VIDEO: ಮಗು ಬಯಸುವ ಮಹಿಳೆಯರಿಗೆ ಪೂಜಾರಿ, ಬೈರಾಗಿಗಳು ಏನು ಮಾಡ್ತಾರೆ ನೋಡಿ...

harake
Published on

ರಾಯ್​ಪುರ (ಛತ್ತೀಸಗಢ): ಮಗುಬೇಕು ಎಂಬ ಆಸೆ ಪ್ರತಿಯೊಬ್ಬ ಹೆಣ್ಣಿಗೂ ಇರುತ್ತದೆ. ಆದರೆ ನಾನಾ ಕಾರಣಗಳಿಂದ ಎಷ್ಟೋ ಮಹಿಳೆಯರಿಗೆ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಅಂಥ ಸಮಯದಲ್ಲಿ ತಪ್ಪು ದಂಪತಿಯಲ್ಲಿ ಯಾರದ್ದೇ ಇರಲಿ, ಮಹಿಳೆಯರು ಅನುಭವಿಸುವ ನೋವುಗಳು, ಚುಚ್ಚುಮಾತುಗಳು ಅಷ್ಟಿಷ್ಟಲ್ಲ.

ಗರ್ಭ ಧರಿಸದೇ ಇರುವ ಸಂದರ್ಭದಲ್ಲಿ ಎಲ್ಲಾ ರೀತಿಯ ಪ್ರಯತ್ನಗಳೂ ಸೋತ ತಕ್ಷಣ ಮಹಿಳೆಯರು ಕೊನೆಯದಾಗಿ ಮೊರೆ ಹೋಗುವುದು ದೇವರಿಗೆ. ಎಷ್ಟೇ ಕಷ್ಟವಾದರೂ ಸರಿ, ಆ ಹರಕೆಯನ್ನು ತೀರಿಸುವ ಪಣ ತೊಡುತ್ತಾರೆ.

ಇಂಥ ಮುಗ್ಧ ಹೆಣ್ಣುಮಕ್ಕಳನ್ನು ಚಿತ್ರಹಿಂಸೆಗೆ ಗುರಿಪಡಿಸಿ, ಮೂಢ ನಂಬಿಕೆಗಳಿಗೆ ಒಳಪಡಿಸುವಂಥ ಆಚರಣೆಗಳು ಅಲ್ಲಲ್ಲಿ ಕಾಣಸಿಗುತ್ತದೆ.

ಅಂಥದ್ದೇ ಒಂದು ಕಠೋರ ಹಾಗೂ ಭಯಾನಕ ಆಚರಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಛತ್ತೀಸಗಢದ ರಾಯ್​ಪುರದಲ್ಲಿ ಈ ಘಟನೆ ನಡೆದಿದೆ.

ಈ ಹರಕೆಯ ವಿಡಿಯೋ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ:

ಪ್ರತಿ ವರ್ಷದಂತೆ ಈ ವರ್ಷವೂ ಇಂಥದ್ದೊಂದು ವಿಚಿತ್ರ ಹರಕೆ ತೀರಿಸುವ ಘಟನೆ ಕರೊನಾ ಮಧ್ಯೆಯೇ ನಡೆದಿದೆ. ಈ ಆಚರಣೆ ಎಂದರೆ ಮಕ್ಕಳು ಬಯಸುವ ಮಹಿಳೆಯರು ಮಲಗಿದರೆ ಅವರ ಮೇಲೆ ಪೂಜಾರಿಗಳು ಹಾಗೂ ಬೈರಾಗಿಗಳು ನಡೆದುಕೊಂಡು ಹೋಗಿದ್ದಾರೆ.

ಹೀಗೆ ಮಾಡಿದರೆ ಮಹಿಳೆಯರಿಗೆ ಮಕ್ಕಳಾಗುತ್ತದೆಯಂತೆ. ಕರೊನಾ ನಡುವೆಯೂ ಯಾವುದೇ ಕರೊನಾ ನಿಯಮ ಪಾಲನೆ ಮಾಡದೇ, ಮಾಸ್ಕ್​ ಧರಿಸದೇ ಮಹಿಳೆಯರ ಮೇಲೆ ಪೂಜಾರಿ ಹಾಗೂ ಬೈರಾಗಿಗಳು ನಡೆದುಕೊಂಡು ಹೋಗಿರುವ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net