

ಆದರೆ ಈಗ 48 ಸಾವಿರ ರೂಪಾಯಿ ಬಿಲ್ ಕಳುಹಿಸಿ ಹಣ ಕೊಡುವಂತೆ ಕೇಳುತ್ತಿದ್ದಾಳೆ, ಇಲ್ಲದಿದ್ದರೆ ನನ್ನ ಮೇಲೆ ಮೊಕದ್ದಮೆ ಹೂಡುವುದಾಗಿ ಹೇಳುತ್ತಿದ್ದಾಳೆ. ಹಣವನ್ನು ಕೊಟ್ಟ ಮೇಲೆ ಮುಂದೆ ನೀನು ಹಣವನ್ನು ಕೊಡುವುದು ಬೇಡ ಅಂತ ಹೇಳಿದಾಕೆ ಈಗ ಮತ್ತೆ ಹಣವನ್ನು ಕೊಡುವಂತೆ ಹೆದರಿಸುತ್ತಿದ್ದಾಳೆ, ಅವಳು ನೀಡುತ್ತಿರವ ಬಿಲ್ಗಳು ನ್ಯಾಯ ಸಮ್ಮತವಾಗಿಲ್ಲ..ಅದನ್ನು ಕೇಳಿದರೆ ಮೊಕದ್ದಮೆ ಹೂಡುವುದಾಗಿ ಹೇಳುತ್ತಿದ್ದಾಳೆ. ನನ್ನ ಸಂಬಳದಿಂದ ಅಷ್ಟು ಹಣವನ್ನು ಭರಿಸಲು ಆಗುತ್ತಿಲ್ಲ. ನನ್ನನ್ನು ಈ ರೀತಿ ಬ್ಲ್ಯಾಕ್ಮೇಲ್ ಮಾಡುತ್ತಿರುವುದರಿಂದ ಅವಳ ಮೇಲೆ ನಾನು ಕೇಸ್ ದಾಖಲಿಸಬಹುದಾ?
ಉತ್ತರ: ನ್ಯಾಯಾಲಯದ ಆದೇಶದಂತೆ ನೀವು ನಿಮ್ಮ ಮಗಳಿಗೆ ವಿದ್ಯಾಭ್ಯಾಸದ ಖರ್ಚನ್ನು ಕೊಡಲೇ ಬೇಕಾಗುತ್ತದೆ. ತೀರ್ಪಿನಲ್ಲಿ ಇಂತಿಷ್ಟೇ ಕೊಡಬೇಕೆಂದು ಇರದೇ ಹೋದಾಗ , ನಿಮ್ಮ ಚೈತನ್ಯಕ್ಕೆ ಒಳಪಟ್ಟು ನೀವು ವಿದ್ಯಾಭ್ಯಾಸದ ಖರ್ಚನ್ನು ಕೊಡಬಹುದು.
ಬಾಯಿ ಮಾತಿನಲ್ಲಿ ನಿಮ್ಮ ವಿಚ್ಛೇದಿತ ಪತ್ನಿ ಏನೂ ಬೇಡ ಎಂದು ಹೇಳಿದ್ದರೆ ಅದರಿಂದ ಏನೂ ಪ್ರಯೋಜನ ಆಗುವುದಿಲ್ಲ. ನಿಮ್ಮಿಂದ ಸಾಧ್ಯವಾದಷ್ಟನ್ನು ಕಳುಹಿಸುತ್ತಿರಿ. ನೀವು ಕೇಸು ಹಾಕಬೇಕಿಲ್ಲ. ಆಕೆ ಹಾಕಿದರೆ ನಿಮಗೆ ಕಾಲಾವಕಾಶ ಬೇಕೆಂದು ಕೇಳಿದರೆ ಸಾಮಾನ್ಯವಾಗಿ ನ್ಯಾಯಾಲಯ ಸಮಯ ಕೊಡಬಹುದು.
ನಿಮ್ಮ ಚೈತನ್ಯಕ್ಕೂ ಮೀರಿದ ಶಾಲೆಯಲ್ಲಿ ನಿಮ್ಮ ಮಗುವಿನ ವಿದ್ಯಾಭ್ಯಾಸ ಮಾಡಿಸಿ, ಅದರ ಹಣ ನೀವೇ ಕೊಡಬೇಕು ಎಂದರೆ , ಆಗ ನಿಮಗೆ ಕಷ್ಟವಾಗಬಹುದು. ನಿಮ್ಮ ಸಂಬಳ ಇಷ್ಟು ಇದೆ, ಇಷ್ಟು ಮಾತ್ರ ಕೊಡಬಲ್ಲೆ ಎಂದು ನೀವು ನ್ಯಾಯಾಲಯಕ್ಕೆ ತಿಳಿಸಬಹುದು. ಆದೇಶದಲ್ಲಿ ಇಂತಿಷ್ಟೇ ಕೊಡಬೇಕು ಎಂದು ಇಲ್ಲದಿದ್ದರೆ ನೀವು ಹೆದರಬೇಕಾಗಿಲ್ಲ.
ಬೇಕಿದ್ದರೆ ನೀವು ಈ ವಿಷಯದ ಬಗ್ಗೆ ಮಾತ್ರ ಸೀಮಿತಗೊಳಿಸಿ ಮಾಡಿಫಿಕೇಷನ್ ಆಫ್ ಆರ್ಡರ್ ಕೇಳಿ ಅರ್ಜಿ ಸಲ್ಲಿಸಬಹುದು.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.