

ಈಗ ಅವರು ನನ್ನ ತಂಗಿಯನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಡೈವೋರ್ಸ್ ಕೊಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ನನ್ನ ತಂಗಿಗೆ ಅವರನ್ನು ಕಂಡರೆ ಆಗುವುದಿಲ್ಲ.
ಈ ವಿಷಯದಲ್ಲಿ ಜಗಳವಾಡಿ ನನ್ನ ಗಂಡ ನನ್ನ ತಾಯಿಯನ್ನೂ ಚೆನ್ನಾಗಿ ಹೊಡೆದಿದ್ದಾರೆ. ನಮ್ಮ ತಂದೆಯ ಕಚೇರಿ ಹತ್ತಿರ ಹೋಗಿ ಗಲಾಟೆ ಮಾಡುತ್ತಿದ್ದಾರೆ. ನನ್ನ ತಂಗಿಯನ್ನು ಹೇಗಾದರೂ ಒಪ್ಪಿಸಿ ಮದುವೆ ಮಾಡಿಸಿದರೆ ಇಂಥ ವ್ಯಕ್ತಿ ಜತೆ ಆಕೆ ಜೀವನವೂ ಹಾಳಾಗುತ್ತದೆ. ಈಗ ಏನು ಮಾಡಬೇಕು ಎಂದೇ ತಿಳಿಯದಾಗಿದೆ. ಕಾನೂನಿನಡಿ ಪರಿಹಾರವಿದೆಯೆ?
ಉತ್ತರ: ನೀವು ಕೂಡಲೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ನಿಮ್ಮ ಪತಿಯ ವಿರುದ್ಧ ಪ್ರಕರಣ ದಾಖಲಿಸಿ. ಅವರು ನಿಮ್ಮ ಮನೆಗೆ ಬರಬಾರದು ಎನ್ನುವ ಪ್ರೊಟೆಕ್ಷನ್ ಆರ್ಡರ್ /ರಕ್ಷಣೆಯ ಆದೇಶವನ್ನು ಪಡೆಯಿರಿ. ನಿಮ್ಮ ತಂದೆಯಿಂದಲೂ ನಿಮ್ಮ ಪತಿಯ ವಿರುದ್ಧ ಫಿರ್ಯಾದು ದಾಖಲಿಸಿ. ನಿಮ್ಮ ತಂಗಿಯನ್ನು ಮದುವೆಯಾಗಲು ಹಿಂಸೆ ಮಾಡುತ್ತಿದ್ದಾರೆ ಎನ್ನುವುದನ್ನೂ ನೀವು ಪ್ರಕರಣದಲ್ಲಿ ತಿಳಿಸಿ. ಹಾಗೆಯೇ ಅವಳಿಂದಲೂ ರಕ್ಷಣೆ ಕೋರಿ ಪೊಲೀಸರಿಗೆ ಅರ್ಜಿ ಸಲ್ಲಿಸಿ.
ಯಾವುದೇ ಕಾರಣಕ್ಕೂ ನಿಮ್ಮ ಪತಿ ನಿಮ್ಮ ತಂಗಿಯನ್ನು ಮದುವೆ ಆಗಲು ಒಪ್ಪಲೇ ಬೇಡಿ. ಒಬ್ಬ ಪತ್ನಿ ಬದುಕಿರುವಾಗ ಆಕೆಯಿಂದ ವಿಚ್ಛೇದನ ಪಡೆಯದೇ ಇನ್ನೊಂದು ಮದುವೆ ಆಗವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ನಿಮಗೆ ಆತ ವಿಚ್ಛೇದನ ಕೊಡುತ್ತೇನೆ ಎಂದು ಹೆದರಿಸಿದರೆ ನೀವು ಹೆದರಬೇಡಿ.
ಇಂತಹ ವ್ಯಕ್ತಿಯ ಜತೆ ವೈವಾಹಿಕ ಸಂಬಂಧ ಇಟ್ಟುಕೊಂಡು ನಿಮಗೆ ಬರುವ ಲಾಭವಾದರೂ ಏನು? ಮೇಲಾಗಿ ವಿಚ್ಛೇದನವನ್ನು ಯಾರೂ ಯಾರಿಗೂ ಕೊಡಲಾಗುವುದಿಲ್ಲ. ವಿಚ್ಛೇದನ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ತಾನೇ ತಪ್ಪು ಮಾಡಿ, ವಿಚ್ಛೇದನ ಪಡೆಯುವ ಅಧಿಕಾರ ಯಾರಿಗೂ ಇರುವುದಿಲ್ಲ. ಆತ ಪ್ರಕರಣ ದಾಖಲಿಸಲಿ. ನೀವು ಧೈರ್ಯವಾಗಿ ಎದುರಿಸಿ. ಆತನನ್ನು ಪೋಷಿಸುವುದನ್ನು ಇನ್ನಾದರೂ ನಿಲ್ಲಿಸಿ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.