More

    ಶೂಟ್​ಔಟ್​ ಪ್ರಕರಣ: ಕೊನೆಗೂ ಬಂಧಿಯಾದ ಬಿಜೆಪಿ ಕಾರ್ಯಕರ್ತ

    ಬಲ್ಲಿಯಾ (ಉತ್ತರ ಪ್ರದೇಶ): ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲೇ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಬಲ್ಲಿಯಾದ ಬಿಜೆಪಿ ಮುಖಂಡ ಧೀರೇಂದ್ರ ಸಿಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಶಾಸಕ ಸುರೇಂದ್ರ ಸಿಂಗ್ ನಿಕಟವರ್ತಿಯೆಂದೇ ಗುರುತಿಸಿಕೊಂಡಿರುವ ಧೀರೇಂದ್ರ ಸಿಂಗ್​ ಇದೇ 16ರಂದು ಕೊಲೆ ಮಾಡಿರುವ ಆರೋಪ ಹೊತ್ತಿದ್ದಾನೆ.

    ಪಡಿತರ ಅಂಗಡಿಗಳನ್ನು ಅಧಿಕಾರಿಗಳ ಸುಪರ್ದಿಗೆ ವಹಿಸುವ ಕಾರ್ಯಕ್ರಮವೊಂದರಲ್ಲಿ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಸುರೇಂದ್ರ ಅವರನ್ನು ಗುಂಡುಹಾರಿಸಿ ಕೊಲೆ ಮಾಡಿರುವ ಆರೋಪ ಧೀರೇಂದ್ರ ಮೇಲಿದೆ. ಈತನಿಗೆ ಸಹಕರಿಸಿರುವ ಆರೋಪ ಹೊತ್ತ ಸಂತೋಷ್ ಯಾದವ್ ಮತ್ತು ಮರಜೀತ್ ಯಾದವ್​ ಕೂಡ ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ(ಎಸ್ ಟಿಎಫ್ ) ಬಂಧಿಸಿದೆ.

    ಇದನ್ನೂ ಓದಿ: ಎಗ್ಗಿಲ್ಲದೇ ಸಾಗಿದೆ ದನದ ಮಾಂಸ ಸಾಗಾಟ- ಮಂಗಳೂರಿನಲ್ಲಿ 10 ಟನ್​ ಪತ್ತೆ!

    ಇದರಿಂದಾಗಿ, ಈ ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 10 ಮಂದಿಯನ್ನು ಬಂಧಿಸಲಾಗಿದೆ.

    ಗುಂಡು ಹಾರಿಸಿದ ಕೂಡಲೇ ಧೀರೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದ. ಈ ಪ್ರಕರಣ ಭಾರಿ ಸುದ್ದಿ ಮಾಡುವ ಬೆನ್ನಲ್ಲೇ ಸ್ಥಳೀಯ ಅಧಿಕಾರಿಯನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶ ಹೊರಡಿಸಿದ್ದರು.

    ಘಟನೆಯ ಕುರಿತು ಕಾಂಗ್ರೆಸ್ ನಾಯಕ ಪ್ರೀಯಾಂಕ ಗಾಂಧಿ ಕೂಡ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಬಲ್ಲಿಯಾ ಶೂಟಿಂಗ್ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳಲು ನೆರವಾಗುತ್ತಿದೆ ಎಂದು ಕಿಡಿಕಾರಿದ್ದರು.

    ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ- ಶೂಟಿಂಗ್​ ವೇಳೆ ಹೃದಯಾಘಾತ

    ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ- ಬೆಂಗಳೂರಿನಲ್ಲಿ ನಡೆದ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts