More

    ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವು

    ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ಆ ಮೂಲಕ ಇಲ್ಲಿ ಚಿರತೆಗಳ ಸಾವಿನ ಸಂಖ್ಯೆ 10 ಕ್ಕೇರಿದೆ.

    ಇದನ್ನೂ ಓದಿ:ಕೇಂದ್ರದ ವಿರುದ್ಧ ದೆಹಲಿಯಲ್ಲಿ ಕೇರಳ ಸಿಎಂ ಪಿಣರಾಯಿ ಪ್ರತಿಭಟನೆ

    ನಮೀಬಿಯಾದ ಚಿರತೆ ಶೌರ್ಯ ಮಂಗಳಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಸಾವನ್ನಪ್ಪಿರುವುದಾಗಿ ಹುಲಿ ಯೋಜನೆ ನಿರ್ದೇಶಕರು ತಿಳಿಸಿದ್ದಾರೆ. 2022 ರಲ್ಲಿ ನಮೀಬಿಯಾ ಚಿರತೆಗಳನ್ನು ಭಾರತದಲ್ಲಿ ಮತ್ತೆ ಪರಿಚಯಿಸಲಾಗಿತ್ತು.

    ಬೆಳಗ್ಗೆ 11 ಗಂಟೆಯ ನಿತ್ರಾಣ ಸ್ಥಿತಿಯಲ್ಲಿದ್ದ ಚಿರತೆಯನ್ನು ನಿಗಾವಣಾ ತಂಡ ಗಮನಿಸಿತ್ತು. ನಂತರ ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡಿತಾದರೂ ನಡುಗುವುದು ಕಂಡುಬಂದಿತ್ತು. ಜೀವ ಉಳಿಸುವ ಸಿಪಿಆರ್ ಗೆ ಸ್ಪಂದಿಸುವಲ್ಲಿ ವಿಫಲವಾಯಿತು ಎಂದು ನಿರ್ದೇಶಕರು ತಿಳಿಸಿದ್ದಾರೆ.

    ಶೌರ್ಯ ಚಿರತೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ತಿಳಿಯಬೇಕಿದೆ. ಉಳಿದ 13 ಚಿರತೆಗಳು ಮತ್ತು ನಾಲ್ಕು ಮರಿಗಳು ಆರೋಗ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. 2022 ರಲ್ಲಿ ಮತ್ತೆ ಈ ತಳಿಯ ಪ್ರಾಣಿಗಳನ್ನು ಉದ್ಯಾನವನಕ್ಕೆ ತರಲಾಯಿತು. ಚೀತಾಗಳನ್ನು ಎರಡು ಬ್ಯಾಚ್‌ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾ ಮತ್ತು 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ ಅವುಗಳನ್ನು ತರಲಾಗಿತ್ತು.

    ಅಂದು ಬಾಲನಟಿ ಇಂದು ಹಾಲಿವುಡ್​ ಬ್ಯೂಟಿ! ಆವಂತಿಕಾ ನೋಡಿ ಹುಬ್ಬೇರಿಸಿದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts