗತಿಗೆ ಹಾಜರಿ ಕಡ್ಡಾಯವಾಗಿಲ್ಲವಾದರೂ, ಆನ್‍ಲೈನ್ ಶಿಕ್ಷಣ ಎಂದಿನಂತೆ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ.

    ಕರೊನಾ ಪ್ರಕರಣದಲ್ಲಿ ಇಳಿಕೆ ಕಂಡಿದ್ದು, ಶಾಲೆಗಳು, 12ನೇ ತರಗತಿ, ಕಾಲೇಜುಗಳು ಹಾಗೂ ತಾಂತ್ರಿಕ ಸಂಸ್ಥೆಗಳನ್ನು ಪುನಃ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

    ಬೇರೆಯವರಿಗೆ ಹೃದಯಕೊಟ್ಟಾಕೆಗೆ ಅನ್ಯಾಯ ಮಾಡಲಾರೆ ಎಂದು ಪತ್ನಿಯನ್ನು ಪ್ರಿಯಕರನಿಂದ ಒಪ್ಪಿಸಿದ ಪತಿ!

    ನವಜೋತ್​ ಸಿಂಗ್​ ಸಿಧು ಪದಗ್ರಹಣ ಸಮಾರಂಭಕ್ಕೆ ತೆರಳುತ್ತಿದ್ದ ಮೂವರು ಕಾಂಗ್ರೆಸ್​ ಕಾರ್ಯಕರ್ತರ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts