ಬೆಂಗಳೂರಿನಿಂದಲೇ ಕಾರ್ಯಾಚರಣೆ ಮಾಡುತ್ತಿದೆ ಪಬ್​ಜಿ

pubji
Published on

ಬೆಂಗಳೂರು: ಚೀನಾ ಮೂಲದ ಆ್ಯಪ್​ ಆಗಿದ್ದ ಪಬ್​ಜಿಯನ್ನು ಬ್ಯಾನ್​ ಮಾಡಿ ತಿಂಗಳುಗಳೇ ಕಳೆದಿವೆ. ಆದರೆ ಇದೀಗ ಕಂಪೆನಿಯ ರೂಪದಲ್ಲಿ ಭಾರತದಲ್ಲಿ ಮತ್ತೊಮ್ಮೆ ಪ್ರವೇಶ ಮಾಡಿದೆ.

ಪಬ್​ಜಿ ಮೊಬೈಲ್​ ಇಂಡಿಯಾ ಎಂಬ ಹೆಸರಿನಲ್ಲಿ ಅಧಿಕೃತವಾಗಿ ನೋಂದಣಿಯನ್ನು ಪೂರ್ಣಗೊಳಿಸಲಾಗಿದೆ. ಟೆಕ್ ವೆಬ್​ಸೈಟ್ ಟಾಕ್​ಸಪೋರ್ಟ್​ ಪ್ರಕಾರ ಭಾರತ ಸರ್ಕಾರದ ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯ ಕಂಪನಿಗೆ ಅನುಮತಿ ನೀಡಿದೆ ಎನ್ನಲಾಗಿದೆ.

ಇನ್ನೊಂದು ವಿಶೇಷ ಎಂದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ ಕಂಪನಿಯ ನೋಂದಣಿಗೆ ನವೆಂಬರ್ 21ರಂದು ಅನುಮೋದನೆ ನೀಡಿದ್ದು, ಈ ಕಂಪೆನಿಯನ್ನು ಬೆಂಗಳೂರಿನಲ್ಲಿ ನೋಂದಾಯಿಸಲಾಗಿದೆ. ಭಾರತದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಡಿ 'ಪಬ್‌ಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್' ಆಗಿ ಪರಿವರ್ತನೆಗೊಂಡಿದೆ.

ಬಳಕೆದಾರರ ಹಳೆ ಐಡಿಯಲ್ಲಿಯೇ ಇದು ಕಾರ್ಯನಿರ್ವಹಿಸಲಿದ್ದು, ಗೇಮ್ ಪ್ಲೇಯರ್‌ಗಳು ಪ್ರತ್ಯೇಕ ಐಡಿ ರಚಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಮಾತ್ರವಲ್ಲದೇ ಪಬ್​ಜಿ ಗ್ಲೋಬಲ್‌ನಲ್ಲಿ ಬಳಸುತ್ತಿರುವ ಐಡಿಯೊಂದಿಗೆ ಭಾರತೀಯ ಆವೃತ್ತಿ ಬಳಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಪಬ್​ಜಿ ಆವೃತ್ತಿ ಮೊದಲಿನ ಗೇಮ್​ಗಿಂತ ಭಿನ್ನವಾಗಿದೆ. ಇದರ ಗಾತ್ರ ಚಿಕ್ಕದ್ದಾಗಿದ್ದು, ಕೇವಲ 610 ಎಂಬಿಗೆ ಇಳಿಸಲಾಗಿದ್ದು ಸುಲಭದಲ್ಲಿ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ. ಅಂದಹಾಗೆ ಪಬ್​ಜಿಯ ಫುಲ್​ ಫಾರ್ಮ್​ 'ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್'. ದಕ್ಷಿಣ ಕೊರಿಯಾ ಮೂಲದ ಈ ಆಟವು ಚೀನಾದ ಸಹಯೋಗಿ ಸಂಸ್ಥೆ 'ಟೆನ್ಸೆಂಟ್' ಮೂಲಕ ಈ ಹಿಂದೆ ಭಾರತದಲ್ಲಿ ಕಾರ್ಯಾಚರಿಸುತ್ತಿತ್ತು. ನಂತರ ಇತರ ಆ್ಯಪ್​ಗಳ ಜತೆ ಪಬ್​ಜಿಯನ್ನೂ ಬ್ಯಾನ್​ ಮಾಡಲಾಗಿತ್ತು.

ಇದನ್ನು ಡೌನ್​ಲೋಡ್ ಮಾಡಿಕೊಳ್ಳುವುದು ಹೀಗೆ:

ಈ ಮೊಬೈಲ್​ ಗೇಮ್​ನ ಪ್ರೀ ರೆಜಿಸ್ಟರ್​ ಮಾಡುವ ವಿಧಾನ ಇಲ್ಲಿದೆ:

* TapTap ವೆಬ್​ಸೈಟ್​ ಮೂಲಕ TapTap app ಡೌನ್​ಲೋಡ್​ ಮಾಡಿಕೊಳ್ಳಿ. APK ಲಿಂಕ್​ ಮೂಲಕ ಇದನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು.

* ಮೊದಲೇ ಐಡಿ ಇದ್ದರೆ ಲಾಗಿನ್​ ಆಗಬಹುದು ಇಲ್ಲವೇ ಹೊಸದಾಗಿ ಐಡಿ ಕ್ರಿಯೇಟ್​ ಮಾಡಿಕೊಳ್ಳಬಹುದು.

* ಲಾಗಿನ್​ ಆದ ತಕ್ಷಣ PUBG Mobile India ಎಂದು ಸರ್ಚ್​ ಆಪ್ಷನ್​ನಲ್ಲಿ ಟೈಪಿಸಿ ಅದರ ಮೇಲೆ ಕ್ಲಿಕ್​ ಮಾಡಬೇಕು

* ನಂತರ pre-registration ಆಪ್ಷನ್​ ಮೇಲೆ ಕ್ಲಿಕ್​ ಮಾಡಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net