More

    ಪ್ರಧಾನಿ ಮೋದಿ ಊರಿನಲ್ಲಿ 2800 ವರ್ಷಗಳಷ್ಟು ಹಳೆಯದಾದ ಮಾನವ ವಸಾಹತು ಅವಶೇಷಗಳು ಪತ್ತೆ!

    ಸೂರತ್​: ಪ್ರಧಾನಿ ನರೇಂದ್ರ ಮೋದಿ ತವರಲ್ಲಿ 2800 ವರ್ಷಗಳಷ್ಟು ಹಳೆಯದಾದ ಮಾನವ ವಸಾಹತು ಅವಶೇಷಗಳು ಪತ್ತೆಯಾಗಿದ್ದು, ಸ್ಥಳೀಯರನ್ನು ಅಚ್ಚರಿಗೆ ದೂಡಿದೆ. ಮೋದಿ ಅವರ ಸ್ವಗ್ರಾಮ ವಡ್​ನಗರದಲ್ಲಿ ಈ ಅವಶೇಷಗಳು ಸಿಕ್ಕಿವೆ.

    ಐಐಟಿ ಖರಗ್​ಪುರ್​, ಭಾರತೀಯ ಪುರಾತತ್ವ ಇಲಾಖೆ (ಎಎಸ್​ಐ), ಭೌತಿಕ ಸಂಶೋಧನಾ ಪ್ರಯೋಗಾಲಯ (ಪಿಆರ್​ಎಲ್​), ಜವಹರಲಾಲ್​ ನೆಹರು ವಿಶ್ವವಿದ್ಯಾಲಯ (ಜೆಎನ್​ಯು) ಮತ್ತು ಡೆಕ್ಕನ್​ ಕಾಲೇಜಿನ ಸಂಶೋಧಕರು ಮಾನವ ವಸಾಹತು ಅವಶೇಷಗಳ ಸಾಕ್ಷಿಯನ್ನು ಕಂಡುಕೊಂಡಿದ್ದಾರೆ.

    ಕ್ರಿ.ಪೂ 800 ವರ್ಷಗಳಷ್ಟು ಹಳೆಯದಾದ ಮಾನವ ವಸಾಹತು, ಏಳು ಸಾಂಸ್ಕೃತಿಕ ಹಂತಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016 ರಿಂದಲೂ ಉತ್ಖನನ ಕಾರ್ಯ ನಡೆಯುತ್ತಿತ್ತು. ಸಂಶೋಧನಾ ತಂಡ 20 ಮೀಟರ್ ಆಳವನ್ನು ಅಗೆದಿದೆ ಎಂದು ಐಐಟಿ ಖರಗ್‌ಪುರದ ಭೂವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಪ್ರಾಧ್ಯಾಪಕ ಡಾ.ಅನಿಂಧ್ಯಾ ಸರ್ಕಾರ್ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಈ ಸಂಶೋಧನಾ ವರದಿ ಕ್ವಾಟರ್ನರಿ ಸೈನ್ಸ್ ರಿವ್ಯೂಸ್ ಜರ್ನಲ್‌ನಲ್ಲಿ ‘ಹವಾಮಾನ, ಮಾನವ ವಸಾಹತು ಮತ್ತು ದಕ್ಷಿಣ ಏಷ್ಯಾದಲ್ಲಿ ಆರಂಭಿಕ ಐತಿಹಾಸಿಕದಿಂದ ಮಧ್ಯಕಾಲೀನ ಅವಧಿಗೆ ವಲಸೆ: ಪಶ್ಚಿಮ ಭಾರತದ ವಡ್​ನಗರದಲ್ಲಿ ಹೊಸ ಪುರಾತತ್ವ ಉತ್ಖನನದಿಂದ ಪುರಾವೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾಗಿದೆ.

