ಸೇನೆಯಲ್ಲಿ ಗ್ರೂಪ್ "ಸಿ" ಹುದ್ದೆಗಳಿಗೆ ನೇಮಕ: 89 ಸ್ಥಾನಗಳಿಗೆ ಅರ್ಜಿ ಆಹ್ವಾನ

udyoga-sene
Published on

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ (ಡಿಜಿಎಎಫ್ಎಂಎಸ್) ವಿವಿಧ ಘಟಕ/ ವಿಭಾಗ/ ಶಾಖೆಗಳಲ್ಲಿ ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಒಟ್ಟು ಹುದ್ದೆಗಳು: 89


ಹುದ್ದೆ ವಿವರ
* ಮಲ್ಟಿ ಟಾಸ್ಕಿಂಗ್ ಸ್ಟಾï (ಸಾಯಿವಾಲಾ- 6, ಗಾರ್ಡನರ್/ ಮಾಲಿ- 3, ವಾಚ್‍ಮನ್/ಚೌಕಿದಾರ್ - 17, ಮೆಸ್ಸೆಂಜರ್-1) - 27
* ಟ್ರೇಡ್ಸ್‍ಮೆನ್ ಮೇಟ್ - 32
* ಸ್ಟೋರ್ ಕೀಪರ್ - 14
* ಬಾರ್ಬರ್ - 2
* ಸಿನಿಮಾ ಪ್ರೊಜೆಕ್ಷನಿಸ್ಟ್ (ಗ್ರೇಡ್ 2) - 1
* ವಾಷರ್‍ಮನ್ - 2
* ಕ್ಯಾಂಟೀನ್ ಬೇರರ್ - 1
* ಕುಕ್ - 1
* ಫೋರ್ಮನ್ - 4
* ಎಕ್ಸ್ ರೇ ಎಲೆಕ್ಟ್ರಿಷಿಯನ್ - 1
* ಲೋವರ್ ಡಿವಿಷನ್ ಕ್ಲರ್ಕ್ - 3
* ಸ್ಟೆನೋಗ್ರಾಫರ್​ ಗ್ರೇಡ್-2 - 1

ಯಾವ ಘಟಕದಲ್ಲಿ ಉದ್ಯೋಗ?:
* ಪುಣೆಯ ಸಶಸ ಪಡೆ ವೈದ್ಯಕೀಯ ಕಾಲೇಜು
* ಮುಂಬೈ, ಲಖನೌ, ಪುಣೆ, ದೆಹಲಿಯ ಸಶಸ ಪಡೆ ವೈದ್ಯಕೀಯ ಉಗ್ರಾಣ
* ದೆಹಲಿಯ ಸಶಸ ಪಡೆ ಟ್ರಾನ್ಸ್ಫ್​ರ್ಯೂಷನ್ ಸೆಂಟರ್
* ಪುಣೆಯ ಕೃತಕ ಅವಯವ ಕೇಂದ್ರ

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್, ಎಲೆಕ್ಟ್ರಿಷಿಯನ್ ಡಿಪ್ಲೋಮಾ, ದ್ವಿತೀಯ ಪಿಯುಸಿ/ ತತ್ಸಮಾನ ಶಿಕ್ಷಣ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಟೈಪಿಂಗ್ ಜ್ಞಾನ ಅವಶ್ಯ. ಚೇರ್‍ಮೆನ್ ಹುದ್ದೆಗೆ ದೈಹಿಕ ದೃಢತೆ ಮಾನದಂಡ ನೀಡಲಾಗಿದೆ.

ವಯೋಮಿತಿ: ಸ್ಟೆನೋಗ್ರಾಫರ್​, ಲೋವರ್ ಡಿವಿಷನ್ ಕ್ಲರ್ಕ್, ಸ್ಟೋರ್ ಕೀಪರ್‍ಗೆ ಗರಿಷ್ಠ 27 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ನಿಗದಿಯಾಗಿದೆ. ಎಲ್ಲ ಹುದ್ದಗಳಿಗೂ ಕನಿಷ್ಠ 18 ವರ್ಷ ತುಂಬಿರಬೇಕು.

ವೇತನ: ಸ್ಟೆನೋಗ್ರಾಫರ್​ ಹಾಗೂ ಎಕ್ಸ್-ರೇ ಎಲೆಕ್ಟ್ರಿಷಿಯನ್‍ಗೆ ಮಾಸಿಕ 25,500- 81,100 ರೂ. ವೇತನ, ಲೋವರ್ ಡಿವಿಷನ್ ಕ್ಲರ್ಕ್, ಸ್ಟೋರ್ ಕೀಪರ್, ಸಿನಿಮಾ ಪ್ರೊಡಕ್ಷನಿಸ್ಟ್, ಚೇರ್​ಮನ್‍ಗೆ ಮಾಸಿಕ 19,900-63,200 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 18,000-56,900 ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಗುಣವಾಗಿ 2 ಹಂತದಲ್ಲಿ ಪರೀಕ್ಷೆ ನಡೆಸಲಾಗುವುದು. ಮೊದಲ ಹಂತದಲ್ಲಿ ಸಾಮಾನ್ಯ ಜ್ಞಾನ, ನ್ಯೂಮರಿಕಲ್ ಆಪ್ಟಿಟ್ಯೂಡ್, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಅರಿವು ಕುರಿತ ಲಿಖಿತ ಪರೀಕ್ಷೆ ನಡೆಸಲಾಗುವುದು. 2ನೇ ಹಂತದಲ್ಲಿ ಟೈಪಿಂಗ್ ಪರೀಕ್ಷೆ/ ಶಾರ್ಟ್‍ಹ್ಯಾಂಡ್/ ಟ್ರೇಡ್/ ದೈಹಿಕ ಕ್ಷಮತೆ ಪರೀಕ್ಷೆ ನಡೆಸಲಾಗುವುದು.

ಸೂಚನೆ: ಅರ್ಜಿಯನ್ನು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಸಿದ್ಧಪಡಿಸಿ, 25 ರೂ.ನ ಸ್ಟಾಂಪ್ ಅಂಟಿಸಿ ಯಾವ ಘಟಕದ ಯಾವ ಹುದ್ದೆಗೆ ಎಂದು ಸ್ಪಷ್ಟವಾಗಿ ನಮೂದಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 9.8.2021
ಅಧಿಸೂಚನೆಗೆ: https://bit.ly/2W31FLP
ಮಾಹಿತಿಗೆ: www.indianarmy.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net