ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು - ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

Matthew McConaughey
Published on

ಲಾಸ್ ಏಂಜಲೀಸ್: ಹಾಲಿವುಡ್ ತಾರೆ, ಆಸ್ಕರ್​ ಪ್ರಶಸ್ತಿ ಪುರಸ್ಕೃತ ಮ್ಯಾಥ್ಯೂ ಮೆಕ್​ನೌಘೆ ಅವರು ಆತ್ಮಕಥನವನ್ನು ಬರೆದಿದ್ದು, ಅದೀಗ ಬಿಡುಗಡೆಗೆ ಸಿದ್ಧವಾಗಿದೆ. ಆತ್ಮಕಥನದಲ್ಲಿ ಇರುವ ಕೆಲವು ವಿಷಯಗಳು ಇದಾಗಲೇ  ಬಹು ಚರ್ಚೆಗೆ ಗ್ರಾಸವಾಗುತ್ತಿದೆ.

ಅದೇನೆಂದರೆ ಮ್ಯಾಥ್ಯೂ ಅವರ ಅಪ್ಪ-ಅಮ್ಮ ಎರಡು ಬಾರಿ ವಿಚ್ಛೇದನವಾಗಿ ಮೂರನೆಯ ಬಾರಿ ಮದುವೆಯಾಗಿದ್ದಾರೆ. ಮೂರನೆಯ ಬಾರಿ ಮದುವೆಯಾಗುವ ಸಮಯದಲ್ಲಿ ಇಬ್ಬರೂ ಸೆಕ್ಸ್​ ನಡೆಸುತ್ತಿದ್ದಾಗ ತಮ್ಮ ತಂದೆ ಮೃತಪಟ್ಟಿದ್ದಾರೆ ಎಂದು ಅದರಲ್ಲಿ ಮ್ಯಾಥ್ಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇವರ ಜೀವನ ಚರಿತ್ರೆಯ ಹೆಸರು ಗ್ರೀನ್‌ಲೈಟ್ಸ್, ಅದರಲ್ಲಿ ತಮ್ಮ ಬದುಕಿನ ಕೆಲವೊಂದು ರೋಚಕ ಸಂಗತಿಗಳನ್ನು ಅವರು ವಿವರಿಸಿದ್ದಾರೆ. ಅದರಲ್ಲಿ ತಂದೆ ಜೇಮ್ಸ್ ಡೊನಾಲ್ಡ್ ಹಾಗೂ ತಾಯಿ ಕೇ ದಾಂಪತ್ಯದ ಕುರಿತು ಕುತೂಹಲದ ಮಾಹಿತಿಗಳಿವೆ.

'ನನ್ನ ತಂದೆ-ತಾಯಿ ಚಿಕ್ಕಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳುತ್ತಿದ್ದರು. ಆದರೆ ಇಬ್ಬರೂ ತುಂಬಾ ಪ್ರೀತಿಸುತ್ತಿದ್ದರು. ಆದ್ದರಿಂದ ಜಗಳ ವಿಕೋಪಕ್ಕೆ ಹೋದಾಗ ಎರಡು ಬಾರಿ ವಿಚ್ಛೇದನ ಪಡೆದರು. ಅಂದರೆ ಮೊದಲ ಬಾರಿಗೆ ವಿಚ್ಛೇದನ ಪಡೆದು ಪುನಃ ಮದುವೆಯಾದರು, ಮತ್ತೊಮ್ಮೆ ವಿಚ್ಛೇದನ ಪಡೆದ ಮೂರನೆಯ ಬಾರಿ ಮದುವೆಯಾಗಿದ್ದರು' ಎಂದು ಮ್ಯಾಥ್ಯೂ ಹೇಳಿದ್ದಾರೆ.

ಮೂರನೆಯ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಹೃದಯಾಘಾತದಿಂದ ಮೃತಪಟ್ಟರು. ಈ ಸಂದರ್ಭದಲ್ಲಿ ನಾನು ಬೇರೆ ಕಡೆ ನೆಲೆಸಿದ್ದೆ. ನನ್ನ ತಾಯಿಯಿಂದ ನನಗೆ ಕರೆ ಬಂತು. ನಿಮ್ಮ ತಂದೆ ತೀರಿಕೊಂಡರು ಎಂದು ಅವರು ಹೇಳಿದರು. ನನಗೆ ನಂಬಲು ಸಾಧ್ಯವೇ ಆಗಲಿಲ್ಲ ಎಂದು ಅವರು ಪುಸ್ತಕದಲ್ಲಿ ಹೇಳಿದ್ದಾರೆ.

ನನ್ನ ತಂದೆಯನ್ನು ಯಾರೂ ಸಾಯಿಸಲು ಸಾಧ್ಯವೇ ಇರಲಿಲ್ಲ. ಅವರು ಹಾಗೆ ಹೀಗೆ ಸಾಯುವ ವ್ಯಕ್ತಿಯೂ ಅಲ್ಲ. ಆದ್ದರಿಂದ ಇವರು ಹೇಗೆ ಸತ್ತರು ಎನ್ನುವುದೇ ನನಗೆ ತುಂಬಾ ಅಚ್ಚರಿಯ ಸಂಗತಿಯಾಗಿತ್ತು. ಆದರೆ ನನ್ನ ತಾಯಿಯನ್ನು ಅವರು ಎಷ್ಟು ಪ್ರೀತಿಸುತ್ತಿದ್ದರು ಎಂದರೆ, ಅವರೊಮ್ಮೆ ಹೇಳಿದ್ದರು, ನನ್ನನ್ನು ಯಾರೂ ಸಾಯಿಸಲು ಸಾಧ್ಯವಿಲ್ಲ, ಯಾವುದೂ ನನ್ನ ಸಾವಿಗೆ ಕಾರಣವಾಗಲಾರದು. ನಾನು ಸಾಯುವುದಾದರೆ ನಿಮ್ಮ ಅಮ್ಮನಿಂದಲೇ ಎಂದು ನನ್ನ ಹಾಗೂ ನನ್ನ ಸಹೋದರರ ಎದುರು ಹೇಳುತ್ತಿದ್ದರು.

ಕೊನೆಗೂ ಹಾಗೆಯೇ ಆಗಿಹೋಯಿತು. ಅಮ್ಮನ ಜತೆ ಇರುವಾಗಲೇ ಅವರಿಗೆ ಸಾವು ಬಂತು. ಅವರು 1992ರಲ್ಲಿ ನಿಧನರಾದರು ಎಂದು ಪುಸ್ತಕದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net