    ಪತ್ರಿಕೆಯ ಸಹ-ಲೇಖಕರಾದ ಎಎಸ್‌ಐ ಪುರಾತತ್ವಶಾಸ್ತ್ರಜ್ಞ ಅಭಿಜಿತ್ ಅಂಬೇಕರ್ ಮಾತನಾಡಿ, ಹಲವಾರು ಆಳವಾದ ಕಂದಕಗಳಲ್ಲಿ ಉತ್ಖನನವು ಏಳು ಸಾಂಸ್ಕೃತಿಕ ಹಂತಗಳಾದ (ಅವಧಿಗಳು) ಮೌರ್ಯ, ಇಂಡೋ-ಗ್ರೀಕ್, ಇಂಡೋ-ಸೈಥಿಯನ್ ಅಥವಾ ಶಾಕ-ಕ್ಷತ್ರಪಾಸ್, ಹಿಂದೂ-ಸೋಲಂಕಿಗಳು, ಸುಲ್ತಾನರು-ಮೊಘಲ್ (ಇಸ್ಲಾಮಿಕ್) ನಿಂದ ಗಾಯಕ್ವಾಡ್-ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ ಮತ್ತು ನಗರವು ಇಂದಿಗೂ ಮುಂದುವರಿದಿರುವುದನ್ನು ಬಹಿರಂಗಪಡಿಸಿತು. ನಮ್ಮ ಉತ್ಖನನದ ಸಮಯದಲ್ಲಿ ಅತ್ಯಂತ ಹಳೆಯ ಬೌದ್ಧ ಮಠಗಳಲ್ಲಿ ಒಂದನ್ನು ಕಂಡುಹಿಡಿಯಲಾಗಿದೆ ಎಂದರು.

    ಸಂಶೋಧಕರು ಕಂಡುಕೊಂಡ ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳಲ್ಲಿ ಕುಂಬಾರಿಕೆ, ತಾಮ್ರ, ಚಿನ್ನ, ಬೆಳ್ಳಿ ಮತ್ತು ಕಬ್ಬಿಣದ ವಸ್ತುಗಳು ಮತ್ತು ಸಂಕೀರ್ಣ ವಿನ್ಯಾಸದ ಬಳೆಗಳು ಸೇರಿವೆ ಎಂದು ಅಂಬೇಕರ್ ಹೇಳಿದರು. ವಡ್​ನಗರದಲ್ಲಿ ಇಂಡೋ-ಗ್ರೀಕ್ ಆಳ್ವಿಕೆಯಲ್ಲಿದ್ದ ಗ್ರೀಕ್ ರಾಜ ಅಪೊಲೊಡಾಟಸ್‌ನ ನಾಣ್ಯ ಅಚ್ಚುಗಳು ಸಹ ಕಂಡುಬಂದಿವೆ ಎಂದು ಅವರು ಹೇಳಿದರು.

    ಪತ್ತೆಯಾದ ಅವಶೇಷಗಳು ವಡ್‌ನಗರವನ್ನು ಭಾರತದಲ್ಲಿ ಇದುವರೆಗೆ ಪತ್ತೆಯಾದ ಒಂದೇ ಕೋಟೆಯೊಳಗೆ ವಾಸಿಸುವ ಅತ್ಯಂತ ಹಳೆಯ ನಗರವಾಗಿದೆ ಎಂದು ಅಂಬೇಕರ್ ಹೇಳಿದ್ದಾರೆ. (ಏಜೆನ್ಸೀಸ್​)

    ಬಡಮಕ್ಕಳ ಶಿಕ್ಷಣಕ್ಕೆ 7 ಕೋಟಿ ರೂ. ಮೌಲ್ಯದ ಜಮೀನು ದಾನ ಮಾಡಿದ ಮಹಿಳೆ! ಪ್ರತ್ಯಕ್ಷ ದೈವವೆಂದ ಜನರು

    ಮೈ ಕೊರಿಯುವ ಚಳಿಯಿಂದ ರಕ್ಷಿಸಲು ಅಯೋಧ್ಯೆಯಲ್ಲಿ ವಿಶೇಷ ವ್ಯವಸ್ಥೆ

    ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts