

ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಭುವನೇಶ್ವರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಮಿನರಲ್ಸ್ ಆ್ಯಂಡ್ ಮೆಟಿರಿಯಲ್ಸ್ ಟೆಕ್ನಾಲಜಿಯಲ್ಲಿ (ಐಎಂಎಂಟಿ) ಸೆಕ್ರೇಟರಿಯೇಟ್ ಅಸಿಸ್ಟೆಂಟ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 14
ಐಎಂಎಂಟಿಯಲ್ಲಿ
ಸೆಕ್ರೇಟರಿಯೇಟ್ ಹುದ್ದೆಗಳು
ಖನಿಜ ಮತ್ತು ಮೆಟಿರಿಯಲ್ ಸಂಪನ್ಮೂಲಗಳ ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಐಎಂಎಂಟಿಯು ಉತ್ತಮ ಶೈಕ್ಷಣಿಕ ಹಿನ್ನೆಲೆ, ಕೌಶಲ ಹೊಂದಿರುವ ಅಭ್ರರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೋರಿದೆ.
ಹುದ್ದೆ ವಿವರ
* ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟೆಂಟ್ (ಜನರಲ್ - 7, ಫೈನಾನ್ಸ್ ಆ್ಯಂಡ್ ಅಕೌಂಟ್ಸ್- 2, ಎಸ್ ಆ್ಯಂಡ್ ಪಿ- 3)- 12
* ಜೂನಿಯರ್ ಸ್ಟೆನೋಗ್ರಾಫರ್ - 2
ವಿದ್ಯಾರ್ಹತೆ: ದ್ವೀತಿಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿದ್ದು, ಕಂಪ್ಯೂಟರ್ ಟೈಪಿಂಗ್ (ಪ್ರತಿ ನಿಮಿಷಕ್ಕೆ ಇಂಗ್ಲಿಷ್ನಲ್ಲಿ 35 ಪದ) ಜತೆ ಬೇಸಿಕ್ ಕಂಪ್ಯೂಟರ್ ಜ್ಞಾನ ಅವಶ್ಯ.
ವಯೋಮಿತಿ: ಜೂ. ಸೆಕ್ರೇಟರಿಯೇಟ್ ಅಸಿಸ್ಟೆಂಟ್ಗೆ ಗರಿಷ್ಠ 28 ವರ್ಷ, ಸ್ಟೆನೋಗ್ರಾರ್ಗೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ರರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟೆಂಟ್ಗೆ ಮಾಸಿಕ 19,900 ರಿಂದ 63,200 ರೂ. ವೇತನ ಇದೆ, ಸ್ಟೆನೋಗ್ರಾರ್ಗೆ ಮಾಸಿಕ 25,500 - 81,100 ರೂ. ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಮೀಸಲಾತಿ: ಸಾಮಾನ್ಯವರ್ಗದ ಅಭ್ರರ್ಥಿಗೆ 10 ಸ್ಥಾನ, ಎಸ್ಸಿಗೆ 1, ಎಸ್ಟಿಗೆ 2, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ರರ್ಥಿಗೆ 1 ಸ್ಥಾನ ಮೀಸಲಿರಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಸಿಎಸ್ಐಆರ್-ಐಎಂಎಂಟಿಯ ನಿಯಮಾನುಸಾರ ಶಾರ್ಟ್ಲಿಸ್ಟ್ ಮಾಡಲಾದ ಅಭ್ರರ್ಥಿಗಳನ್ನು ಟೈಪಿಂಗ್/ಸ್ಕಿಲ್ ಟೆಸ್ಟ್/ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಅಭ್ರರ್ಥಿಗಳ ಶೈಕ್ಷಣಿಕ ಅರ್ಹತೆ, ಕೌಶಲ ಆಧರಿಸಿ ಅಭ್ರರ್ಥಿಗಳ ಆಯ್ಕೆ ಮಾಡಲಾಗುವುದು. ಟೈಪಿಂಗ್ ಹಾಗೂ ಲಿಖಿತ ಪರೀಕ್ಷೆಯನ್ನು ಭುವನೇಶ್ವರದಲ್ಲಿ ನಡೆಯಲಿದೆ. ಆದರೆ, ದೇಶದ ಬೇರೆ ನಗರಗಳಲ್ಲಿಯೂ ನಡೆಸುವ ಸಾಧ್ಯತೆಗಳು ಇಲ್ಲದಿಲ್ಲ.
ಅರ್ಜಿ ಶುಲ್ಕ: ಎಸ್ಸಿ/ ಎಸ್ಟಿ/ ಅಂಗವಿಕಲ/ ಮಹಿಳಾ/ ಸಿಎಸ್ಐಆರ್ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಅಭ್ರರ್ಥಿಗಳು 100 ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 26.6.2021
ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೇ ದಿನ: 30.6.2021
ಅರ್ಜಿ ಸಲ್ಲಿಕೆ ವಿಳಾಸ: CSIR-Institute of Minerals & Materials Technology, , Near Pathani Samanta Planetarium, Acharya Vihar,Bhuvaneshwar,- 751 013, Odisha, INDIA
ಅಧಿಸೂಚನೆಗೆ: https://bit.ly/3v94rfo
ಮಾಹಿತಿಗೆ: http://www.immt.res.in